ಸಂಗ್ರಹ ಚಿತ್ರ 
ರಾಜ್ಯ

ದುಬಾರೆ ದುರಂತ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ: ಆನೆ ಶಿಬಿರಗಳಿಗೆ ಹೊಸ ರೂಲ್ಸ್‌; ಪ್ರವಾಸಿಗರಿಗೆ 30 ಅಡಿ ಅಂತರ ಕಡ್ಡಾಯ, ಮುಟ್ಟುವುದು-ಆಹಾರ ನೀಡುವುದು ಸಂಪೂರ್ಣ ನಿಷೇಧ..!

ಮೇ 19ರಂದು ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ತಮಿಳುನಾಡಿನ ಪ್ರವಾಸಿಗರೊಬ್ಬರು ಮೃತಪಟ್ಟ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸಲು ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ.

ಬೆಂಗಳೂರು: ರಾಜ್ಯದ ಆನೆ ಶಿಬಿರಗಳು, ಸೆರೆಯಲ್ಲಿರುವ ಆನೆಗಳ ಕೇಂದ್ರಗಳು ಹಾಗೂ ಸಾರ್ವಜನಿಕ ವೀಕ್ಷಣಾ ಕೇಂದ್ರಗಳಿಗೆ ಕರ್ನಾಟಕ ಅರಣ್ಯ ಇಲಾಖೆ ಮೊದಲ ಬಾರಿಗೆ ಸಮಗ್ರ ‘ಕರ್ನಾಟಕ ಆನೆ ಶಿಬಿರ ಸುರಕ್ಷತಾ ಪ್ರೋಟೋಕಾಲ್’ ಅನ್ನು ಜಾರಿಗೆ ತಂದಿದೆ.

ಮೇ 19ರಂದು ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ತಮಿಳುನಾಡಿನ ಪ್ರವಾಸಿಗರೊಬ್ಬರು ಮೃತಪಟ್ಟ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸಲು ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ.

ಈ ಹೊಸ ನಿಯಮಗಳ ಪ್ರಕಾರ, ಪ್ರವಾಸಿಗರು ಇನ್ನು ಮುಂದೆ ಆನೆಗಳನ್ನು ಮುಟ್ಟುವುದು, ಸ್ನಾನ ಮಾಡಿಸುವುದು ಅಥವಾ ಆಹಾರ ನೀಡುವುದು ಸಂಪೂರ್ಣ ನಿಷೇಧಿಸಲಾಗಿದೆ.

ಹೊಸ ಮಾರ್ಗಸೂಚಿಗಳ ಅನ್ವಯ, ಪ್ರವಾಸಿಗರು ಆನೆಗಳನ್ನು ವೀಕ್ಷಿಸಲು ಕನಿಷ್ಠ 30 ಅಡಿ ಅಂತರ ಕಾಯ್ದುಕೊಳ್ಳಬೇಕು. ಶಿಬಿರಗಳಲ್ಲಿ ಗುರುತಿಸಲಾದ ‘ಹಸಿರು ವಲಯ’ (Green Zone) ಅಥವಾ ವೀಕ್ಷಣಾ ಗ್ಯಾಲರಿಯಲ್ಲೇ ನಿಂತು ಆನೆಗಳನ್ನು ವೀಕ್ಷಿಸಲು ಅವಕಾಶ ನೀಡಲಾಗುತ್ತದೆ.

ಸಿಸಿಟಿವಿ ನಿಗಾ

ಆನೆಗಳ ಹಾಗೂ ಪ್ರವಾಸಿಗರ ಎಲ್ಲಾ ಚಟುವಟಿಕೆಗಳನ್ನು ಸಿಸಿಟಿವಿ ಕ್ಯಾಮೆರಾಗಳ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ. ಸಾರ್ವಜನಿಕ ವೀಕ್ಷಣೆಗೆ ಒಂದು ಶಿಬಿರದಲ್ಲಿ ಗರಿಷ್ಠ 10 ಆನೆಗಳನ್ನು ಮಾತ್ರ ಇರಿಸಲು ಅವಕಾಶ ನೀಡಲಾಗಿದೆ.

