ಸ್ಥಳಕ್ಕೆ ಪೊಲೀಸರ ಭೇಟಿ 
ರಾಜ್ಯ

ಮಂಗಳೂರಿನಲ್ಲಿ ಮನಕಲಕುವ ಘಟನೆ: ಮನೆಯಲ್ಲಿ ತಂದೆ-ತಾಯಿ ಶವವಾಗಿ ಪತ್ತೆ; ಗೋಗರೆದ 2 ವರ್ಷದ ಮಗು!

ಕಡಬ ತಾಲೂಕಿನ ಆಲಂಕಾರು ಸಮೀಪದ ಕಜೆಯಲ್ಲಿ ಈ ಮನಕಲಕುವ ಘಟನೆ ನಡೆದಿದ್ದು, ದಂಪತಿಯ ಎರಡು ವರ್ಷದ ಮಗು ಅನಾಥವಾಗಿದೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಪತಿ ಮತ್ತು ಪತ್ನಿ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.

ಕಡಬ ತಾಲೂಕಿನ ಆಲಂಕಾರು ಸಮೀಪದ ಕಜೆಯಲ್ಲಿ ಈ ಮನಕಲಕುವ ಘಟನೆ ನಡೆದಿದ್ದು, ದಂಪತಿಯ ಎರಡು ವರ್ಷದ ಮಗು ಅನಾಥವಾಗಿದೆ.

ಮೃತ ದಂಪತಿಯನ್ನು ಬಜಗೋಳಿ ಮೂಲದ ದಿನೇಶ್ ಹಾಗೂ ಸಿದ್ದಕಟ್ಟೆ ನಿವಾಸಿ ಸಂಗೀತಾ ಎಂದು ಗುರುತಿಸಲಾಗಿದ್ದು, ಪತ್ನಿಯನ್ನು ಹತ್ಯೆ ಮಾಡಿದ ಬಳಿಕ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಆಲಂಕಾರು ಪೇಟೆಯಲ್ಲಿ ದಿನೇಶ್ ಹೋಟೆಲ್ ವ್ಯವಹಾರ ನಡೆಸುತ್ತಿದ್ದರು. ಪತ್ನಿ ಸಂಗೀತಾ ಹಾಗೂ ಎರಡು ವರ್ಷದ ಹೆಣ್ಣು ಮಗುವಿನೊಂದಿಗೆ ಕಜೆಯ ಬಾಡಿಗೆ ಮನೆಯಲ್ಲಿ ದಿನೇಶ್ ವಾಸಿಸುತ್ತಿದ್ದರು. ಕೆಲ ದಿನಗಳಿಂದ ದಂಪತಿಯ ನಡುವೆ ಕುಟುಂಬ ಕಲಹ ನಡೆಯುತ್ತಿದ್ದು, ಸುಮಾರು ಒಂದು ತಿಂಗಳ ಹಿಂದೆ ಮನೆ ಬಿಟ್ಟಿದ್ದ ಅವರು ಶುಕ್ರವಾರ ಸಂಜೆ ಮತ್ತೆ ಮನೆಗೆ ಬಂದಿದ್ದರು ಎನ್ನಲಾಗಿದೆ.

ಶನಿವಾರ ಬೆಳಗ್ಗೆ ಮನೆಯಿಂದ ಯಾವುದೇ ಚಲನವಲನ ಕಾಣಿಸದ ಹಿನ್ನೆಲೆಯಲ್ಲಿ ಸ್ಥಳೀಯರು ಅನುಮಾನಗೊಂಡು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ತಂದೆ - ತಾಯಿ ಶವದ ಮುಂದೆ ಗೋಗರೆದ ಮಗು

ಮನೆಯೊಳಗೆ ಸಂಗೀತಾ ಮೃತ ಸ್ಥಿತಿಯಲ್ಲಿ ಕಂಡುಬಂದರೆ, ದಿನೇಶ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನೆಯ ಸಂದರ್ಭದಲ್ಲಿ ಎರಡು ವರ್ಷದ ಮಗು ಮನೆಯಲ್ಲೇ ಅಳುತ್ತಾ ಇದ್ದುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಕಡಬ ಪೊಲೀಸ್ ಠಾಣೆಯ ಉಪನಿರೀಕ್ಷಕ ಜಂಬುರಾಜ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಪತಿ ಮತ್ತು ಪತ್ನಿ ಮೃತ ಘಟನೆಯ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಇನ್ನು ಎರಡು ವರ್ಷದ ಮಗು ಅನಾಥವಾಗಿರುವುದು ಸಾರ್ವಜನಿಕರ ಮನಕಲಕುವಂತೆ ಮಾಡಿದೆ.

ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಚಿವ ಸ್ಥಾನ ಕೋಟಿ ಕೋಟಿಗೆ ಹರಾಜು: BJPಯಿಂದ ಆಡಿಯೋ ಬಿಡುಗಡೆ; ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ

ಪ್ರಧಾನಿ ಮೋದಿ ವಿಡಿಯೋ ವಿವಾದ, ಮಕ್ಕಳ ಅಶ್ಲೀಲ ಚಿತ್ರ: ಕೊನೆಗೂ ಕ್ಷಮೆಯಾಚಿಸಿದ ಮಾರ್ಕ್ ಜುಕರ್‌ಬರ್ಗ್

ಲೋಕಸಭೆಯಲ್ಲಿ 'ಬ್ಯಾಂಕರ್ ಬುಕ್ಸ್ ಎವಿಡೆನ್ಸ್ ಬಿಲ್', ರಾಜ್ಯಸಭೆಯಲ್ಲಿ 'ಸುಪ್ರೀಂ' ನ್ಯಾಯಾಧೀಶರ ಹೆಚ್ಚಳ ಮಸೂದೆ ಅಂಗೀಕಾರ!

ತೆರಿಗೆ ಪಾವತಿಯಲ್ಲೂ ಅಗ್ರಸ್ಥಾನಕ್ಕೇರಿದ Rishabh Pant; ಈ ವರ್ಷ ರಿಷಭ್ ಪಂತ್ ಕಟ್ಟಿದ ಟ್ಯಾಕ್ಸ್ ಎಷ್ಟು ಗೊತ್ತಾ?

ಬಂಕಿಪುರ, ದಾಟಿಯಾದಲ್ಲಿ ಬಿಜೆಪಿ ಸೋಲು ಉದ್ದೇಶಪೂರ್ವಕ: Akhilesh Yadav