ಸೋಮವಾರ ಲೆಬನಾನ್‌ನ ಬೈರುತ್‌ನ ದಕ್ಷಿಣ ಉಪನಗರವಾದ ದಹಿಯೆಹ್ ಮೇಲೆ ಇಸ್ರೇಲಿ ವಾಯುದಾಳಿಗಳ ನಂತರ ಭಾರೀ ಪ್ರಮಾಣದ ದಟ್ಟ ಹೊಗೆ ಕಾಣಿಸಿಕೊಂಡಿರುವುದು. 
ರಾಜ್ಯ

ಇಸ್ರೇಲ್–ಇರಾನ್ ಸಂಘರ್ಷ: ದುಬೈಯಲ್ಲಿರುವ ಕನ್ನಡಿಗರಿಗಾಗಿ Helpline ಆರಂಭ

ದುಬೈ ಕರ್ನಾಟಕ ಸಂಘದ ಅಧ್ಯಕ್ಷ ಶಶಿಧರ ನಾಗರಾಜಪ್ಪ ಅವರು ದುಬೈ, ಶಾರ್ಜಾಹ್, ಅಬುಧಾಬಿ ಹಾಗೂ ಅಜ್ಮಾನ್‌ನಲ್ಲಿ ಸಿಲುಕಿರುವ ಕನ್ನಡಿಗರು ಯಾವುದೇ ನೆರವು ಅಗತ್ಯವಿದ್ದರೆ ಸಂಘದ ಸದಸ್ಯರನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.

ಚಿಕ್ಕಮಗಳೂರು: ಇಸ್ರೇಲ್–ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ದುಬೈನಲ್ಲಿ ಸಿಲುಕಿರುವ ಕನ್ನಡಿಗರ ಕುಟುಂಬಗಳಿಗೆ ಮಾಹಿತಿ ನೀಡಲು ಸಹಾಯವಾಣಿ ಆರಂಭಿಸಲಾಗಿದೆ.

ಸಹಾಯವಾಣಿಯ ಸಂಚಾಲಕ ಹಿದಾಯತ್ ಅಡ್ಡೂರ್ ಅವರು ಮಾತನಾಡಿ, ತಂಡವು ದುಬೈನಲ್ಲಿ ಸಿಲುಕಿರುವ ಕನ್ನಡಿಗರನ್ನು ಭೇಟಿ ಮಾಡಿ ಧೈರ್ಯ ತುಂಬುತ್ತಿದೆ. ಅಗತ್ಯವಿದ್ದರೆ ವೈದ್ಯಕೀಯ ನೆರವು ಒದಗಿಸುವ ಭರವಸೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ದುಬೈ ಕರ್ನಾಟಕ ಸಂಘದ ಅಧ್ಯಕ್ಷ ಶಶಿಧರ ನಾಗರಾಜಪ್ಪ ಅವರು ದುಬೈ, ಶಾರ್ಜಾಹ್, ಅಬುಧಾಬಿ ಹಾಗೂ ಅಜ್ಮಾನ್‌ನಲ್ಲಿ ಸಿಲುಕಿರುವ ಕನ್ನಡಿಗರು ಯಾವುದೇ ನೆರವು ಅಗತ್ಯವಿದ್ದರೆ ಸಂಘದ ಸದಸ್ಯರನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.

ಕರ್ನಾಟಕ ಎನ್‌ಆರ್‌ಐ ಫೋರಂ (ಕೆಎನ್‌ಆರ್‌ಐಎಫ್) ಅಧ್ಯಕ್ಷ ಪ್ರವೀಣ್ ಶೆಟ್ಟಿ ಅವರು ಮಾತನಾಡಿ, ಯುಎಇಯಲ್ಲಿರುವ ಕನ್ನಡಿಗರು ಶಾಂತಚಿತ್ತದಿಂದಿರಬೇಕು. ವಾಟ್ಸಾಪ್ ಗುಂಪುಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪರಿಶೀಲಿಸದ, ತಪ್ಪು ಮಾಹಿತಿಯನ್ನು ಹಂಚಬಾರದು ಎಂದು ಸೂಚಿಸಿದ್ದಾರೆ.

