ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಿರುವ ಸಿದ್ದರಾಮಯ್ಯನವರು ರಾಜಕೀಯ ಕೆಲಸ, ಒತ್ತಡಗಳಿಂದ ಕೊಂಚ ನಿರಾಳರಾಗಿದ್ದಾರೆ. ಬೆಂಗಳೂರಿನ ಗಾಂಧಿ ಬಜಾರ್‌ನಲ್ಲಿರುವ ಐತಿಹಾಸಿಕ ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿ, ಅಲ್ಲಿನ ಪ್ರಸಿದ್ಧ ಮಸಾಲೆ ದೋಸೆ, ಉಪ್ಪಿಟ್ಟು ಮತ್ತು ರವೆ ವಡೆಯನ್ನು ಸವಿದಿದ್ದಾರೆ. ಅವರ ಈ ಭೇಟಿಯು ಅಲ್ಲಿದ್ದ ಗ್ರಾಹಕರಿಗೆ ಅಚ್ಚರಿಯನ್ನುಂಟು ಮಾಡಿತು.
ಸಿದ್ದರಾಮಯ್ಯನವರು ತಿಂಡಿ-ತಿನಿಸು ಸೇವನೆ ಪ್ರಿಯರು. ಊರು-ಪರವೂರುಗಳಿಗೆ ಹೋದಾಗ ಅಲ್ಲಿ ಊಟ-ತಿಂಡಿಗಳನ್ನು ಅದು ಸಸ್ಯಾಹಾರವೇ ಆಗಿರಲಿ, ಮಾಂಸಾಹಾರವೇ ಆಗಿರಲಿ ಖುಷಿಯಿಂದ ಎಂಜಾಯ್ ಮಾಡಿಕೊಂಡು ಸವಿಯುತ್ತಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿದಾಗ, ಹೋಟೆಲ್‌ನಲ್ಲಿದ್ದ ಜನರು ಅವರನ್ನು ಉತ್ಸಾಹದಿಂದ ಬರಮಾಡಿಕೊಂಡರು. ಸಾರ್ವಜನಿಕರು ಹಾಗೂ ಗ್ರಾಹಕರು ಅವರೊಂದಿಗೆ ಕೆಲ ಹೊತ್ತು ಮಾತನಾಡಿ ಸೆಲ್ಫಿಗಳನ್ನು ತೆಗೆದುಕೊಂಡು ತಮ್ಮ ಸಂತಸವನ್ನು ಹಂಚಿಕೊಂಡರು.