ಮಹಿಳೆ ಜೊತೆ ಅಸಭ್ಯ ವರ್ತನೆ ತೋರಿದ ಆಟೋ ಚಾಲಕರಿಗೆ ದಂಡ 
ರಾಜ್ಯ

'ಮೆಜೆಸ್ಟಿಕ್ to ಕತ್ರಿಗುಪ್ಪೆಗೆ 700 ರೂ': ಮಹಿಳೆ ಜೊತೆ ಜಗಳ ಮಾಡಿದ್ದ ಆಟೋ ಚಾಲಕರಿಗೆ ಶಾಕ್ ಕೊಟ್ಟ ಪೊಲೀಸರು!

ಈ ಹಿಂದೆ ಮೆಜೆಸ್ಟಿಕ್ ನಲ್ಲಿ ಕತ್ರಿಗುಪ್ಪೆಗೆ ತೆರಳಬೇಕಿದ್ದ ಮಹಿಳೆ ಬಳಿ ದುಬಾರಿ ಹಣ ಕೇಳಿ ಆಕೆ ಕೊಡಲೊಪ್ಪದಿದ್ದಾಗ ಆಕೆಯನ್ನು ಕೆಳಗಿಳಿಸಿ ಅವಾಚ್ಯ ಶಬ್ಜಗಳಿಂದ ನಿಂದಿಸಿದ್ದ ಇಬ್ಬರು ಆಟೋ ಚಾಲಕರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಬೆಂಗಳೂರು: ಆಟೋ ದರದ ವಿಚಾರವಾಗಿ ಈ ಹಿಂದೆ ಮಹಿಳೆ ಜೊತೆ ಜಗಳ ಮಾಡಿದ್ದ ಇಬ್ಬರು ಆಟೋ ಚಾಲಕರಿಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಶಾಕ್ ನೀಡಿದ್ದು, ಆಟೋ ಚಾಲಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಈ ಹಿಂದೆ ಮೆಜೆಸ್ಟಿಕ್ ನಲ್ಲಿ ಕತ್ರಿಗುಪ್ಪೆಗೆ ತೆರಳಬೇಕಿದ್ದ ಮಹಿಳೆ ಬಳಿ ದುಬಾರಿ ಹಣ ಕೇಳಿ ಆಕೆ ಕೊಡಲೊಪ್ಪದಿದ್ದಾಗ ಆಕೆಯನ್ನು ಕೆಳಗಿಳಿಸಿ ಅವಾಚ್ಯ ಶಬ್ಜಗಳಿಂದ ನಿಂದಿಸಿದ್ದ ಇಬ್ಬರು ಆಟೋ ಚಾಲಕರ ವಿರುದ್ಧ ಬೆಂಗಳೂರಿನ ಉಪ್ಪಾರಪೇಟೆ ಸಂಚಾರಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇಬ್ಬರೂ ಆಟೋ ಚಾಲಕರ ಪತ್ತೆ ಮಾಡಿದ ಪೊಲೀಸರು ಇಬ್ಬರಿಗೂ ದಂಡ ಹೇರಿದ್ದಾರೆ.

ಆ ಮೂಲಕ ಗ್ರಾಹಕರ ಬಳಿ ಉದ್ಧಟತನ ತೋರುವ ಮತ್ತು ದುಬಾರಿ ಹಣ ಪೀಕುವ ಆಟೋ ಚಾಲಕರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಏನಿದು ಪ್ರಕರಣ?

ಇದೇ ಫೆಬ್ರವರಿ 28ರ ಬೆಳಗ್ಗೆ ಮೆಜೆಸ್ಟಿಕ್ ನಲ್ಲಿ ಮಹಿಳೆಯೊಬ್ಬರು ಕತ್ರಿಗುಪ್ಪೆಗೆ ತೆರಳಲು ಆಟೋ ಕೇಳಿದ್ದು, ಈ ವೇಳೆ ಆಟೋ ಚಾಲಕರು ದುಬಾರಿ ಹಣ ಕೇಳಿದ್ದಾರೆ. ಈ ವೇಳೆ ಇದನ್ನು ಪ್ರಶ್ನಿಸಿದ ಮಹಿಳೆಗೆ ನಿರ್ಲಕ್ಷ್ಯದ ಉತ್ತರ ನೀಡಿ ಕೆಳಗಿಳಿಯುವಂತೆ ಹೇಳುತ್ತಾರೆ.

ಆಟೋ ಚಾಲಕರ ವರ್ತನೆಯನ್ನು ಮಹಿಳೆ ತನ್ನ ಮೊಬೈಲ್ ತೆಗೆದು ವಿಡಿಯೋ ಮಾಡಿಕೊಳ್ಳುತ್ತಾರೆ. ಈ ವಿಡಿಯೋ ವ್ಯಾಪಕ ವೈರಲ್ ಆಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

ಮಾತು ತಪ್ಪಿದ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಂದು ದೊಡ್ಡ ಹೋರಾಟಕ್ಕೆ CJP ಸಜ್ಜು; ಸೆಪ್ಟೆಂಬರ್ 5 ರಂದು ದೆಹಲಿಯಲ್ಲಿ ಬೃಹತ್ ಮೆರವಣಿಗೆ

MCAಗೆ FDA ಶಾಕ್: ಕ್ರಿಕೆಟ್ ಮಂಡಳಿಯ 5 ಆಹಾರ ಮಳಿಗೆಗಳ ಲೈಸೆನ್ಸ್ ಅಮಾನತು

ತಮಿಳುನಾಡಿಗೆ ಕಾವೇರಿ, ಕನ್ನಡಿಗರಿಗೆ ಮತ್ತೆ ಚೊಂಬು: ನಿತ್ಯ 9,000 ಕ್ಯೂಸೆಕ್ ನೀರು ಬಿಡಲು CWRC ಸೂಚನೆ!

ನೀವು ಹೇಳಿದಂತೆ ಕೇಳದಿದ್ರೆ ದ್ವೇಷಿಸ್ತೀರಾ: JDS ಶಾಸಕ ಹೆಚ್.ಡಿ ರೇವಣ್ಣಗೆ ಹಾಸನ ಜಿಲ್ಲಾಧಿಕಾರಿ ತಿರುಗೇಟು