ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: 1.1 ಲಕ್ಷ ಅನಧಿಕೃತ ಕಟ್ಟಡಗಳ ಸಕ್ರಮದಿಂದ BDA 6,000 ಕೋಟಿ ರೂ ಆದಾಯದ ನಿರೀಕ್ಷೆ!

ಇದು ಬಿಡಿಎ ಲೇಔಟ್‌ಗಳ ಅಭಿವೃದ್ಧಿ ವೇಳೆಯಲ್ಲಿ ಸ್ವಾಧೀನಪಡಿಸಿಕೊಂಡ ಅಥವಾ ಅಧಿಸೂಚಿಸಲಾದ ಭೂಮಿಗೆ ಸಂಬಂಧಿಸಿದೆ.

ಬೆಂಗಳೂರು: ಜೂನ್ 15 ರಿಂದ ಬಿಡಿಎ (BDA) ಅಭಿಯಾನದ ಮೂಲಕ ಅನಧಿಕೃತ ಕಟ್ಟಡಗಳನ್ನು ಸಕ್ರಮಗೊಳಿಸಲು (Regularisation) ಮತ್ತು 'ಬಿ' ಖಾತಾವನ್ನು 'ಎ' ಖಾತೆಗೆ ಪರಿವರ್ತಿಸಲು 100 ದಿನಗಳ ವಿಶೇಷ ಅವಕಾಶವನ್ನು ಒದಗಿಸಲಾಗುತ್ತಿದೆ.

ಈ ಅವಧಿಯಲ್ಲಿ ಬೆಂಗಳೂರಿನಾದ್ಯಂತ ಬಿಡಿಎ ಭೂಮಿಯಲ್ಲಿ ಗುರುತಿಸಲಾದ ಸುಮಾರು 1.1 ಲಕ್ಷ ಅನಧಿಕೃತ ಕಟ್ಟಡಗಳನ್ನು ಸಕ್ರಮಗೊಳಿಸಿದರೆ ಸುಮಾರು 6,000 ಕೋಟಿ ರೂ.ಗಳ ಆದಾಯವನ್ನು ಗಳಿಸುವ ನಿರೀಕ್ಷೆಯಿದೆ. ಈ ಅವಧಿಯಲ್ಲಿ ಸಕ್ರಮಗೊಳಿಸಲಾದ ಶುಲ್ಕದಲ್ಲಿ ಶೇ. 50 ರಷ್ಟು ಕಡಿತವನ್ನು ನೀಡಲಾಗುತ್ತದೆ.

ಇದು ಬಿಡಿಎ ಲೇಔಟ್‌ಗಳ ಅಭಿವೃದ್ಧಿ ವೇಳೆಯಲ್ಲಿ ಸ್ವಾಧೀನಪಡಿಸಿಕೊಂಡ ಅಥವಾ ಅಧಿಸೂಚಿಸಲಾದ ಭೂಮಿಗೆ ಸಂಬಂಧಿಸಿದೆ. ಅಲ್ಲಿ ಸ್ವಾಧೀನ ಪ್ರಕ್ರಿಯೆಗಳ ಹೊರತಾಗಿಯೂ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಬಿಡಿಎ ಅಧಿಕಾರಿಗಳು TNIE ಗೆ ತಿಳಿಸಿದರು. ಹಲವಾರು ಸಂದರ್ಭಗಳಲ್ಲಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಸಮಸ್ಯೆಗಳಿಂದಾಗಿ ಭೂಮಿಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಿರಲ್ಲ. ಇಂತಹ ಸಂದರ್ಭದಲ್ಲಿ ಕಟ್ಟಲಾದ ಕಟ್ಟಡಗಳನ್ನು ಈಗ ಪರಿಷ್ಕೃತ ಯೋಜನೆಯಡಿಯಲ್ಲಿ ಸಕ್ರಮಗೊಳಿಸಲು ಪರಿಗಣಿಸಲಾಗುತ್ತಿದೆ ಎಂದರು.

