ಸಿಎಂ ಡಿಕೆ ಶಿವಕುಮಾರ್ ಸಾಂದರ್ಭಿಕ ಚಿತ್ರ 
ರಾಜ್ಯ

ರಾಜ್ಯದ 16 ಲಕ್ಷ ಜನರಿಗೆ ಪಿಂಚಣಿ ಸ್ಥಗಿತ: ತಕ್ಷಣ ಬಿಡುಗಡೆಗೆ ಪ್ರತಿಪಕ್ಷ ಬಿಜೆಪಿ ಒತ್ತಾಯ!

ದೈನಂದಿನ ಮನೆ ಖರ್ಚಿಗೆ, ಮಾತ್ರೆ-ಔಷಧಿ ಖರೀದಿಸಲು ಈ ಪಿಂಚಣಿ ಹಣವನ್ನೇ ನಂಬಿಕೊಂಡಿದ್ದ ಅಸಹಾಯಕ ವೃದ್ಧರು, ಅಂಗವಿಕಲರು ಮತ್ತು ವಿಧವೆಯರು ಸರ್ಕಾರದ ಈ ಕ್ರಮದಿಂದ ಕಂಗಾಲಾಗಿದ್ದಾರೆ ಎಂದು ಆರೋಪಿಸಿದೆ.

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಕಳೆದ ಮೂರು ತಿಂಗಳಿಂದ ರಾಜ್ಯದ ಸುಮಾರು 16 ಲಕ್ಷಕ್ಕೂ ಹೆಚ್ಚು ಬಡ ಜನರ ವೃದ್ಧಾಪ್ಯ ವೇತನ, ವಿಧವಾ ಪಿಂಚಣಿ, ಸಂಧ್ಯಾ ಸುರಕ್ಷಾ ಹಾಗೂ ವಿಶೇಷಚೇತನರ ಮಾಸಿಕ ಪಿಂಚಣಿಯನ್ನು ಕುಂಟು ನೆಪ ಹೇಳಿ ತಡೆ ಹಿಡಿದಿದೆ‌ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಪಿಂಚಣಿಯನ್ನೇ ನಂಬಿ ಜೀವನವನ್ನು ಸಾಗಿಸುತ್ತಿದ್ದ ಲಕ್ಷಾಂತರ ಬಡ ಕುಟುಂಬದ ಅನ್ನದ ಬಟ್ಟಲಿಗೆ ಕಾಂಗ್ರೆಸ್ ಕಲ್ಲು ಹಾಕಿದೆ‌. ದಿವಾಳಿಯಾಗಿರುವ ಕಾಂಗ್ರೆಸ್ ಸರ್ಕಾರ ಲಕ್ಷಾಂತರ ಫಲಾನುಭವಿಗಳನ್ನು ಪರಿಷ್ಕರಣೆಯ ನೆಪದಲ್ಲಿ ಹೊರಗಿಡುತ್ತಿದೆ ಎಂದು ಕಿಡಿಕಾರಿದೆ.

ದೈನಂದಿನ ಮನೆ ಖರ್ಚಿಗೆ, ಮಾತ್ರೆ-ಔಷಧಿ ಖರೀದಿಸಲು ಈ ಪಿಂಚಣಿ ಹಣವನ್ನೇ ನಂಬಿಕೊಂಡಿದ್ದ ಅಸಹಾಯಕ ವೃದ್ಧರು, ಅಂಗವಿಕಲರು ಮತ್ತು ವಿಧವೆಯರು ಸರ್ಕಾರದ ಈ ಕ್ರಮದಿಂದ ಕಂಗಾಲಾಗಿದ್ದಾರೆ ಎಂದು ಆರೋಪಿಸಿದೆ.

ರಾಜ್ಯ ಸರ್ಕಾರ ಕುಂಟು ನೆಪಗಳನ್ನು ಹೇಳದೆ, ಅರ್ಹ ಫಲಾನುಭವಿಗಳಿಗೆ ಪಿಂಚಣಿಯನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka MLC Election Results: ಅಡ್ಡ ಮತದಾನದ ನಡುವೆಯೇ ಕಾಂಗ್ರೆಸ್ 5, ಬಿಜೆಪಿಗೆ ತೆಕ್ಕೆಗೆ 2 ಸ್ಥಾನ, JDS ಆಘಾತಕಾರಿ ಸೋಲು

ಫಲಿಸಿದ ಡಿಕೆ ಶಿವಕುಮಾರ್ ತಂತ್ರ: Jds-BJP ಅಡ್ಡ ಮತದಾನ, ಕಾಂಗ್ರೆಸ್‌ನ 5ನೇ ಅಭ್ಯರ್ಥಿಗೆ ಗೆಲುವು!

NEET UG ಮರು ಪರೀಕ್ಷೆ: 150 ಮಿಲಿಯನ್ ಬಳಕೆದಾರರ ಹಕ್ಕುಗಳನ್ನು ಹೇಗೆ ಮೊಟಕುಗೊಳಿಸುತ್ತೀರಾ? ಟೆಲಿಗ್ರಾಮ್ ಬ್ಯಾನ್ ಪ್ರಶ್ನಿಸಿದ ಹೈಕೋರ್ಟ್!

Horrific: ಮಹಿಳೆ ಮೇಲೆ ನಿರಂತರ ಅತ್ಯಾಚಾರ, ಸೆ** ಬಳಿಕ ಮೂ** ಕುಡಿಸಿದ ಸ್ವಯಂ ಘೋಷಿತ ದೇವಮಾನವ!

ನಾವು ಒಂದು ಬಕೆಟ್ ನೀರು ಬಳಸಲ್ಲ: ಮೇಕೆದಾಟು ಯೋಜನೆಯಿಂದ ಕರ್ನಾಟಕಕ್ಕಿಂತ TN ರೈತರಿಗೆ ಹೆಚ್ಚು ಪ್ರಯೋಜನ: ಸಿಎಂ ಶಿವಕುಮಾರ್

SCROLL FOR NEXT