ಯುಎಇ ಸರ್ಕಾರ ದೇಶದಲ್ಲಿರುವ ಎಲ್ಲಾ ಎನ್‌ಆರ್‌ಐಗಳ ಸುರಕ್ಷತೆ ಬಗ್ಗೆ ಭರವಸೆ ನೀಡಿದ್ದು, ಅಲ್ಲಿರುವ ಕನ್ನಡಿಗರು ಸುರಕ್ಷಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.

ದುಬೈನಲ್ಲಿ ನೆಲೆಸಿರುವ ಕನ್ನಡಿಗ ಕೈಗಾರಿಕೋದ್ಯಮಿ ರೊನಾಲ್ಡ್ ಕೊಲಾಸೊ ಅವರು ಮಾತನಾಡಿ, ಆತಂಕಪಡಬಾರದು ಎಂದು ಕರೆ ನೀಡಿದ್ದಾರೆ.

ಪರಿಸ್ಥಿತಿ ಶೀಘ್ರದಲ್ಲೇ ಸಹಜ ಸ್ಥಿತಿಗೆ ಮರಳಲಿದ್ದು, ವಿಮಾನ ಸೇವೆಗಳು ಪುನರಾರಂಭವಾಗಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯುಎಇ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದು ಅತ್ಯವಶ್ಯಕ ಎಂದು ಅವರು ಒತ್ತಿಹೇಳಿದ್ದು, ತುರ್ತು ಪರಿಸ್ಥಿತಿಯನ್ನು ಎದುರಿಸಲು ಕರ್ನಾಟಕ ಸರ್ಕಾರ ತುರ್ತು ಪರಿಹಾರ ನಿಧಿ ಘೋಷಿಸಬೇಕು ಎಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಡದಿ ಟೌನ್​​ಶಿಪ್​​ಗೆ ಒಪ್ಪಿದ ರೈತರು; HDK ವಿರೋಧದ ನಡುವೆ ಜೂನ್ 1 ರಿಂದಲೇ ಹಣ ಬಿಡುಗಡೆ: ಡಿಕೆಶಿ ಮಹತ್ವದ ಘೋಷಣೆ

ಆರ್ಥಿಕತೆ ಎಕ್ಕುಟ್ಟಿ ಹೋಗಲಿ, ಆದ್ರೆ ಮೆಲೋನಿಗೆ 'ಮೆಲೋಡಿ' ಕೊಡುವುದು ತಡವಾಗ್ಬಾರ್ದು: ಖರ್ಗೆ ಕಿಡಿ

ಬೆಂಗಳೂರಲ್ಲಿ ಅತಿದೊಡ್ಡ ಹಗಲು ದರೋಡೆ: ಹೋಲ್‌ಸೇಲ್ ಖರೀದಿ ನೆಪದಲ್ಲಿ 3 ಕೋಟಿ ರೂ. ಚಿನ್ನಾಭರಣ ಕದ್ದು ಪರಾರಿ!

Indian Stock Market: ಏಷ್ಯಾ ಮಾರುಕಟ್ಟೆ ದುರ್ಬಲ ವಹಿವಾಟು, Sensex 117 ಅಂಕ ಏರಿಕೆ, ರೂಪಾಯಿ ಮೌಲ್ಯ ದಾಖಲೆ ಕುಸಿತ

ವೈಭವ್ ಸೂರ್ಯವಂಶಿಗೆ, ಕ್ರಿಸ್ ಗೇಲ್ ಸಿಕ್ಸರ್ ದಾಖಲೆ ಮುರಿಯುವ ಸಾಮರ್ಥ್ಯ ಇದೆ: ಅನಿಲ್ ಕುಂಬ್ಳೆ ಹೀಗೆ ಹೇಳಿದ್ಯಾಕೆ?

SCROLL FOR NEXT