15 ದಿನಗಳಲ್ಲಿ ನಿಯಮ ಜಾರಿ

ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್ ಅವರು ಮಾತನಾಡಿ, ಈ ಸುರಕ್ಷತಾ ಪ್ರೋಟೋಕಾಲ್‌ಗೆ ಜೂನ್ 11ರಂದು ಸಹಿ ಹಾಕಲಾಗಿದ್ದು, ಶಿಬಿರಗಳಿಗೆ ನಿಯಮಗಳನ್ನು ಅನುಸರಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ.

ನಿಯಮಗಳನ್ನು ಅನುಸರಿಸಿರುವುದನ್ನು ಪರಿಶೀಲಿಸಿ ಪ್ರಮಾಣೀಕರಣ ನೀಡಿದ ಬಳಿಕವೇ ಶಿಬಿರಗಳ ಕಾರ್ಯಾಚರಣೆಗೆ ಅನುಮತಿ ನೀಡಲಾಗುತ್ತದೆ. ಅನುಮತಿ ಸಿಗುವವರೆಗೆ ಶಿಬಿರಗಳಲ್ಲಿ ಸಾರ್ವಜನಿಕ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಪ್ರವಾಸಿಗರಿಗೆ ಸಮಯ ಮತ್ತು ಸಂಖ್ಯಾ ಮಿತಿ

ಶಿಬಿರದ ಸಾಮರ್ಥ್ಯ, ಆನೆಗಳ ಸಂಖ್ಯೆ ಮತ್ತು ಪ್ರವಾಸಿಗರ ದಟ್ಟಣೆಯನ್ನು ಆಧರಿಸಿ ಪ್ರವಾಸಿಗರ ಬ್ಯಾಚ್‌ಗಳು ಹಾಗೂ ವೀಕ್ಷಣಾ ಸಮಯವನ್ನು ನಿಗದಿಪಡಿಸಲಾಗುತ್ತದೆ.

ಒಂದು ವೇಳೆ ಹಸಿರು ವಲಯದಲ್ಲಿ ಗರಿಷ್ಠ 50 ರಿಂದ 75 ಪ್ರವಾಸಿಗರಿಗೆ ಮಾತ್ರ ಅವಕಾಶ ಇರಲಿದೆ. ಆನೆಗಳನ್ನು ವೀಕ್ಷಿಸಲು 20 ರಿಂದ 30 ನಿಮಿಷಗಳ ಕಾಲಾವಕಾಶ ನೀಡಲಾಗುತ್ತಿದ್ದು, ಅದಕ್ಕೂ ಮೊದಲು 10 ನಿಮಿಷಗಳ ಬ್ರೀಫಿಂಗ್ ಸಮಯ ಹಾಗೂ 10 ನಿಮಿಷಗಳ ಬಫರ್ ಸಮಯ ಇರಲಿದೆ.

ರಾಜ್ಯದಲ್ಲಿವೆ 114 ಆನೆಗಳು

ರಾಜ್ಯದ 10 ಆನೆ ಶಿಬಿರಗಳಲ್ಲಿ ಒಟ್ಟು 114 ಆನೆಗಳಿದ್ದು, ಇದು ದೇಶದಲ್ಲೇ ಅತಿ ಹೆಚ್ಚಾಗಿದೆ. ಪ್ರವಾಸಿಗರಿಗೆ ಪ್ರವೇಶ ಇರುವ ಪ್ರಮುಖ ಶಿಬಿರಗಳಲ್ಲಿ ದುಬಾರೆ, ಹಾರಂಗಿ, ಮತ್ತಿಗೋಡು, ಸಕ್ರೆಬೈಲು ಮತ್ತು ದಾಂಡೇಲಿಯ ಪನ್ಸೋಲಿಯಲ್ಲಿ ಪ್ರವಾಸಿಗರಿಗೆ ಅವಕಾಶವಿದೆ

