ಯತೀಂದ್ರ ಸಿದ್ದರಾಮಯ್ಯ ANI
ರಾಜ್ಯ

ನಾನೂ ಮಂತ್ರಿಯಾಗುತ್ತೇನೆ, ರಾಹುಲ್ ಗಾಂಧಿ ಮಾತು ಕೊಟ್ಟಿದ್ದಾರೆ: ಯತೀಂದ್ರ ಸಿದ್ದರಾಮಯ್ಯ; Video

ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಾಗಿ ಮಾತು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ನವದೆಹಲಿ: ಡಿಕೆ ಶಿವಕುಮಾರ್ ನೇತೃತ್ವದಲ್ಲಿ ರಚನೆಯಾಗಲಿರುವ ನೂತನ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟಕ್ಕೆ ಯಾರನ್ನೆಲ್ಲಾ ಸೇರಿಸಿಕೊಳ್ಳಬೇಕು ಎಂದು ಹೈಕಮಾಂಡ್ ನಿರ್ಧರಿಸುತ್ತಿದ್ದು ಈ ಮಧ್ಯೆ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಾಗಿ ಮಾತು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ಉಪಮುಖ್ಯಮಂತ್ರಿಯಾಗಲು ಬಯಸುತ್ತೀರಾ ಎಂದು ಕೇಳಿದ್ದಕ್ಕೆ ಇಲ್ಲ ಎಂದು ಉತ್ತರಿಸಿದ ಯತೀಂದ್ರ, ನಾನು ಯಾವುದೇ ನಿರ್ದಿಷ್ಟ ಖಾತೆಗಾಗಿ ಬೇಡಿಕೆ ಇಟ್ಟಿಲ್ಲ ಎಂದರು. ಕಳೆದ ಬಾರಿ ನಾನು ಹೈಕಮಾಂಡ್‌ ಭೇಟಿಯಾದಾಗ ರಾಹುಲ್ ಗಾಂಧಿ ಅವರು ನನ್ನನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಾಗಿ ಮಾತು ಕೊಟ್ಟಿದ್ದರು. ಆದ್ದರಿಂದ ನಾನು ಆಶಾವಾದಿಯಾಗಿದ್ದೇನೆ. ಯಾವುದೇ ಖಾತೆ ಇರಲಿ, ನಾನು ಸಂತೋಷವಾಗಿರುತ್ತೇನೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕಳೆದ ಶನಿವಾರ ಡಿಕೆ ಶಿವಕುಮಾರ್ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿಯಾಗಿರುವ ಶಿವಕುಮಾರ್, ಜೂನ್ 3ರಂದು ನಡೆಯಲಿರುವ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಇಂದು ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡಲು ರಾಷ್ಟ್ರ ರಾಜಧಾನಿಗೆ ತೆರಳಿದ್ದಾರೆ. ಡಿಕೆ ಶಿವಕುಮಾರ್ ಜೊತೆ 10 ರಿಂದ 12 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Hormuz ಜಲಸಂಧಿಯಲ್ಲಿ ಮಹಾ ಸಂಘರ್ಷ: Iran 3 ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕಾ ದಾಳಿ; 'ಕಠಿಣ ಪ್ರತೀಕಾರ'ದ ಶಪಥ ಮಾಡಿದ ಟೆಹ್ರಾನ್!

100 ದಿನಗಳ ಹೊಸ್ತಿಲಲ್ಲಿ ಡಿಕೆಶಿ ಸರ್ಕಾರ: ಸಾಧನೆಗಳ ಪಟ್ಟಿ ಹಿಡಿದು ಕಾಂಗ್ರೆಸ್ ಅಖಾಡಕ್ಕೆ, ‘ಯು-ಟರ್ನ್’ ಅಸ್ತ್ರದೊಂದಿಗೆ ವಿಪಕ್ಷಗಳ ಕೌಂಟರ್‌..!

ಡಿಕೆಶಿಗೆ ಟಕ್ಕರ್ ಕೊಡಲು ಹೊಸ ತಂತ್ರ: AHINDA ಮುರಿದು ‘HINDA’ ಕಟ್ಟಲು ಸಿದ್ದು ಮಾಸ್ಟರ್ ಪ್ಲ್ಯಾನ್, ಮಗನ ಭವಿಷ್ಯಕ್ಕಾಗಿ ಹಳೆಯ ಮಿತ್ರರಿಗೆ ಗೇಟ್‌ಪಾಸ್?

Miss World 2026: ವಿಶ್ವಸುಂದರಿ ಪಟ್ಟ ಮುಡಿಗೇರಿಸಿಕೊಂಡ ಡೊಮಿನಿಕನ್ ರಿಪಬ್ಲಿಕ್‌ನ ಬ್ಯೂಟಿ! ಭಾರತದ ನಿಕಿತಾ ಪೂರ್ವಾಲ್ ಗೆ ನಿರಾಸೆ

ಅರ್ಷದೀಪ್ ಸಿಂಗ್, ಸಮ್ರೀನ್ ಕೌರ್ ನಡುವೆ ವಿಶೇಷವಾದ ಪ್ರೇಮ: ತೋಳುಗಳ ಮೇಲೆ ತಮ್ಮ ಹೆಸರಿನ ಮೊದಲ ಅಕ್ಷರದ ಟ್ಯಾಟೋ! ವೈರಲ್