ಪ್ರಿಯಾಂಕಾ, ಮೋಹನ್ ಹಾಗೂ ಬಾಲಕಿ 
ರಾಜ್ಯ

ಬಾಲಕಿ ಸಾವಿಗೆ ಬಿಗ್ ಟ್ವಿಸ್ಟ್: ಕಾರಲ್ಲಿ ಐಸ್‌ಕ್ರೀಂ ಚೆಲ್ಲಿದ್ದಕ್ಕೆ ಪ್ರಿಯಕರನ ಜತೆ ಸೇರಿ ಹೆತ್ತ ಮಗಳನ್ನೇ ಕೊಂದು ಕಥೆಕಟ್ಟಿದ್ದ ಪ್ರಿಯಾಂಕಾ ಬಂಧನ!

ಪ್ರಕರಣವನ್ನು ಭೇದಿಸಿರುವ ಕಾಡುಗೋಡಿ ಠಾಣೆ ಪೊಲೀಸರು ಬಾಲಕಿ ತಾಯಿಯ ಪ್ರಿಯಕರನನ್ನು ಈಗಾಗಲೇ ಬಂಧಿಸಿದ್ದು, ಇಂದು ತಾಯಿ ಪ್ರಿಯಾಂಕಾಗಳನ್ನು ಬಂಧಿಸಿದ್ದಾರೆ.

ಬೆಂಗಳೂರು: ಕಳೆದ ಮಾರ್ಚ್​​ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ 6 ವರ್ಷದ ಪಿ. ವೆನ್ನೆಲ ಹೆಸರಿನ ಬಾಲಕಿಯ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಐಷಾರಾಮಿ ಕಾರಿನಲ್ಲಿ ಐಸ್‌ಕ್ರೀಂ ಚೆಲ್ಲಿದ್ದಕ್ಕೆ ಪ್ರಿಯಕರನ ಜತೆ ಸೇರಿ ಹೆತ್ತ ಮಗಳನ್ನೇ ಕೊಂದು ಕಥೆಕಟ್ಟಿದ್ದ ಪ್ರಿಯಾಂಕಾಳನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣವನ್ನು ಭೇದಿಸಿರುವ ಕಾಡುಗೋಡಿ ಠಾಣೆ ಪೊಲೀಸರು ಬಾಲಕಿ ತಾಯಿಯ ಪ್ರಿಯಕರನನ್ನು ಈಗಾಗಲೇ ಬಂಧಿಸಿದ್ದು, ಇದು ತಾಯಿ ಪ್ರಿಯಾಂಕಾಳನ್ನು ಬಂಧಿಸಿದ್ದಾರೆ.

ಇನ್ನು ಪೊಲೀಸ್ ತನಿಖೆ ವೇಳೆ ಭಯಾನಕ ಸತ್ಯ ಬಯಲಾಗಿದ್ದು, ಐಷಾರಾಮಿ ಕಾರಿನಲ್ಲಿ ಬಾಲಕಿ ಪಿ ವೆನ್ನೆಲಾ ಐಸ್​​ಕ್ರೀಂ ಚೆಲ್ಲಿದ್ದಕ್ಕೆ ಸಿಟ್ಟಾದ ತಾಯಿಯ ಲಿವ್​ಇನ್​ ಪಾರ್ಟನರ್​​, ಆಕೆಯ ಹೊಟ್ಟೆಗೆ ಮೊಣಕೈನಿಂದ ಗುದ್ದಿ, ಬಾಯಿ ಮುಚ್ಚಿ ಉಸಿರುಗಟ್ಟಿಸಿದ್ದಾನೆ.

ಸದ್ಯ ಆರೋಪಿ ​​10 ದಿನಗಳ ಕಾಲ ಪೊಲೀಸರ ವಶದಲ್ಲಿದ್ದು. ತಾಯಿ ಪ್ರಿಯಾಂಕಾಳನ್ನು ಪೊಲೀಸರು ಇಂದು ವಶಕ್ಕೆ ಪಡೆದಿದ್ದಾರೆ.

ಯಾರು ಈ ಬಾಲಕಿ?

ಬಾಲಕಿ ವೆನ್ನೆಲಾ ದಾವಣಗೆರೆಯ ಶಿಕ್ಷಣ ತಜ್ಞ ಪ್ರವೀಣ್ ಹಾಗೂ ವಕೀಲೆ ಪ್ರಿಯಾಂಕಾರ ಪುತ್ರಿ. ಪ್ರಿಯಾಂಕಾ ತನ್ನ ಕಾಲೇಜು ಸ್ನೇಹಿತ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಮೋಹನ್ ಜೊತೆ ಸಂಬಂಧ ಬೆಳೆಸಿದ್ದರು. ಈ ಹಿನ್ನೆಲೆ ಪತಿಯಿಂದ ದೂರವಾಗಿ ಬೆಂಗಳೂರಿನ ಪೂರ್ವ ಭಾಗದ ಐಷಾರಾಮಿ ವಿಲ್ಲಾದಲ್ಲಿ ಆತನೊಂದಿಗೆ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದರು ಎನ್ನಲಾಗಿದೆ.