ಹೊಸ ನಿಯಮಗಳ ಪ್ರಕಾರ ಮದಾವಸ್ಥೆಯಲ್ಲಿರುವ (Musth), ಗಾಯಗೊಂಡ, ಅಸ್ವಸ್ಥ, ಒತ್ತಡದಲ್ಲಿರುವ, ಹೊಸದಾಗಿ ಸೆರೆ ಹಿಡಿದ, ಇತ್ತೀಚೆಗೆ ಕಾಳಗಕ್ಕಿಳಿದ ಅಥವಾ ನಿಯಂತ್ರಣಕ್ಕೆ ಬಾರದ ಆನೆಗಳನ್ನು ಸಾರ್ವಜನಿಕರ ಮುಂದೆ ತರುವಂತಿಲ್ಲ.

ಅದೇ ರೀತಿ ಆರು ತಿಂಗಳೊಳಗಿನ ಮರಿಯೊಂದಿಗೆ ಇರುವ ತಾಯಿ ಆನೆಗಳನ್ನೂ ಸಾರ್ವಜನಿಕ ವೀಕ್ಷಣೆಗೆ ಒಳಪಡಿಸಬಾರದು ಎಂದು ಸೂಚಿಸಲಾಗಿದೆ.

ಆನೆ ಶಿಬಿರಗಳಲ್ಲಿ ಮೂರು ವಲಯಗಳು

ಕೆಂಪು ವಲಯ (Red Zone)

ಆನೆಗಳಿಗೆ ಸ್ನಾನ, ಆಹಾರ, ಟೆಥರಿಂಗ್ ಮತ್ತು ಪಶುವೈದ್ಯಕೀಯ ಚಿಕಿತ್ಸೆ ನೀಡುವ ಪ್ರದೇಶ. ಇಲ್ಲಿ ಮಾವುತರು, ವೈದ್ಯರು ಹಾಗೂ ಸಿಬ್ಬಂದಿಗೆ ಮಾತ್ರ ಪ್ರವೇಶ.

ಕಿತ್ತಳೆ ವಲಯ (Amber Zone)

ಸಿಬ್ಬಂದಿ ಓಡಾಟ ಹಾಗೂ ತುರ್ತು ಕಾರ್ಯಾಚರಣೆಗಳಿಗೆ ಮೀಸಲಾದ ನಿಯಂತ್ರಿತ ಮಾರ್ಗ.

ಹಸಿರು ವಲಯ (Green Zone)

ಪ್ರವಾಸಿಗರು ಮಾರ್ಗದರ್ಶಕರೊಂದಿಗೆ ನಿಂತು ಆನೆಗಳನ್ನು ವೀಕ್ಷಿಸುವ ಪ್ರದೇಶ. ಇಲ್ಲಿ ಆನೆಗಳನ್ನು ಮುಟ್ಟುವುದು, ಆಹಾರ ನೀಡುವುದು ಅಥವಾ ಸ್ನಾನ ಮಾಡಿಸುವುದು ಸಂಪೂರ್ಣ ನಿಷೇಧ.

ಸುರಕ್ಷತೆಗೆ ವಿಶೇಷ ಒತ್ತು

  • ಎಲ್ಲಾ ಶಿಬಿರಗಳ ಮೇಲ್ವಿಚಾರಣೆ ಡಿಆರ್‌ಎಫ್‌ಒ ಅಧಿಕಾರಿಗಳಿಂದ ನಡೆಯಲಿದೆ.

  • ನಿಯಮ ಉಲ್ಲಂಘನೆಯಾದರೆ ಶಿಬಿರವನ್ನು ಮುಚ್ಚುವ ಕ್ರಮ ಕೈಗೊಳ್ಳಬಹುದು.

  • ಆನ್‌ಲೈನ್ ಹಾಗೂ ಸ್ಥಳದಲ್ಲೇ ಟಿಕೆಟ್ ವ್ಯವಸ್ಥೆ ಜಾರಿಗೆ ಬರಲಿದೆ.

