ಟಿಡಿ ರಾಜೇಗೌಡ-ಜೀವರಾಜ್ 
ರಾಜ್ಯ

ಶೃಂಗೇರಿ ವಿಧಾನಸಭಾ ಚುನಾವಣೆ ಮರು ಎಣಿಕೆ: Congress ಅಭ್ಯರ್ಥಿ ಟಿ.ಡಿ ರಾಜೇಗೌಡ ಗೆಲುವು!

2023ರ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು Congress ಅಭ್ಯರ್ಥಿ ಟಿಡಿ ರಾಜೇಗೌಡ ಅವರೇ ಮತ್ತೆ ಗೆಲುವು ಸಾಧಿಸಿದ್ದಾರೆ.

ಚಿಕ್ಕಮಗಳೂರು: 2023ರ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು Congress ಅಭ್ಯರ್ಥಿ ಟಿಡಿ ರಾಜೇಗೌಡ ಅವರೇ ಮತ್ತೆ ಗೆಲುವು ಸಾಧಿಸಿದ್ದಾರೆ. ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಅಂಚೆ ಮತಗಳ ಮರು ಎಣಿಕೆ ಕಾರ್ಯ ನಡೆಯಿತು. ಈ ಹಿಂದೆ 201 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಟಿಡಿ ರಾಜೇಗೌಡ ತಮ್ಮ ಲೀಡ್ ಹೆಚ್ಚಿಸಿಕೊಂಡಿದ್ದು 203 ಮತಗಳಿಗೆ ತಲುಪಿದೆ.

2023ರಲ್ಲಿ 1,822 ಅಂಚೆ ಮತಗಳು ಚಲಾವಣೆಯಾಗಿದ್ದವು. ಅವುಗಳಲ್ಲಿ 279 ತಿರಸ್ಕರಿಸಲ್ಪಟ್ಟಿತ್ತು. ಇದರಲ್ಲಿ ಮೂರು ನೋಟಾ ಮತಗಳು ಇದ್ದವು. ಒಟ್ಟು 1,540 ಅಂಚೆ ಮತಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಯಿತು. ರಾಜೇಗೌಡರನ್ನು 201 ಮತಗಳ ಕಡಿಮೆ ಅಂತರದಿಂದ ವಿಜೇತರೆಂದು ಘೋಷಿಸಲಾಯಿತು. ಎರಡನೇ ಸ್ಥಾನ ಪಡೆದ ಜೀವರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು.

279 ಅಂಚೆ ಮತಗಳ ತಿರಸ್ಕಾರವು ಚುನಾವಣಾ ಫಲಿತಾಂಶದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿತ್ತು. ಏಪ್ರಿಲ್ 6 ರಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿರಸ್ಕೃತ 279 ಮತಗಳನ್ನು ಮರು ಪರಿಶೀಲಿಸುವಂತೆ ಮತ್ತು ಫಲಿತಾಂಶವನ್ನು ಹೊಸದಾಗಿ ಪ್ರಕಟಿಸುವ ಮೊದಲು ಎಲ್ಲಾ ಅಂಚೆ ಮತಪತ್ರಗಳನ್ನು ಮರುಎಣಿಕೆ ಮಾಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಸಮಾಧಾನಿತ ಶಾಸಕರ ಸಮಸ್ಯೆ ಆಲಿಸಿದ್ದೇವೆ, ನಾವೆಲ್ಲಾ ಒಂದು ಕುಟುಂಬ- ಸುರ್ಜೆವಾಲ; ಸಚಿವ ಸ್ಥಾನ ಹೊರತಾಗಿ ಬೇರೆ ಏನು ಕೊಟ್ಟರೂ ಒಪ್ಪಲ್ಲ- ಎಂ ಕೃಷ್ಣಪ್ಪ

Sheikh Hasina: ವಾಪಸ್ ಬಾಂಗ್ಲಾದೇಶಕ್ಕೆ ಹೋಗಲು ನಿರ್ಧರಿಸಿದ್ದೇನೆ; ನನ್ನನ್ನು ಕೊಲ್ಲಲಿ, ಜೈಲಿಗೆ ಹಾಕಲಿ - ಶೇಖ್ ಹಸೀನಾ

ಸಚಿವ ಸ್ಥಾನ ಕೋಟಿ ಕೋಟಿಗೆ ಹರಾಜು: BJPಯಿಂದ ಆಡಿಯೋ ಬಿಡುಗಡೆ; ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ

E20 ಪೆಟ್ರೋಲ್ ನಲ್ಲಿ ಹೆಚ್ಚು ಕ್ಲೋರೈಡ್ ಮಟ್ಟ ತೋರಿಸಿದ್ದ SIAM; ಸಚಿವಾಲಯಕ್ಕೆ ಕಳುಹಿಸಿದ್ದ ಪತ್ರ ವಾಪಸ್

"ಜನ ನಾಯಗನ್ ಬಜೆಟ್': ಮಹಿಳೆಯರು, ಯುವಜನತೆಗೆ ದಳಪತಿ ವಿಜಯ್ ಬಂಪರ್ ಗಿಫ್ಟ್; ಶಾಲಾ ಶಿಕ್ಷಣಕ್ಕೆ ಅತಿ ಹೆಚ್ಚು ಅನುದಾನ