ಮೋಹನ್​ಗೂ ಮದುವೆಯಾಗಿತ್ತು

ಆರೋಪಿ ಮೋಹನ್‌ಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೆ ತನ್ನ ಕುಟುಂಬವನ್ನು ತೊರೆದು ಆತ ಪ್ರಿಯಾಂಕಾ ಜೊತೆ ವಾಸಿಸುತ್ತಿದ್ದ. ಪ್ರಿಯಾಂಕಾ ತನ್ನ ಪತಿ ಪ್ರವೀಣ್‌ಗೆ ವಿಚ್ಛೇದನ ಪತ್ರಕ್ಕೆ ಸಹಿ ಹಾಕುವಂತೆ ಬೆದರಿಕೆ ಹಾಕಿದ್ದಳು ಎನ್ನಲಾಗಿದೆ.

ವೆನ್ನಿಲಾ ತಂದೆಯಿಂದ ದೂರು

ಮಗಳ ಸಾವಿನ ನಂತರ ಪತಿ ಪ್ರವೀಣ್ ಜೂನ್ 4 ರಂದು ಕಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಿಯಾಂಕಾ ಮತ್ತು ಮೋಹನ್ ವಿರುದ್ಧ ಕೊಲೆ ದೂರು ದಾಖಲಿಸಿದ್ದರು. ತನ್ನ ಮತ್ತು ಮೋಹನ್ ಅವರ ಹೊಸ ಖಾಸಗಿ ಜೀವನಕ್ಕೆ 6 ವರ್ಷದ ಮಗಳು ವೆನ್ನೆಲಾ ಅಡ್ಡಿಯಾಗಿದ್ದಾಳೆ ಎಂಬ ಕಾರಣಕ್ಕೆ ಇಬ್ಬರೂ ಸೇರಿ ಮಗುವನ್ನು ಹತ್ಯೆ ಮಾಡಿದ್ದಾರೆ ಎಂದು ತಂದೆ ಆರೋಪಿಸಿದ್ದರು. ಸದ್ಯ ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯದ (FSL) ನೆರವಿನೊಂದಿಗೆ ಕಾರನ್ನು ತಪಾಸಣೆಗೆ ಒಳಪಡಿಸಿದ್ದು, ಹೆಚ್ಚಿನ ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪರೀಕ್ಷಾ ವ್ಯವಸ್ಥೆ ಸುಧಾರಣೆ, ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಟಾಸ್ಕ್ ಫೋರ್ಸ್ ರಚನೆ- ಪ್ರಧಾನಿ ಮೋದಿ ಘೋಷಣೆ! Video

ಭಾರತದಲ್ಲಿ ಮುಸ್ಲಿಮರು PM, CM ಆಗದಿರುವುದಕ್ಕೆ ಕಾರಣ ಏನು ಗೊತ್ತ? Owaisi ಮುಸ್ಲಿಮರ ದೊಡ್ಡ ಶತ್ರು: ಮೌಲಾನಾ ಸಾಜಿದ್

'ಪ್ರಧಾನ್ ರಾಜೀನಾಮೆಯಿಂದ ಭಾರತ ಅಸ್ಥಿರಗೊಳಿಸುವ ವಿದೇಶಿ ಶಕ್ತಿಗಳ ಸಂಚು ವಿಫಲ': ಕೈಲಾಶ್ ವಿಜಯವರ್ಗೀಯ

UP ಚುನಾವಣೆ: ಈಗಲೇ ಮೈತ್ರಿ ಮಾತುಕತೆ ಆರಂಭಿಸೋಣ; ಚುನಾವಣೆ ಬಳಿಕ ಅತ್ತರೆ ಪ್ರಯೋಜನ ಇಲ್ಲ- ಅಖಿಲೇಶ್ ಗೆ ಓವೈಸಿ ಆಫರ್!

ಮಹಾ'ಸಂಚಲನ: ರಾಷ್ಟ್ರ ರಾಜಕಾರಣಕ್ಕೆ ದೇವೇಂದ್ರ ಫಡ್ನವಿಸ್ ಶಿಫ್ಟ್?