  • ಮಕ್ಕಳು, ಹಿರಿಯ ನಾಗರಿಕರು, ಗರ್ಭಿಣಿಯರು ಮತ್ತು ವಿಶೇಷಚೇತನರು ವಿಶೇಷ ಮೇಲ್ವಿಚಾರಣೆಯಲ್ಲಿರಬೇಕು.

  • ಆನೆಗಳ ನಡವಳಿಕೆ ಹಾಗೂ ದೈನಂದಿನ ಕಾರ್ಯಾಚರಣೆಯ ದಾಖಲೆಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕು.

ಆನೆ ಶಿಬಿರಗಳಲ್ಲಿ ಪ್ರವಾಸಿಗರ ಸುರಕ್ಷತೆ ಮತ್ತು ಆನೆಗಳ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಅರಣ್ಯ ಇಲಾಖೆ ಜಾರಿಗೆ ತಂದಿರುವ ಈ ಹೊಸ ನಿಯಮಗಳು ರಾಜ್ಯದ ಎಲ್ಲಾ ಶಿಬಿರಗಳಲ್ಲಿ ಶೀಘ್ರವೇ ಅನುಷ್ಠಾನಗೊಳ್ಳಲಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಶ್ವಾಸವೇ ಜಗತ್ತಿನ ಅತಿದೊಡ್ಡ ಸಂಪತ್ತು, ‘ನಾವಿಕರ ಸುರಕ್ಷತೆ ನಮ್ಮೆಲ್ಲರ ಜವಾಬ್ದಾರಿ’: G7 ಶೃಂಗಸಭೆಯಲ್ಲಿ ಟ್ರಂಪ್ ಎದುರೇ ಪ್ರಧಾನಿ ಮೋದಿ ಖಡಕ್ ಸಂದೇಶ..!

ಬೆಳಗಾವಿಗೆ ಮತ್ತೆ ನಿರಾಸೆ: ಸುವರ್ಣ ವಿಧಾನಸೌಧದಲ್ಲಿ ಮುಂಗಾರು ಅಧಿವೇಶನ ನಡೆಸುವ ನಿರ್ಧಾರಕ್ಕೆ ಸರ್ಕಾರ ಬ್ರೇಕ್..?

RSS ಟೀಕಿಸಿ ನೆಹರು ಕುಟುಂಬದ ಕುಡಿಗಳ ಸಂತೃಪ್ತಿಪಡಿಸುವ ಯತ್ನ: ‘ವಿಕೃತ ಖುಷಿ ಸಿಗುವುದಾದರೆ ಬೈದುಕೊಳ್ಳಿ; ಪ್ರಿಯಾಂಕ್ ಖರ್ಗೆಗೆ BJP ತಿರುಗೇಟು

ಡಿಕೆಶಿ ಸಿಎಂ ಆಗಿರುವುದಕ್ಕೆ ಗೌಡರ ಕುಟುಂಬಕ್ಕೆ ಹೊಟ್ಟೆಕಿಚ್ಚು: ಮತ್ತೊಬ್ಬ ಒಕ್ಕಲಿಗ ನಾಯಕ ಬೆಳೆಯಬಾರದೆಂದು ಕುತಂತ್ರ!

'ಮೋದಿಯವ್ರೇ ನಿಮ್ಮನ್ನು ಮತ್ತೆ ನೋಡಿ ಖುಷಿ ಆಯ್ತು,ನಾವಿಬ್ರು ಇನ್ಸ್ಟಾಗ್ರಾಂನಲ್ಲಿ ಎಷ್ಟು ಫೇಮಸ್ ಗೊತ್ತಾ'?: Melody ಟ್ರೆಂಡ್ ಬಗ್ಗೆ ಜೋಕ್ ಮಾಡಿದ ಮೆಲೋನಿ-Viral Video

SCROLL FOR NEXT