ಕಲಬುರಗಿ: ಹೃದಯಾಘಾತದಿಂದ ಕರ್ತವ್ಯ ನಿರತ ನಿರ್ವಾಹಕನೊಬ್ಬ ಮೃತಪಟ್ಟ ಘಟನೆ ಪಟ್ಟಣದ ಡಾ.ಅಂಬೇಡ್ಕರ್ ಸರ್ಕಲ್ ಬಳಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ.
ಕಲಬುರಗಿ ಡಿಪೋ-2ರ ಕಲಬುರಗಿ–ಹರವಾಳ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕೆಕೆಆರ್‌ಟಿಸಿ ಬಸ್‌ನ ನಿರ್ವಾಹಕರಾದ ಮಲ್ಲಯ್ಯ ಸ್ವಾಮಿ ಅವರು ಕರ್ತವ್ಯದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಜೇವರ್ಗಿಯಿಂದ ಹರವಾಳ ಕಡೆಗೆ ಬಸ್ ತೆರಳುತ್ತಿದ್ದ ಸಂದರ್ಭದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಸಮೀಪ ಮಲ್ಲಯ್ಯ ಸ್ವಾಮಿ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಬಸ್ ನಿಲ್ಲಿಸಿ ಅವರನ್ನು ಜೇವರ್ಗಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಪರೀಕ್ಷಿಸಿದ ವೇಳೆ ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಮಲ್ಲಯ್ಯ ಸ್ವಾಮಿ ಅವರು ಜೇವರ್ಗಿ ತಾಲೂಕಿನ ರಾಜವಾಳ ಗ್ರಾಮದ ನಿವಾಸಿಯಾಗಿದ್ದರು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಜೇವರ್ಗಿ ಡಿಪೋ-2ರ ವ್ಯವಸ್ಥಾಪಕ ಕೃಷ್ಣ ಹಾಗೂ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.