ಸಿದ್ದರಾಮಪ್ಪ ನಿವಾಸ - ಅಲೋಕ್ ಕುಮಾರ್ 
ರಾಜ್ಯ

ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಸಾವಿಗೆ ಡಿಜಿಪಿ ಅಲೋಕ್ ಕುಮಾರ್ ಕಿರುಕುಳ ಕಾರಣ ಎಂದ ಪತ್ನಿ!

ಇಂದು ಧಾರವಾಡ ಹೊಸ ಬಸ್ ನಿಲ್ದಾಣದ ಬಳಿ ಇರುವ ಕಾರಾಗೃಹದ ವಸತಿ ಗೃಹದಲ್ಲಿ ಸಿದ್ಧರಾಮಪ್ಪ ಅವರು ಅತ್ಮಹತ್ಯೆಗೆ ಶರಣಾಗಿದ್ದಾರೆ.

ಧಾರವಾಡ: ಸೇವೆಯಿಂದ ಅಮಾನತುಗೊಂಡಿದ್ದ ಧಾರವಾಡ ಕೇಂದ್ರ ಕಾರಾಗೃಹದ ಜೈಲರ್ ಸಿದ್ಧರಾಮಪ್ಪ ವಡ್ಡರ್(37) ಅವರು ಶುಕ್ರವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಂದು ಧಾರವಾಡ ಹೊಸ ಬಸ್ ನಿಲ್ದಾಣದ ಬಳಿ ಇರುವ ಕಾರಾಗೃಹದ ವಸತಿ ಗೃಹದಲ್ಲಿ ಸಿದ್ಧರಾಮಪ್ಪ ಅವರು ಅತ್ಮಹತ್ಯೆಗೆ ಶರಣಾಗಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆ ಅಮಾನತ್ತಾಗಿದ್ದ ಸಿದ್ಧರಾಮಪ್ಪ ಅವರನ್ನು ಮೈಸೂರು ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ ಇಂದು ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಿದ್ದರಾಮಪ್ಪ ಅವರ ಪತ್ನಿ ಲಕ್ಷ್ಮಿ ಅವರು, ತಮ್ಮ ಪತಿ ಸಾವಿಗೆ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಅವರ ಕಿರುಕುಳವೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಅಲೋಕ್ ಕುಮಾರ್ ಕಿರುಕುಳದಿಂದ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲೋಕ್ ಕುಮಾರ್ ಸರ್ ಅವರೇ ನನ್ನ‌ ಗಂಡನ ಜೀವ ಪಡೆದಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ನನ್ನ ಪತಿ ಸಸ್ಪೆಂಡ್ ‌ಮಾಡಿದ್ದಾರೆ, ಜೈಲಿಗೆ ಹಾಕ್ತಾರೆ ಅನ್ನೋ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರನ್ನು ಸಸ್ಪೆಂಡ್ ‌ಮಾಡಿ ಮೈಸೂರಿಗೆ ವರ್ಗಾವಣೆ ‌ಮಾಡಿದ್ರು, ಮೈಸೂರಿಗೆ ಕರ್ತವ್ಯಕ್ಕೆ ಹಾಜರಾಗಲು ಹೊರಟ್ಟಿದ್ದರು. ಆದ್ರೆ ತಂದೆ, ತಾಯಿ ಮುಖ ನೋಡಿ ಹೋಗ್ತಿನಿ ಅಂತ ಹೀಗೆ ಮಾಡಿಕೊಂಡರು. ತಮ್ಮ‌ ಮೇಲೆ ಕ್ರಮ ಆಗುತ್ತೇ ಏನ್ ಮಾಡಬೇಕು ಅಂತಿದ್ರು. ಯಾವಾಗಲೂ ನನ್ನ ಅಲೋಕ್ ‌ಕುಮಾರ್ ಜೈಲಿಗೆ ‌ಕಳಿಸ್ತಾರೆ ಅಂತಿದ್ರು ಎಂದು ಅಲೋಕ್ ಕುಮಾರ್ ಅವರ ಭಯದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಜೈಲಾಧಿಕಾರಿ ಪತ್ನಿ ಲಕ್ಷ್ಮಿ ಆರೋಪಿಸಿದ್ದಾರೆ.

ಅಮಾನತ್ತಾಗಿದ್ದ ಜೈಲರ್​!

ಜೈಲರ್​ ಸಿದ್ಧರಾಮಪ್ಪ ಅವರನ್ನು ಕಳೆದ ಎರಡು ತಿಂಗಳ ಹಿಂದೆ ಜೈಲಿನಲ್ಲಿ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತ್ತು ಮಾಡಲಾಗಿತ್ತು. ಬಳಿಕ ಜೈಲರ್​ ಸಿದ್ದರಾಮಪ್ಪ ಅವರನ್ನು ಮೈಸೂರಿಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ಇನ್ನು ಮೈಸೂರಿಗೆ ಹೋಗಿ ವರದಿ ಮಾಡಿಕೊಂಡಿರಲಿಲ್ಲ. ಆದ್ರೆ, ಜೈಲರ್​ ಸಿದ್ದರಾಮಪ್ಪ ಇಂದು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಮಗಳನ್ನು ಕ್ಷಮಿಸಿ ಮೋದಿಜಿ ಹೊಸ ಜೀವನ ಕೊಟ್ಟಿದ್ದಾರೆ, ಮಕ್ಕಳಿಗೆ Instagram, Facebook ಬೇಡ': ಪ್ರಧಾನಿ ವಿರುದ್ಧ ನಿಂದನೆ ಮಾಡಿದ ಬಾಲಕಿಯ ತಾಯಿ

ಕಾವೇರಿ ಕಗ್ಗಂಟಿಗೆ ಸರ್ವಪಕ್ಷ ಒಗ್ಗಟ್ಟು: 'ರಾಜಕೀಯಕ್ಕಿಂತ ರಾಜ್ಯದ ಹಿತ ಮುಖ್ಯ' ಎಂದ CM ಡಿ.ಕೆ. ಶಿವಕುಮಾರ್

ತೀವ್ರಗೊಂಡ ಗಾಯದ ನೋವು: ಶ್ರೀಲಂಕಾ ಟೆಸ್ಟ್ ಸರಣಿಯಿಂದ ಜಸ್ಪ್ರೀತ್ ಬುಮ್ರಾ ಔಟ್

ಮಧ್ಯಪ್ರಾಚ್ಯ ರಾಷ್ಟ್ರಗಳ ಮನವಿಗೆ ಮಣಿದ Trump: ಕೊನೆ ಕ್ಷಣದಲ್ಲಿ Iran ಮೇಲಿನ ದಾಳಿಗೆ ಬ್ರೇಕ್‌; ಒಪ್ಪಂದವಾದರೆ ಯುದ್ಧ ಅಂತ್ಯ, ಇಲ್ಲದಿದ್ದರೆ ಭಾರೀ ದಾಳಿ ಎಚ್ಚರಿಕೆ..!

'ನೀರು-ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ'; ನಿಮ್ಮ ದುರ್ವರ್ತನೆಯಿಂದಲೇ ಸಿಂಧು ಜಲ ಒಪ್ಪಂದ ಅಮಾನತು: ಪಾಕಿಸ್ತಾನಕ್ಕೆ ಭಾರತ ತಿರುಗೇಟು