ಕಲಬುರಗಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ  
ರಾಜ್ಯ

ಬೌರಿಂಗ್ ಆಸ್ಪತ್ರೆ ದುರಂತ: ಬೀದಿ ವ್ಯಾಪಾರಿಗಳು ಕಾಂಪೌಂಡ್‌ ಪಕ್ಕದಲ್ಲಿ ವ್ಯಾಪಾರ ಮಾಡಲು ಬಿಡಬೇಡಿ- ಖರ್ಗೆ

ಬೀದಿ ವ್ಯಾಪಾರಿಗಳು ಎಲ್ಲೆಡೆ ವ್ಯಾಪಾರ ಮಾಡುತ್ತಿದ್ದಾರೆ. ಕಲಬುರಗಿ ಸಹ ಹೊರತಲ್ಲ, ಅಲ್ಲಿಯೂ ಅವರು (ಬೀದಿ ವ್ಯಾಪಾರಿಗಳು) ಪಾದಚಾರಿ ಮಾರ್ಗಗಳಲ್ಲಿ ಮಾರಾಟ ಮಾಡುತ್ತಾರೆ.

ಕಲಬುರಗಿ: ಬೆಂಗಳೂರು ಸರ್ಕಾರಿ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಜೀವಹಾನಿ ಸಂಭವಿಸಿದಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀದಿ ವ್ಯಾಪಾರಿಗಳು ಕಾಂಪೌಂಡ್‌ಗಳ ಪಕ್ಕದಲ್ಲಿ ವ್ಯಾಪಾರ ಮಾಡಲು ಬಿಡಬಾರದು ಎಂದು ಹೇಳಿದರು. ಬುಧವಾರ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಮಗು ಸೇರಿದಂತೆ ಏಳು ಜನರು ಸಾವನ್ನಪ್ಪಿ, ಏಳು ಜನರು ಗಾಯಗೊಂಡರು.

ಒಂದು ಮಾಹಿತಿ ಪ್ರಕಾರ ಅದು ಹಳೆಯ ಕಾಂಪೌಂಡ್ ಆಗಿತ್ತು, ಇನ್ನೊಂದರ ಪ್ರಕಾರ ಗೋಡೆಯನ್ನು ಸರಿಯಾಗಿ ನಿರ್ಮಿಸಲಾಗಿಲ್ಲ ಎಂದು ಕೇಳಿಬಂದಿದೆ. ಆದರೆ ಕಾಂಪೌಂಡ್‌ನಲ್ಲಿ ಬಿರುಕುಗಳು ಇರುವುದನ್ನು ನಾನು ನೋಡಿದ್ದೇನೆ. ನಾನು ಅಲ್ಲಿನ ಜನರೊಂದಿಗೆ ಮಾತನಾಡಿದ್ದೇನೆ, ಕಾಂಪೌಂಡ್ ಅನ್ನು ದುರಸ್ತಿ ಮಾಡಬೇಕಾಗಿದೆ . ಬೀದಿ ವ್ಯಾಪಾರಿಗಳು ಮತ್ತು ಅಪಘಾತಕ್ಕೊಳಗಾದವರಿಗೆ ಪರಿಹಾರ ನೀಡಬೇಕು ಎಂದು ಖರ್ಗೆ ಹೇಳಿದರು.

ಬೀದಿ ವ್ಯಾಪಾರಿಗಳು ಎಲ್ಲೆಡೆ ವ್ಯಾಪಾರ ಮಾಡುತ್ತಿದ್ದಾರೆ. ಕಲಬುರಗಿ ಸಹ ಹೊರತಲ್ಲ, ಅಲ್ಲಿಯೂ ಅವರು (ಬೀದಿ ವ್ಯಾಪಾರಿಗಳು) ಪಾದಚಾರಿ ಮಾರ್ಗಗಳಲ್ಲಿ ಮಾರಾಟ ಮಾಡುತ್ತಾರೆ. ನಾವು ಇದರ ವಿರುದ್ಧ ಏನಾದರೂ ಹೇಳಿದರೆ, ತಮ್ಮ ಜೀವನೋಪಾಯಕ್ಕೆ ನಾವು ಅಡ್ಡಿಪಡಿಸುತ್ತಿದ್ದೇವೆ ಎಂದು ಆರೋಪಿಸುತ್ತಾರೆ,

ಆದರೆ ಇತರ ನಾಗರಿಕರಿಗೆ ಅವರು ಅನಾನುಕೂಲತೆಯನ್ನುಂಟು ಮಾಡಬಾರದು ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು ಎಂದು ಖರ್ಗೆ ಹೇಳಿದರು. ಪುರಸಭೆಗಳು ಬೀದಿ ವ್ಯಾಪಾರಿಗಳಿಗೆ ಸೂಕ್ತ ಸ್ಥಳಗಳನ್ನು ನಿಗದಿಪಡಿಸಿ ಅವರಿಗೆ ಸಹಾಯ ಮಾಡಬೇಕೆಂದು ಅವರು ಒತ್ತಾಯಿಸಿದರು.

ಬೆಂಗಳೂರಿನಲ್ಲಿ ನಡೆದ ಘಟನೆಯು ಇತರ ಸ್ಥಳಗಳಲ್ಲಿಯೂ ಸಂಭವಿಸಬಹುದು, ಹೀಗಾಗಿ ಸರ್ಕಾರ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಖರ್ಗೆ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಏರ್ ಇಂಡಿಯಾ ಟರ್ಬುಲೆನ್ಸ್: ಪೈಲಟ್ ಗಾಂಜಾ ಸೇವಿಸಿದ್ದು ದೃಢ- ವರದಿಗಳು

ತೆಲಂಗಾಣದಲ್ಲಿ ಭೀಕರ ರಸ್ತೆ ಅಪಘಾತ: ಕರ್ನಾಟಕದ 6 ಕಾರ್ಮಿಕರು ಸೇರಿ 9 ಮಂದಿ ದುರ್ಮರಣ

ಪಾಕ್‌ನಲ್ಲಿ ವಿಧ್ವಂಸ: ಕರಾಚಿಯಲ್ಲಿ ಪ್ರಧಾನ ಸೇನಾ ಕಚೇರಿ ಮೇಲೆ ಭೀಕರ ಗುಂಡಿನ ದಾಳಿ, ಓರ್ವ ಸೈನಿಕ ಸಾವು!

ಜಾರ್ಖಂಡ್‌ಗೆ ಏಕೆ ಹೋಗಲಿಲ್ಲ? ಸಂಸತ್ತಿನ ಆವರಣದಲ್ಲಿ ಬಿಜೆಪಿ ಸಂಸದನ ಮಾತಿಗೆ ತಬ್ಬಿಬ್ಬಾದ ಪ್ರಿಯಾಂಕಾ ವಾದ್ರಾ, Video

ವಿಧಾನಸಭೆಗೆ ಆಗಸ್ಟ್ 14 ರಂದು ಹೊಸ ಸ್ಪೀಕರ್ ಆಯ್ಕೆ