ಸುಹಾನಾ 
ರಾಜ್ಯ

ಮಂಗಳೂರು: 35 ಲಕ್ಷ ರೂ ಮೌಲ್ಯದ ಹೈಡ್ರೋ ವೀಡ್ ಗಾಂಜಾ ಸಾಗಿಸುತ್ತಿದ್ದ ವಿದ್ಯಾರ್ಥಿನಿ ಬಂಧನ!

ಬಂಧಿತೆ ಶಿವಮೊಗ್ಗದ ಸಾಗರ ತಾಲೂಕಿನ ಹುಲಿದೇವರ ಬನ ನಿವಾಸಿಯಾಗಿದ್ದು ಕುಂದಾಪುರದ ಕಾಲೇಜೊಂದರಲ್ಲಿ ಅಂತಿಮ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದಳು

ಮಂಗಳೂರು: 35 ಲಕ್ಷ ರೂ ಮೌಲ್ಯದ ಮೌಲ್ಯದ ಸುಮಾರು 1 ಕೆಜಿ 42 ಗ್ರಾಂ ಹೈಡ್ರೋ ವೀಡ್ ಗಾಂಜಾ ಸಾಗಿಸುತ್ತಿದ್ದ ವಿದ್ಯಾರ್ಥಿನಿಯನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ರಂದು ಮೂಲ್ಕಿ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಹೈಡ್ರೋ ವೀಡ್ ಗಾಂಜಾ ಸಾಗಾಟ ಮಾಡುತ್ತಿದ್ದ ಸುಹಾನ(21)ಳನ್ನು ಬಂಧಿಸಲಾಗಿದೆ.

ಬಂಧಿತೆ ಶಿವಮೊಗ್ಗದ ಸಾಗರ ತಾಲೂಕಿನ ಹುಲಿದೇವರ ಬನ ನಿವಾಸಿಯಾಗಿದ್ದು ಕುಂದಾಪುರದ ಕಾಲೇಜೊಂದರಲ್ಲಿ ಅಂತಿಮ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದಳು. 35 ಲಕ್ಷ ರೂ ಮೌಲ್ಯದ ಹೈಡ್ರೋ ವೀಡ್ ಗಾಂಜಾ, ಕೃತ್ಯಕ್ಕೆ ಬಳಸಿದ ಮೊಬೈಲ್ ಪೋನ್ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾದಕ ವಸ್ತುವನ್ನು ಚೆನ್ನೈ ನಿಂದ ತರಿಸಿಕೊಂಡು ಮಾರಾಟ ಮಾಡಿ ಹಣಗಳಿಸುವ ಉದ್ದೇಶ ಹೊಂದಿದ್ದಳು. ಬಂಧಿತಳ ವಿರುದ್ದ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ .

ಕೇವಲ 21 ವರ್ಷದ ಈ ವಿದ್ಯಾರ್ಥಿನಿ ಈಗಾಗಲೇ ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.

ಈಕೆಯ ಮೇಲೆ ಈ ಹಿಂದೆ ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಅಲ್ಲದೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಇಲಾಖೆಯಲ್ಲೂ ಈಕೆಯ ವಿರುದ್ಧ ಮಾದಕ ದ್ರವ್ಯ ಸಾಗಾಟದ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Tamil Nadu Assembly floor test: ಅಗ್ನಿ ಪರೀಕ್ಷೆಯಲ್ಲಿ ಗೆದ್ದ ವಿಜಯ್, ನಿರೀಕ್ಷೆಗೂ ಮೀರಿ 144 ಶಾಸಕರ ಬೆಂಬಲ, AIADMK ಛಿದ್ರ!

ಕೇರಳದಲ್ಲಿ ರಾಹುಲ್, ಪ್ರಿಯಾಂಕಾ ವಿರುದ್ಧ ಪೋಸ್ಟರ್‌ ವಾರ್; ನೀವು ಮತ್ತೆ ಇಲ್ಲಿಂದ ಗೆಲ್ಲುವುದಿಲ್ಲ ಎಂದು ಆಕ್ರೋಶ!

ವಿಶ್ವಾಸಮತ ಯಾಚನೆಯಲ್ಲಿ ಪಾಲ್ಗೊಳ್ಳದಂತೆ TVK ಶಾಸಕನಿಗೆ ಹೈಕೋರ್ಟ್ ತಡೆ! 'ಅಮಾನವೀಯ ನಡೆ' ಎಂದ ಸುಪ್ರೀಂಕೋರ್ಟ್

ಮಿತವ್ಯಯಕ್ಕೆ ಪ್ರಧಾನಿ ಮೋದಿ ಹೆಜ್ಜೆ: ಎಸ್‌ಪಿಜಿ ಭದ್ರತಾ ಪಡೆ ವಾಹನಗಳ ಸಂಖ್ಯೆ ಶೇ.50ರಷ್ಟು ಕಡಿತ,ಬಿಜೆಪಿ ಸಿಎಂಗಳಿಗೂ ಸೂಚನೆ, EV ಗೆ ಆದ್ಯತೆ

ಉದಯನಿಧಿಯ 'ಸನಾತನ ವಿರೋಧಿ' ಹೇಳಿಕೆ: ವಿಧಾನಸಭೆ ಕಡತಗಳಿಂದ ತೆಗೆದುಹಾಕಲು VHP ಒತ್ತಾಯ!

SCROLL FOR NEXT