ಡಿಕೆ ಶಿವಕುಮಾರ್ 
ರಾಜ್ಯ

ಅಭಿವೃದ್ಧಿ ನಿಧಿ ಹಂಚಿಕೆಯಲ್ಲಿ ತಾರತಮ್ಯ ಮಾಡಬೇಡಿ: ಸಿಎಂ ಡಿ.ಕೆ ಶಿವಕುಮಾರ್ ಗೆ ಜೆಡಿಎಸ್ ಶಾಸಕರ ಮನವಿ

ಅಭಿವೃದ್ಧಿ ನಿಧಿ ಹಂಚಿಕೆ ಮಾಡುವಾಗ ನಮ್ಮ ಪಕ್ಷದ ಶಾಸಕರ ವಿರುದ್ಧ ತಾರತಮ್ಯ ಮಾಡಬೇಡಿ ಎಂದು ನಾವು ಸಿಎಂ ಅವರನ್ನು ಒತ್ತಾಯಿಸಿದ್ದೇವೆ.

ಬೆಂಗಳೂರು: ಅಭಿವೃದ್ಧಿ ನಿಧಿ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ನಡೆದುಕೊಳ್ಳಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಜೆಡಿಎಸ್ ಶಾಸಕರ ನಿಯೋಗ ಮನವಿ ಮಾಡಿದೆ.

ಕನಕಪುರದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಶಿವಕುಮಾರ್, ಜೆಡಿಎಸ್ ಕಾರ್ಯಕರ್ತರಿಗೆ ಮುಕ್ತ ಆಹ್ವಾನ ನೀಡಿದ ಒಂದು ದಿನದ ನಂತರ ಸಿಎಂ ಅವರನ್ನು ಭೇಟಿ ಮಾಡಿದ ನಿಯೋಗ ಮನವಿ ಸಲ್ಲಿಸಿದೆ. ನಾನು ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ ಸಿಎಂ ಅಲ್ಲ. ನನ್ನ ಬಾಗಿಲುಗಳು ಜೆಡಿಎಸ್ ಸದಸ್ಯರಿಗೂ ತೆರೆದಿರುತ್ತವೆ ಎಂದು ಶಿವಕುಮಾರ್ ಹೇಳಿದರು.

ಶಾಸಕ ಸಿ.ಬಿ. ಸುರೇಶ್ ಬಾಬು ನೇತೃತ್ವದ ಜೆಡಿ(ಎಸ್) ನಿಯೋಗದಲ್ಲಿ ಕರೆಮ್ಮ ನಾಯಕ್, ಎ. ಮಂಜು, ಜಿ.ಟಿ. ಹರೀಶ್ ಗೌಡ, ಸ್ವರೂಪ್ ಪ್ರಕಾಶ್, ಸಿ.ಎನ್. ಬಾಲಕೃಷ್ಣ, ವೆಂಕಟಶಿವ ರೆಡ್ಡಿ ಮತ್ತು ನೇಮಿರಾಜ್ ನಾಯಕ್ ಇದ್ದರು.

ಅಭಿವೃದ್ಧಿ ನಿಧಿ ಹಂಚಿಕೆ ಮಾಡುವಾಗ ನಮ್ಮ ಪಕ್ಷದ ಶಾಸಕರ ವಿರುದ್ಧ ತಾರತಮ್ಯ ಮಾಡಬೇಡಿ ಎಂದು ನಾವು ಸಿಎಂ ಅವರನ್ನು ಒತ್ತಾಯಿಸಿದ್ದೇವೆ. ಆದರೆ ಈ ರೀತಿ ಆಗುವುದಿಲ್ಲ ಎಂದು ಸಿಎಂ ನಮಗೆ ಭರವಸೆ ನೀಡಿದ್ದಾರೆ ಎಂದು ಸುರೇಶ್ ಬಾಬು ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನವದೆಹಲಿ: ಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ರಾಜ್ಯದ ಸಂಸದರ ಸಭೆ; ಕೇಂದ್ರ ಸರ್ಕಾರದ ಮುಂದೆ ಬಾಕಿ ಇರುವ 13 ಅಂಶಗಳ ಮಂಡನೆ!

'ಕಾಕ್ರೋಚ್​' ಪಾರ್ಟಿಗೆ 1 ಕೋಟಿ ರೂ ದೇಣಿಗೆ, ಉಚಿತ ಕಾನೂನು ನೆರವು ಘೋಷಿಸಿದ ಕಪಿಲ್‌ ಸಿಬಲ್!

CJP ಪ್ರತಿಭಟನೆಯಲ್ಲಿ 2,873 ಕ್ರಿಮಿನಲ್ ಗಳು ಭಾಗಿ: ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ ದೆಹಲಿ ಪೊಲೀಸರು!

ರಾಜ್ಯದ ರೇಷನ್ ಅಂಗಡಿಗಳಲ್ಲಿ 'ಸರ್ಕಾರಿ ನ್ಯಾಯಬೆಲೆ ಅಂಗಡಿ' ಸಿನಿಮಾ ಪ್ರೀಮಿಯರ್ ಶೋ ಟಿಕೆಟ್ ಮಾರಾಟ! ಜನರ ಆಕ್ರೋಶ

ತನಗಿಂತ 9 ವರ್ಷ ಕಿರಿಯನಾದ Team India ಕ್ರಿಕೆಟಿಗನ ಜೊತೆ ಮೃಣಾಲ್ ಠಾಕೂರ್ ಡೇಟಿಂಗ್? ಸಿಕ್ಕಿಬಿದ್ದ ನಟಿ, Video!