ಡಿ.ಕೆ ಶಿವಕುಮಾರ್ 
ರಾಜ್ಯ

ಬಿಜೆಪಿ, ಜೆಡಿಎಸ್ ನಿಂದ ಮತ್ತೊಬ್ಬ ಡಿ.ಕೆ ಶಿವಕುಮಾರ್ ಹುಟ್ಟುಹಾಕಲು ಸಾಧ್ಯವಿಲ್ಲ: ಸಿಎಂ

ಪಿಜಿಆರ್ ಸಿಂಧ್ಯಾ, ವಿಶ್ವನಾಥ್, ನಾರಾಯಣ ಗೌಡರು, ಯು.ಕೆ. ಸ್ವಾಮಿ ಅವರು ನನ್ನ ವಿರುದ್ಧ ಚುನಾವಣೆಯಲ್ಲಿ ನಿಂತಿದ್ದರು. ಅವರು ಈಗ ನನ್ನ ಪರವಾಗಿ ನನ್ನ ಜತೆ ನಿಂತಿದ್ದಾರೆ. ಅವರೇನೂ ದಡ್ಡರಾ?

ಕನಕಪುರ: ಈ ಜಿಲ್ಲೆಯಲ್ಲಿ ಮತ್ತೊಬ್ಬ ಡಿ.ಕೆ. ಶಿವಕುಮಾರ್ ನನ್ನು ಹುಟ್ಟುಹಾಕಲು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಸಾಧ್ಯವೇ? ಖಂಡಿತಾ ಇಲ್ಲ. ಇದನ್ನು ಬಿಜೆಪಿ ಹಾಗೂ ದಳದ ಕಾರ್ಯಕರ್ತರು ಮನದಟ್ಟು ಮಾಡಿಕೊಳ್ಳಬೇಕು" ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಶಿವಕುಮಾರ್ ಅವರು ಇದೇ ಮೊದಲ ಬಾರಿಗೆ ಭಾನುವಾರ ತವರು ಕ್ಷೇತ್ರ ಕನಕಪುರದ ವಿವಿಧ ಭಾಗಗಳಿಗೆ ಭೇಟಿ ನೀಡಿ ಜನರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.

ನೀವು ಯಾರನ್ನು ಒಪ್ಪಿಸದಿದ್ದರೂ ನಿಮ್ಮ ಆತ್ಮಸಾಕ್ಷಿ ಒಪ್ಪಬೇಕು. ಪಿಜಿಆರ್ ಸಿಂಧ್ಯಾ, ವಿಶ್ವನಾಥ್, ನಾರಾಯಣ ಗೌಡರು, ಯು.ಕೆ. ಸ್ವಾಮಿ ಅವರು ನನ್ನ ವಿರುದ್ಧ ಚುನಾವಣೆಯಲ್ಲಿ ನಿಂತಿದ್ದರು. ಅವರು ಈಗ ನನ್ನ ಪರವಾಗಿ ನನ್ನ ಜತೆ ನಿಂತಿದ್ದಾರೆ. ಅವರೇನೂ ದಡ್ಡರಾ? ಮತ್ತೊಬ್ಬ ಶಿವಕುಮಾರ್ ಬರುವುದಿಲ್ಲ, ಜನರಿಗೆ ಒಳ್ಳೆಯದಾಗಲಿ ಎಂದು ಅವರು ನನ್ನ ಜತೆ ಕೈ ಜೋಡಿಸಿದ್ದಾರೆ" ಎಂದು ತಿಳಿಸಿದರು.

ನಿಮ್ಮಲ್ಲಿ ವೈಷಮ್ಯ ಇದ್ದರೆ ಮರೆಯಿರಿ. ಈ ಊರಿಗೆ ಒಳ್ಳೆಯದಾಗಲಿ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ಬೇರೆ ಪಕ್ಷದ ಮುಖಂಡರಿಗೆ ಈ ಮೂಲಕ ತಿಳಿಸುತ್ತೇನೆ" ಎಂದು ತಿಳಿಸಿದರು. ನಮ್ಮ ಬದುಕು ಶಾಶ್ವತವಲ್ಲ. ನಾವು ಬಿಟ್ಟು ಹೋಗುವ ಸಾಕ್ಷಿ ಗುಡ್ಡೆಗಳೇ ಶಾಶ್ವತ.

ನಾನು ಕೇವಲ ಎರಡು ವರ್ಷ ಮಾತ್ರ ಸಿಎಂ ಆಗಿರಬೇಕೇ..? ನಿಮ್ಮ ಆಶೀರ್ವಾದದಿಂದ 2028 ರಲ್ಲಿ ಮತ್ತೇ ಗೆಲ್ಲಬೇಕು. ಅದಕ್ಕೆ ನೀವು ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ. ಒಳ್ಳೆ ರೀತಿಯಲ್ಲಿ ಅಧಿಕಾರ ನಡೆಸಿ ಸಾಕ್ಷಿ ಗುಡ್ಡೆಗಳನ್ನು ಬಿಟ್ಟು ಹೋಗೋಣ" ಎಂದು ಕರೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪರೀಕ್ಷಾ ವ್ಯವಸ್ಥೆ ಸುಧಾರಣೆ, ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಟಾಸ್ಕ್ ಫೋರ್ಸ್ ರಚನೆ- ಪ್ರಧಾನಿ ಮೋದಿ ಘೋಷಣೆ! Video

3rd T20I: ಜಿಂಬಾಬ್ವೆ ವಿರುದ್ಧ 35 ರನ್ ಗಳ ಗೆಲುವು, 3-0 ಅಂತರದಿಂದ ಸರಣಿ 'ಕ್ಲೀನ್ ಸ್ವೀಪ್' ಮಾಡಿದ ಭಾರತ!

ಬಿಹಾರ: ಹಿಂಸಾಚಾರಕ್ಕೆ ತಿರುಗಿದ Gen-Z NEET ಪ್ರತಿಭಟನೆ; ಕಲ್ಲು ತೂರಾಟ, BDO Ritesh ತಲೆಬುರುಡೆಗೆ ತೀವ್ರ ಗಾಯ!

'ಸ್ವಲ್ಪ ಸಮಯ ನೀಡಿ': CJPಯ ಮುಂದಿನ ಕಾರ್ಯತಂತ್ರ ಶೀಘ್ರದಲ್ಲೇ ಪ್ರಕಟ- ಅಭಿಜೀತ್ ಡಿಪ್ಕೆ

ಕಲ್ಯಾಣ ಕರ್ನಾಟಕ ಮಂದಿಗೆ ಸಿಹಿ ಸುದ್ದಿ: ಅಗ್ನಿಶಾಮಕ ಇಲಾಖೆಯಲ್ಲಿ 490 ಹುದ್ದೆಗಳ ನೇಮಕಾತಿಗೆ ಸಚಿವ ಪ್ರಿಯಾಂಕ್ ಸೂಚನೆ