ಚೇತನ್ ಅಹಿಂಸಾ 
ರಾಜ್ಯ

ಕೃಷಿಭೂಮಿ ಹಾನಿ ಮಾಡಿ ಬಿಡದಿ ಟೌನ್ ಶಿಪ್ ಮಾಡುವ ಬದಲು ಸರ್ಕಾರ ಕಲ್ಯಾಣ ಕರ್ನಾಟಕದಂತಹ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡಲಿ: ಚೇತನ್ ಅಹಿಂಸಾ-Video

ಡಿ.ಕೆ.ಶಿವಕುಮಾರ್​ ಅವರು ಬಿಡದಿ ಟೌನ್​ಷಿಪ್​ನಲ್ಲಿ ರೈತರ ಜಮೀನನ್ನು ಕಬಳಿಸಿ, ಕಾಂಕ್ರೀಟ್​ ಕಾಡು ಮಾಡಲು ಹೊರಟಿದ್ದಾರೆ ಎಂದು ಚೇತನ್ ಅಹಿಂಸಾ ಆರೋಪಿಸಿದ್ದಾರೆ.

ಬೆಂಗಳೂರು ಸುತ್ತಮುತ್ತ ಫಲವತ್ತಾದ ಕೃಷಿಭೂಮಿಯನ್ನು ಕಸಿದುಕೊಂಡು ನಗರಾಭಿವೃದ್ಧಿ ಯೋಜನೆಗಳನ್ನು ವಿಸ್ತರಿಸುವ ಬದಲ, ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಪ್ರದೇಶಗಳ ಅಭಿವೃದ್ಧಿಗೆ ಗಮನ ಕೊಡಬೇಕು ಎಂದು ಕನ್ನಡ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟೌನ್ ಶಿಪ್ ಹೆಸರಿನಲ್ಲಿ ಸರ್ಕಾರ ರೈತರ 9,600 ಎಕರೆ ಜಮೀನು ಕಬಳಿಸಲು ನೋಡುತ್ತಿದೆ. ಡಿ.ಕೆ.ಶಿವಕುಮಾರ್​ ಅಂತ ಅಲ್ಲ. ಕಾಂಗ್ರೆಸ್​ನಲ್ಲಿ ಎಂಎಲ್​​ಎ, ಎಂಪಿ ಯಾರಿಗೂ ದೂರದೃಷ್ಟಿ ಇಲ್ಲ. ಕರ್ನಾಟಕವನ್ನು ಅಭಿವೃದ್ಧಿ ಮಾಡಬೇಕು ಎನ್ನುವುದು ಯಾರ ಮನಸ್ಸಿನಲ್ಲಿಯೂ ಇದ್ದಂತಿಲ್ಲ, ಎಲ್ಲವನ್ನೂ ವ್ಯಾಪಾರ ದೃಷ್ಟಿಯಿಂದ ನೋಡುತ್ತಿದ್ದಾರೆ ಎಂದಿದ್ದಾರೆ.

ಡಿ.ಕೆ.ಶಿವಕುಮಾರ್​ ಅವರು ಬಿಡದಿ ಟೌನ್​ಷಿಪ್​ನಲ್ಲಿ ರೈತರ ಜಮೀನನ್ನು ಕಬಳಿಸಿ, ಕಾಂಕ್ರೀಟ್​ ಕಾಡು ಮಾಡಲು ಹೊರಟಿದ್ದಾರೆ. ಬೆಂಗಳೂರು ನಾಶ ಮಾಡಿದ್ದು ಸಾಕಾಗಲ್ಲ ಎಂದು ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮಧ್ಯಮ ಕರ್ನಾಟಕ, ಹಳೆ ಮೈಸೂರು ನಾಶವಾಗ್ತಿದೆ. ಎಲ್ಲವನ್ನೂ ನೆಗ್ಲೆಕ್ಟ್​ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Fact Check: ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಮೋಹನ್ ಭಾಗವತ್ ಪ್ರತಿಕ್ರಿಯೆ ವಿಡಿಯೋ ಫೇಕ್; ಗೃಹ ಸಚಿವರಿಂದಲೇ ಫ್ಯಾಕ್ಟ್ ಚೆಕ್

NEET UG 2026: 'ಲೀಕ್' ತಡೆಯಲು ಮರು ಪರೀಕ್ಷೆ ಮುಗಿಯುವವರೆಗೆ ಟೆಲಿಗ್ರಾಮ್ ಆ್ಯಪ್ ನಿಷೇಧ; ಇಲ್ಲಿದೆ ಕಾರಣ

ಅಭಿಷೇಕ್ ಬ್ಯಾನರ್ಜಿಗೆ ಕೇವಲ 2 ಗಂಟೆಗಳ ನೋಟಿಸ್ ನೀಡಿದ ಸ್ಪೀಕರ್! ಇಲ್ಲಿದೆ ಕಾರಣ

ಕಾರವಾರ: ಅಧಿಕಾರಿಗಳಿಂದ ಮಿಡ್ ನೈಟ್ ಕಾರ್ಯಾಚರಣೆ; ಜಿಂಕೆ ಬೇಟೆಗೆ ಬಂದಿದ್ದ ಗೋವಾ ಸರ್ಕಾರಿ ನೌಕರನ ಬಂಧನ!

Bidadi Township: ಕೆಲವರ ಮಾತು ಕೇಳಿ ಯೋಜನೆ ಕೈ ಬಿಡಲ್ಲ- ಸಚಿವ ಯತೀಂದ್ರ ಸಿದ್ದರಾಮಯ್ಯ!

SCROLL FOR NEXT