ಅನಂತ ಕುಮಾರ್ ಹೆಗಡೆ  
ರಾಜ್ಯ

'ಮುಸ್ಲಿಮರು ಅಥವಾ ಕ್ರೈಸ್ತರು ನಮ್ಮನ್ನು ಸೋಲಿಸಿದ್ದಲ್ಲ, ಹಿಂದೂಗಳೇ; RSS ಮುಗಿಸುತ್ತೇವೆ ಎಂದು ಅಂದುಕೊಂಡರೆ ಅದು ಭ್ರಮೆ': ಅನಂತ ಕುಮಾರ್ ಹೆಗಡೆ

ನಿನ್ನೆ ಭಟ್ಕಳದ ಸಾರ್ವಜನಿಕ ವೇದಿಕೆಯಲ್ಲಿ ನಡೆದ ‘ಹಿಂದೂ ಸಂಗಮ’ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭಟ್ಕಳ: ಕಳೆದ ಲೋಕಸಭೆ ಚುನಾವಣೆ ಟಿಕೆಟ್ ಕೈತಪ್ಪಿದ ನಂತರ ಸಾರ್ವಜನಿಕ ಜೀವನದಿಂದ ದೂರ ಉಳಿದಿದ್ದರು ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ. ಇದೀಗ ಮತ್ತೆ ರಾಜ್ಯ ರಾಜಕೀಯದಲ್ಲಿ ಸಕ್ರಿಯರಾಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ನಿನ್ನೆ ಭಟ್ಕಳದ ಸಾರ್ವಜನಿಕ ವೇದಿಕೆಯಲ್ಲಿ ನಡೆದ ‘ಹಿಂದೂ ಸಂಗಮ’ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತಮ್ಮ ಹಿಂದುತ್ವ ಶೈಲಿಯಲ್ಲಿಯೇ ಮಾತನಾಡಿದ ಅನಂತ ಕುಮಾರ್ ಹೆಗಡೆ ಶೇಕಡಾ 90ರಷ್ಟು ಋಷಿಗಳು ಬ್ರಾಹ್ಮಣರಲ್ಲ. ವಾಲ್ಮೀಕಿ, ವಿಶ್ವಾಮಿತ್ರ ಬ್ರಾಹ್ಮಣರಲ್ಲ. ಈ ದೇಶದಲ್ಲಿ ಜಾತಿಗೆ ಎಂದಿಗೂ ಬೆಲೆಯಿರಲಿಲ್ಲ, ಯೋಗ್ಯತೆಗೆ ಮಾತ್ರ ಬೆಲೆಯಿತ್ತು. ಇಂದು ಜಾತಿಗೆ ಬೆಲೆ ಕೊಟ್ಟಿದ್ದು ನಮ್ಮಂತಹ ಬುದ್ಧಿವಂತರು. ಇತಿಹಾಸ ಓದಿದರೆ ಸತ್ಯ ತಿಳಿಯುತ್ತದೆ ಎಂದರು.

ಜಾತ್ಯಾತೀತತೆ ಎಂದರೇನು?

ಜಾತ್ಯತೀತತೆ ಎಂದರೆ ಅದು ಹಿಂದುತ್ವ. ಬೇರೆ ರಾಷ್ಟ್ರಗಳಿಂದ ಬಂದವರಿಗೆ ಮಸೀದಿ, ಚರ್ಚ್ ಕಟ್ಟಲು ಅವಕಾಶ ನೀಡಿದ್ದೇವೆ ಎಂದರೆ ನಮಗಿಂತ ದೊಡ್ಡ ಜಾತ್ಯತೀತರು ಯಾರಿದ್ದಾರೆ? ತಾಕತ್ತಿದ್ದರೆ ಬಾಂಗ್ಲಾದೇಶಕ್ಕೆ ಹೋಗಿ ಜಾತ್ಯತೀತತೆಯ ಪಾಠ ಮಾಡಿ ಎಂದು ಸವಾಲು ಹಾಕಿದರು.

ನಮ್ಮನ್ನು ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರು ಸೋಲಿಸಿಲ್ಲ. ಹಿಂದೂಗಳನ್ನು ಸೋಲಿಸಿದ್ದು ನಮ್ಮವರೇ ಆದ ಜಯಚಂದ ಮತ್ತು ಮಲ್ಲಪ್ಪ ಶೆಟ್ಟಿಯಂತಹ ದ್ರೋಹಿಗಳು. ನಾವು ಒಂದಾಗದಿದ್ದರೆ ನಮ್ಮ ಪರಿಸ್ಥಿತಿ ‘ಗೋವಿಂದ ಗೋವಿಂದ’ ಆಗಲಿದೆ” “ಆರ್.ಎಸ್.ಎಸ್ ಮುಗಿಸುತ್ತೇವೆ ಎನ್ನುವವರು ಭ್ರಮೆಯಲ್ಲಿದ್ದಾರೆ. ಹುಲಿ-ಸಿಂಹವನ್ನು ಯಾರೂ ದೇವರಿಗೆ ಬಲಿ ಕೊಡಲ್ಲ, ಕುರಿಯನ್ನಷ್ಟೇ ಬಲಿ ಕೊಡೋದು. ನಮ್ಮ ಸಂಘಟನೆಯನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ” ಎಂದು ತಮ್ಮ ಶೈಲಿಯಲ್ಲಿಯೇ ಗುಡುಗಿದರು.

