ಇಂದಿರಾ ಲಂಕೇಶ್ 
ರಾಜ್ಯ

ಪಿ.ಲಂಕೇಶ್ ಪತ್ನಿ, ಲೇಖಕಿ ಇಂದಿರಾ ಲಂಕೇಶ್ ನಿಧನ; ಸಿಎಂ ಡಿಕೆಶಿ, ಮಾಜಿ ಸಿಎಂ ಸಿದ್ದರಾಮಯ ಸಂತಾಪ

ಇಂದಿರಾ ಲಂಕೇಶ್ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ, ಸಾಹಿತ್ಯ ಹಾಗೂ ಚಲನಚಿತ್ರ ರಂಗದ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

ಬೆಂಗಳೂರು: ವಯೋಸಹಜ ಕಾಯಿಲೆಯಿಂದ, ಹಿರಿಯ ಪತ್ರಕರ್ತ ಹಾಗೂ ಖ್ಯಾತ ಬರಹಗಾರ ದಿ. ಪಿ. ಲಂಕೇಶ್ ಪತ್ನಿ, ಲೇಖಕಿ ಶ್ರೀಮತಿ ಇಂದಿರಾ ಲಂಕೇಶ್(84) ಅವರು ಸೋಮವಾರ ನಿಧನರಾಗಿದ್ದಾರೆ.

ಇಂದು ಬೆಳಗ್ಗೆ ಬೆಂಗಳೂರಿನ ರಾಜಾಜಿನಗರದಲ್ಲಿರುವ ತಮ್ಮ ನಿವಾಸದಲ್ಲಿ ಇಂದಿರಾ ಅವರು ಕೊನೆಯುಸಿರೆಳೆದಿದ್ದು, ಅವರ ನಿಧನದಿಂದ ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಮತ್ತೊಂದು ಮಹತ್ವದ ಕೊಂಡಿ ಕಳಚಿದಂತಾಗಿದೆ.

ಇಂದಿರಾ ಅವರು ಪುತ್ರಿ ಕವಿತಾ ಲಂಕೇಶ್(ಚಿತ್ರನಿರ್ದೇಶಕಿ) ಹಾಗೂ ಪುತ್ರ ಇಂದ್ರಜಿತ್ ಲಂಕೇಶ್(ನಿರ್ದೇಶಕ ಹಾಗೂ ಪತ್ರಕರ್ತ) ಸೇರಿದಂತೆ ಅಪಾರ ಬಂಧು-ಮಿತ್ರರು ಮತ್ತು ಅಭಿಮಾನಿ ಬಳಗವನ್ನು ಅಗಲಿದ್ದಾರೆ.

ಇನ್ನು ಇಂದಿರಾ ಲಂಕೇಶ್ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ, ಸಾಹಿತ್ಯ ಹಾಗೂ ಚಲನಚಿತ್ರ ರಂಗದ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ 'ಲಂಕೇಶ್ ಪತ್ರಿಕೆ'ಯ ಆರಂಭದ ದಿನಗಳಿಂದಲೂ ಇಂದಿರಾ ಲಂಕೇಶ್ ಅವರು ಪತಿ ಪಿ. ಲಂಕೇಶ್ ಅವರಿಗೆ ಬೆನ್ನೆಲುಬಾಗಿ ನಿಂತಿದ್ದರು. ಕೇವಲ ವೈವಾಹಿಕ ಜೀವನದಲ್ಲಷ್ಟೇ ಅಲ್ಲದೆ, ಪತ್ರಿಕೆಯ ಆಡಳಿತ, ಮುನ್ನಡೆ ಹಾಗೂ ಪ್ರಕಾಶನದ ಜವಾಬ್ದಾರಿಯನ್ನು ತೆರೆಮರೆಯಲ್ಲಿ ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ಇವರದ್ದಾಗಿದೆ.

2000 ಇಸವಿಯಲ್ಲಿ ಪಿ. ಲಂಕೇಶ್ ಅವರ ನಿಧನದ ನಂತರ ಮತ್ತು ತದನಂತರದ ದಿನಗಳಲ್ಲಿ ಹಿರಿಯ ಪುತ್ರಿ, ದಿ. ಗೌರಿ ಲಂಕೇಶ್ ಅವರ ಅಗಲಿಕೆಯ ನಂತರವೂ ಧೃತಿಗೆಡದ ಇಂದಿರಾ ಅವರು, ಕುಟುಂಬದ ಸಾಹಿತ್ಯಿಕ ಮತ್ತು ಪತ್ರಿಕೋದ್ಯಮದ ಪರಂಪರೆಯನ್ನು ಮುನ್ನಡೆಸಿಕೊಂಡು ಬಂದಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ-ಇರಾನ್ ಶಾಂತಿ ಒಪ್ಪಂದ: ಕಚ್ಚಾ ತೈಲ ಬೆಲೆ ಭಾರೀ ಇಳಿಕೆ; ಪೆಟ್ರೋಲ್, ಡೀಸೆಲ್ ದರ ಕಮ್ಮಿ ಮಾಡ್ತಾರಾ ಮೋದಿ?

ಇಂದಿರಾ ಗಾಂಧಿ ಈಗ ಬದುಕಿದ್ರೆ BJP ಬ್ಯಾನ್ ಮಾಡ್ತಿದ್ರು! ವಿವಾದದ ಕಿಡಿ ಹೊತ್ತಿಸಿದ ಅಶೋಕ್ ಗೆಹ್ಲೋಟ್, ಕೇಸರಿ ನಾಯಕರ ತಿರುಗೇಟು Video

ಒಂಟಿಗಣ್ಣಿನಿಂದ ಕಣ್ಣೀರು ಸುರಿಸುತ್ತಿದ್ದ ಬಾಲಕೃಷ್ಣಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಹತಾಶೆ: ಆರ್ ಅಶೋಕ್ ತಿರುಗೇಟು

ಅಮೆರಿಕ-ಇರಾನ್ ಶಾಂತಿ ಒಪ್ಪಂದ 'ಈಗ ಸಂಪೂರ್ಣ: ಜೂನ್ 19 ರಂದು ಸಹಿ ಹಾಕಿದ ಬಳಿಕ ಹಾರ್ಮುಜ್ ರೀ ಓಪನ್- ಡೊನಾಲ್ಡ್ ಟ್ರಂಪ್ ಘೋಷಣೆ!

Stanford Graduation Ceremony: ಗೂಗಲ್ CEO ಸುಂದರ್ ಪಿಚೈ ವೇದಿಕೆ ಏರುತ್ತಿದ್ದಂತೆಯೇ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು! Video

SCROLL FOR NEXT