ಕೈಗಾರಿಕೆ ಸಚಿವ ಎಂಬಿ ಪಾಟೀಲ್ 
ರಾಜ್ಯ

₹7,506 ಕೋಟಿ ಹೂಡಿಕೆಯ 55 ಕೈಗಾರಿಕಾ ಯೋಜನೆಗಳಿಗೆ ರಾಜ್ಯ ಸರ್ಕಾರದ ಅನುಮೋದನೆ! ಸಚಿವ ಎಂ.ಬಿ. ಪಾಟೀಲ್

ವಿವಿಧ ವಲಯಗಳಲ್ಲಿ ಆಗುತ್ತಿರುವ ಈ ಹೂಡಿಕೆಗಳು ಕರ್ನಾಟಕದ ಕೈಗಾರಿಕಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬಲಿವೆ ಎಂದು ಸಚಿವರು ತಿಳಿಸಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಒಟ್ಟು 7,506 ಕೋಟಿ ರೂ. ಬಂಡವಾಳ ಹೂಡಿಕೆ ಮತ್ತು 28,000 ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಮಾಡಲಿರುವ 55 ಕೈಗಾರಿಕಾ ಯೋಜನೆಗಳಿಗೆ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಶುಕ್ರವಾರ ಹೇಳಿದ್ದಾರೆ.

ಈ ಪೈಕಿ 41 ಹೂಡಿಕೆಗಳು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಆಗಲಿದೆ. ಏರೋಸ್ಪೇಸ್, ESDM (Electronics System Design & Manufacturing) ಸೇರಿದಂತೆ ವಿವಿಧ ವಲಯಗಳಲ್ಲಿ ಆಗುತ್ತಿರುವ ಈ ಹೂಡಿಕೆಗಳು ಕರ್ನಾಟಕದ ಕೈಗಾರಿಕಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬಲಿವೆ ಎಂದು ಸಚಿವರು ತಿಳಿಸಿದ್ದಾರೆ.

ಸಭೆಯ ಬಳಿಕ ಮಾಹಿತಿ ನೀಡಿದ ಸಚಿವರು, ಇವುಗಳಲ್ಲಿ 4 ಯೋಜನೆಗಳು ವಿದೇಶಿ ನೇರ ಹೂಡಿಕೆಯ ಯೋಜನೆಗಳಾಗಿವೆ. ತೈವಾನಿನ ಟೀಮಿಂಗ್ ಆಟೋಮೇಷನ್, ದಕ್ಷಿಣ ಕೊರಿಯಾದ ವೈಜೆ ಲಿಂಕ್, ಜರ್ಮನಿಯ ರೇವುಂ ಮತ್ತು ಜಪಾನ್ ಮೂಲದ ಶಿಂಕೋ ಕಂಪನಿಗಳು ಕ್ರಮವಾಗಿ 20 ಕೋಟಿ ರೂ. 177. 96 ಕೋಟಿ ರೂ. 16. 50 ಕೋಟಿ ರೂ ಮತ್ತು 100 ಕೋಟಿ ರೂ ( ಒಟ್ಟು 314. 46 ಕೋಟಿ ರೂ) ಹೂಡಿಕೆ ಮಾಡುತ್ತಿವೆ. ಇವುಗಳಿಂದ ಒಟ್ಟು 503 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅವರು ಹೇಳಿದ್ದಾರೆ.

ಒಪ್ಪಿಗೆ ನೀಡಲಾಗಿರುವ ಹೂಡಿಕೆ ಪ್ರಸ್ತಾವನೆಗಳಲ್ಲಿ 50 ಕೋಟಿ ರೂ. ಗಳಿಗೂ ಹೆಚ್ಚು ಬಂಡವಾಳ ತೊಡಗಿಸಲಿರುವ ಯೋಜನೆಗಳ ಸಂಖ್ಯೆ 35 ರಷ್ಟಿದೆ. ಹಾಗೆಯೇ 15 ಯೋಜನೆಗಳಿಂದ ತಲಾ 15 ರಿಂದ 50 ಕೋಟಿ ರೂ. ಹೂಡಿಕೆ ಆಗಲಿದೆ. 5 ಕಂಪನಿಗಳು ಹೆಚ್ಚುವರಿ ಬಂಡವಾಳ ಹೂಡಿಕೆ ಮಾಡಲಿದ್ದು, ಇವುಗಳಿಂದ 223.61 ಕೋಟಿ ರೂ. ಹರಿದುಬರಲಿದೆ. ಒಟ್ಟು 55 ಯೋಜನೆಗಳಲ್ಲಿ ಹೆಚ್ಚಿನವು ಏರೋಸ್ಪೆಸ್ , ಇಎಸ್ ಡಿಎಂ, ಜನರಲ್ ಎಂಜಿನಿಯರಿಂಗ್ ಕ್ಷೇತ್ರಕ್ಕೆ ಸಂಬಂಧಪಟ್ಟಿವೆ ಎಂದು ಅವರು ವಿವರಿಸಿದ್ದಾರೆ.