ಹಿಂದೂ ಧರ್ಮವು ಇಂದು ಜಾತಿ-ಜಾತಿಯಲ್ಲಿ ಬಿದ್ದು ಹೊರಳಾಡುತ್ತಿದೆ. ನಮಗೆ ಮುಸ್ಲಿಮರು ಅಥವಾ ಕ್ರೈಸ್ತರಿಂದ ಅಪಾಯ ಬಂದಿಲ್ಲ, ಬದಲಾಗಿ ನಮ್ಮೊಳಗಿನವರಿಂದಲೇ ನಮಗೆ ಹೆಚ್ಚಿನ ಅಪಾಯ ಎದುರಾಗಿದೆ.

ಇಂದು ಆಫ್ರಿಕಾದಲ್ಲಿ ನಮಗಿಂತ ಸುಂದರವಾಗಿ ಗಣೇಶ ಹಬ್ಬ ಆಚರಿಸುತ್ತಾರೆ. ಚೀನಾದ ಗ್ರಾಮೀಣ ಪ್ರದೇಶಗಳಲ್ಲಿ ಭಾರತೀಯರಿಗೆ ಅಪಾರ ಗೌರವವಿದೆ. ಜಗತ್ತು ನಮ್ಮತ್ತ ನೋಡುತ್ತಿದೆ, ನಾವಿಂದು ಎದ್ದು ನಿಲ್ಲಬೇಕಿದೆ ಎಂದು ಜನರನ್ನು ಅನಂತ ಕುಮಾರ್ ಹೆಗಡೆ ಒತ್ತಾಯಿಸಿದರು.

ನಮ್ಮ ಯಾವುದೇ ಧರ್ಮಗ್ರಂಥಗಳಲ್ಲಿ ಜಾತಿ ವ್ಯವಸ್ಥೆಯ ಉಲ್ಲೇಖವಿಲ್ಲ. ನದಿ ಹರಿಯುವಾಗ ಕೊಳಕು ಸೇರಿ ಕೊಂಡಂತೆ, ಕಾಲಕ್ರಮೇಣ ಜಾತಿ ಎಂಬ ಕೊಳಕು ನಮ್ಮಲ್ಲಿ ಸೇರಿಕೊಂಡಿದೆ. ಅದನ್ನು ಸ್ವಚ್ಛಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು. ಪ್ರಸ್ತುತ ಕಾಲಘಟ್ಟದಲ್ಲಿ ಕೇವಲ ತಮ್ಮ ಜಾತಿಯವರನ್ನು ಮಾತ್ರ ಗೌರವಿಸುವ 'ಜಾತಿ ಸಮ್ಮೇಳನಗಳು' ಫ್ಯಾಶನ್ ಆಗಿರುವುದು ಸಮಾಜದ ಏಕತೆಗೆ ಮಾರಕ ಎಂದು ಅವರು ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ಮತ ಎಣಿಕೆಗೆ ಕೇಂದ್ರ ಸಿಬ್ಬಂದಿ ನಿಯೋಜನೆ: EC ಕ್ರಮ ಮಾನ್ಯ ಎಂದ ಸುಪ್ರೀಂಕೋರ್ಟ್, TMCಗೆ ಹಿನ್ನಡೆ

ಯುದ್ಧದಲ್ಲಿ ಅಮೆರಿಕಾ ಗೆಲ್ಲುತ್ತಿಲ್ಲ ಎನ್ನುತ್ತಿರುವವರು ದ್ರೋಹಿಗಳು, ಇರಾನ್ ಅಣ್ವಸ್ತ್ರ ಹೊಂದಿದರೆ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಭಾರೀ ಅಪಾಯ: ಟ್ರಂಪ್

ಅಣ್ವಸ್ತ್ರ ಒತ್ತಡಕ್ಕೆ ಮಣಿಯದ ಅಮೆರಿಕಾ: ಶಾಂತಿ ಪ್ರಸ್ತಾವನೆಗೆ ನಕಾರ; ಷರತ್ತುಗಳು ಅತಿಯಾಯ್ತು-ಸಮಯ ವ್ಯರ್ಥ ಮಾಡುತ್ತಿದ್ದಾರೆ; ಇರಾನ್ ವಿರುದ್ಧ ಟ್ರಂಪ್ ತೀವ್ರ ಕಿಡಿ

ಕದನ ವಿರಾಮ ನಡುವಲ್ಲೂ ಲೆಬನಾನ್ ಮೇಲೆ ಇಸ್ರೇಲ್ ದಾಳಿ: 10 ಮಂದಿ ಸಾವು, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ..!

ಬೇಸಿಗೆಯಲ್ಲಿ ಬಾಡದಿರಲಿ ಚರ್ಮ (ಕುಶಲವೇ ಕ್ಷೇಮವೇ)

SCROLL FOR NEXT