ಸುಮಲತಾ ಅಂಬರೀಷ್  
ರಾಜ್ಯ

ಆಡಳಿತ ವಿರೋಧಿ ಅಲೆ ವಿಜಯ್ ಗೆಲುವಿಗೆ ಕಾರಣ: ನಟಿ-ರಾಜಕಾರಣಿ ಸುಮಲತಾ

ಅನಾವಶ್ಯಕ ಹಾಗೂ ಅನುಷ್ಠಾನಕ್ಕೆ ಕಷ್ಟವಾದ ಭರವಸೆಗಳು ಇದರಲ್ಲಿ ಹೆಚ್ಚಿವೆ. ಈಗಾಗಲೇ ಸಾಲಭಾರ ಹೆಚ್ಚಿರುವ ತಮಿಳುನಾಡಿನಲ್ಲಿ ಇಂತಹ ಭರವಸೆಗಳನ್ನು ಜಾರಿಗೊಳಿಸುವುದು ಆಡಳಿತಕ್ಕೆ ಸವಾಲಾಗಬಹುದು.

ಬೆಂಗಳೂರು: ನಟ ವಿಜಯ್ ಅವರ ಗೆಲುವು ದಶಕದ ಆಡಳಿತದ ವಿರುದ್ಧ ಜನರಲ್ಲಿ ಬೆಳೆದ ಅಸಮಾಧಾನದ ಫಲ ಎಂದು ನಟಿ ಹಾಗೂ ರಾಜಕಾರಣಿ ಸುಮಲತಾ ಅಂಬರೀಷ್ ಅವರು ಹೇಳಿದ್ದಾರೆ.

TNIE ಜೊತೆ ಮಾತನಾಡಿದ ಸುಮಲತಾ ಅವರು, ವಿಜಯ್ ಅವರ ಅಪಾರ ಜನಪ್ರಿಯತೆ ಮತಗಳಾಗಿ ಪರಿವರ್ತನೆಗೊಂಡಿದ್ದು ದೊಡ್ಡ ಗೆಲುವಿಗೆ ಕಾರಣವಾಗಿದೆ. ಪ್ರಜಾಪ್ರಭುತ್ವದಲ್ಲಿ ಜನರ ತೀರ್ಮಾನವನ್ನು ಗೌರವಿಸಲೇಬೇಕು. ಆದರೆ, ಅತಂತ್ರ ವಿಧಾನಸಭೆಯ ಉಪಸ್ಥಿತಿಯು ಸ್ಥಿರತೆಯ ಬಗ್ಗೆ ಕಳವಳವನ್ನುಂಟುಮಾಡುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ವಿಜಯ್ ಅವರ ಚುನಾವಣಾ ಭರವಸೆಗಳನ್ನೂ ಟೀಕಿಸಿದ ಅವರು, “ಅನಾವಶ್ಯಕ ಹಾಗೂ ಅನುಷ್ಠಾನಕ್ಕೆ ಕಷ್ಟವಾದ ಭರವಸೆಗಳು ಇದರಲ್ಲಿ ಹೆಚ್ಚಿವೆ. ಈಗಾಗಲೇ ಸಾಲಭಾರ ಹೆಚ್ಚಿರುವ ತಮಿಳುನಾಡಿನಲ್ಲಿ ಇಂತಹ ಭರವಸೆಗಳನ್ನು ಜಾರಿಗೊಳಿಸುವುದು ಆಡಳಿತಕ್ಕೆ ಸವಾಲಾಗಬಹುದು ಎಂದು ತಿಳಿಸಿದರು.

ಇದರ ನಡುವೆ, ಕನ್ನಡ ಚಿತ್ರರಂಗದ ಹಲವರು ವಿಜಯ್ ಗೆ ಅಭಿನಂದನೆ ಸಲ್ಲಿಸಿದ್ದಾರೆ. ನಟ ಶಿವರಾಜ್ ಕುಮಾರ್ ಅವರು ಟೀಕೆಗಳ ನಡುವೆ ಮೌನದಿಂದ ಕೆಲಸದ ಮೂಲಕ ಉತ್ತರ ನೀಡುವುದು ದೊಡ್ಡ ಗೆಲುವು ಎಂದು ಪ್ರಶಂಸಿಸಿದ್ದಾರೆ.

ನಟ ರಿಷಬ್ ಶೆಟ್ಟು ಕೂಡ ವಿಜಯ್ ಗೆ ಶುಭಾಶಯ ಕೋರಿದ್ದು, ಈ ಗೆಲುವು ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

TVK ಸರ್ಕಾರ ರಚನೆಯ ಕಸರತ್ತು: ಇಂದು ಮತ್ತೆ ರಾಜ್ಯಪಾಲರನ್ನು ಭೇಟಿ ಮಾಡಿದ ವಿಜಯ್; ಗವರ್ನರ್ ಹೇಳಿದ್ದೇನು?

ಸುವೇಂದು ಅಧಿಕಾರಿ ಆಪ್ತನ ಹತ್ಯೆ ಬೆನ್ನಲ್ಲೇ ಆರ್ ಜಿ ಕರ್ ಸಂತ್ರಸ್ತೆ ತಾಯಿ ಮನೆ ಬಳಿ ಬಾಂಬ್ ದಾಳಿ; 5 ಬಿಜೆಪಿ ಕಾರ್ಯಕರ್ತರಿಗೆ ಗಾಯ

ಬೆಂಕಿಗೆ ತುಪ್ಪ ಸುರಿದ ಬಾಂಗ್ಲಾ ನಾಯಕ; ಬಂಗಾಳ ಪ್ರತ್ಯೇಕ ರಾಷ್ಟ್ರವೆಂದು ಘೋಷಿಸಿ, 17 ಕೋಟಿ ಮುಸ್ಲಿಮರು ನಿಮ್ಮ ಜತೆ ಇದ್ದಾರೆ: ಮಮತಾಗೆ ಆಗ್ರಹ

ಗುಂಡಿಟ್ಟು ಸುವೇಂದು ಅಧಿಕಾರಿ ಆಪ್ತನ ಹತ್ಯೆ: CCTV ಪರಿಶೀಲನೆ; ಆರೋಪಿಗಳಿಗಾಗಿ ಪೊಲೀಸರ ತೀವ್ರ ಶೋಧ, ಉತ್ತರ 24 ಪರಗಣದಲ್ಲಿ ಪರಿಸ್ಥಿತಿ ಉದ್ವಿಗ್ನತೆ

ಆಪರೇಷನ್ ಸಿಂದೂರ್‌ಗೆ ಒಂದು ವರ್ಷ; ಪ್ರಧಾನಿ ಮೋದಿಯ ಸಾಮಾಜಿಕ ಮಾಧ್ಯಮ ಖಾತೆಯ DP ಚೇಂಜ್

SCROLL FOR NEXT