ಕೇನ್ಸ್ ಎಲೆಕ್ಟ್ರಾನಿಕ್ಸ್ ಚಾಮರಾಜನಗರ ಜಿಲ್ಲೆಯಲ್ಲಿ 495 ಕೋಟಿ ರೂ. ಎಸ್ ಎಫ್ ಒ ಟೆಕ್ನಾಲಜೀಸ್ ದೊಡ್ಡಬಳ್ಳಾಪುರದಲ್ಲಿ 490 ಕೋಟಿ ರೂ. ಆರ್ಬಿಟ್ ಇಂಡಸ್ಟ್ರಿಯಲ್ ಪರ್ಕ್ ಕೋಲಾರದಲ್ಲಿ 454 ಕೋಟಿ ರೂ. ಟೆರ್ರಾ ಸಕ್ರ್ಯೂರ್ಟ್ಸ್ ವಿಜಯಪುರದಲ್ಲಿ 441 ಕೋಟಿ ರೂ. ಬೆಲಾಟ್ರಿಕ್ಸ್ ಏರೋಸ್ಪೇಸ್ ಬೆಂಗಳೂರು ಗ್ರಾಮಾಂತರದಲ್ಲಿ 404 ಕೋಟಿ ರೂ. ಜಿಂದಾಲ್ ಪೋರ್ಟ್ ಬಳ್ಳಾರಿಯಲ್ಲಿ 380 ಕೋಟಿ ಶೋಭಾ ರಿಯಾಲ್ಟಿ ಬೆಂಗಳೂರು ನಗರ ಜಿಲ್ಲೆಯಲ್ಲಿ 201.15 ಕೋಟಿ, ಆರ್ ಎಂಝೆಡ್ ಹೊಸಕೋಟೆಯ ಎಂ. ಹೊಸಹಳ್ಳಿಯಲ್ಲಿ 198. 62 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ಯಾರೆಂಟಿ ಅನರ್ಹ ಫಲಾನುಭವಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಅಧಿಕಾರಿಗಳಿಗೆ ಸಿಎಂ ಡಿ.ಕೆ ಶಿವಕುಮಾರ್ ಸೂಚನೆ

ಕೋವಿಡ್ ಸೃಷ್ಟಿಸಿದ್ದ ವುಹಾನ್ ಲ್ಯಾಬ್ ಗೆ ಅಮೆರಿಕ ವಿಜ್ಞಾನಿಯಿಂದ ಭಾರಿ ಆರ್ಥಿಕ ನೆರವು: DNI ತುಳಸಿ ಗಬಾರ್ಡ್ ಸ್ಫೋಟಕ ಮಾಹಿತಿ!

TMC ಬ್ಯಾಂಕ್ ಖಾತೆಯಲ್ಲಿ ರೂ. 675 ಕೋಟಿ ಹಣ: 'ಪಾರ್ಟಿ ಫಂಡ್‌ ನಿಯಂತ್ರಣದ ಮೇಲೆ ಬಂಡಾಯ ಬಣ ಕಣ್ಣು! ಆಂತರಿಕ ಸಂಘರ್ಷ ಮತ್ತಷ್ಟು ತೀವ್ರ

ಕ್ರಾಸ್ ವೋಟಿಂಗ್: ಬಿ.ವೈ ವಿಜಯೇಂದ್ರ, ಆರ್ ಅಶೋಕಗೆ ಹೈಕಮಾಂಡ್ ಬುಲಾವ್; ಯಾರ ತಲೆದಂಡವಾಗುತ್ತೆ?

ಆಕೆ 'ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಬಯಸಿದ್ದರು': Trump ವಿವಾದಾತ್ಮಕ ಹೇಳಿಕೆ; ಮೆಲೋನಿ ಛೀಮಾರಿ! Video