ಬಿಡಿಎ ಪ್ರಕಾರ, ಅಂತಹ ಕಟ್ಟಡಗಳನ್ನು ಸಕ್ರಮಗೊಳಿಸಲು ವಿಫಲವಾದರೆ ಭೂಮಾಲೀಕರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಅಂತಹ ಕಟ್ಟಡಗಳನ್ನು ಅನಧಿಕೃತವೆಂದು ಪರಿಗಣಿಸಲಾಗುತ್ತದೆ ಮತ್ತು ಅಧಿಕೃತ ಸರ್ಕಾರಿ ದಾಖಲೆಗಳಲ್ಲಿ ಸೇರಲ್ಲ. ಮಾರಾಟ, ವರ್ಗಾವಣೆ ಮತ್ತು ಇತರ ಕಾನೂನು ವಹಿವಾಟುಗಳನ್ನು ನಿರ್ಬಂಧಿಸುತ್ತದೆ. ಹಿಂದಿನ ಮಾಲೀಕರು, ನಂತರದ ಖರೀದಿದಾರರು ಅಥವಾ ಅನೌಪಚಾರಿಕ ಭೂ ವಹಿವಾಟುಗಳ ಮೂಲಕ ನಿರ್ಮಾಣ ಚಟುವಟಿಕೆ ಮುಂದುವರಿಯದ ನಿದರ್ಶನಗಳೂ ಇವೆ ಎಂದು ಅಧಿಕಾರಿ ಹೇಳಿದ್ದಾರೆ.

ಮೊದಲಿಗೆ 2020ರಲ್ಲಿ ಸಕ್ರಮ ಯೋಜನೆ ಪರಿಚಯಿಸಲಾಯಿತು. ಆದರೆ ಪ್ರತಿಕ್ರಿಯೆ ಕಳಪೆಯಾಗಿತ್ತು. ಬಿಡಿಎ ಸುಮಾರು ಒಂದು ಲಕ್ಷ ಅರ್ಜಿಗಳನ್ನು ನಿರೀಕ್ಷಿಸಿದ್ದರೂ, ಸುಮಾರು 600 ಆಸ್ತಿ ಮಾಲೀಕರು ಮಾತ್ರ ಅರ್ಜಿ ಸಲ್ಲಿಸಿದರು. ಹಿಂದಿನ ಯೋಜನೆಯಡಿಯಲ್ಲಿ ಶುಲ್ಕ ಹೆಚ್ಚಾಗಿತ್ತು. ಹೀಗಾಗಿ ಆಸ್ತಿ ಮಾಲೀಕರಿಂದ ಕಡಿಮೆ ಪ್ರತಿಕ್ರಿಯೆ ವ್ಯಕ್ತವಾಯಿತು ಎಂದು ಬಿಡಿಎ ಅಧಿಕಾರಿಗಳು ಹೇಳಿದ್ದಾರೆ.

2008 ಕ್ಕಿಂತ ಮೊದಲು ನಿರ್ಮಿಸಲಾದ ಕಟ್ಟಡಗಳಿಗೆ ಶುಲ್ಕ: 2008 ಕ್ಕಿಂತ ಮೊದಲು ನಿರ್ಮಿಸಲಾದ ಕಟ್ಟಡಗಳಿಗೆ ಈ ಯೋಜನೆ ಅನ್ವಯಿಸಿದ್ದರೂ, 2020 ರ ಹೆಚ್ಚಿನ ಮಾರ್ಗದರ್ಶನ ಮೌಲ್ಯವನ್ನು ಬಳಸಿಕೊಂಡು ಕ್ರಮಬದ್ಧಗೊಳಿಸುವಿಕೆ ಶುಲ್ಕಗಳನ್ನು ಲೆಕ್ಕಹಾಕಲಾಗಿದೆ, ಇದು ಅನೇಕ ಅರ್ಜಿದಾರರಿಗೆ ಪ್ರಕ್ರಿಯೆಯನ್ನು ಆರ್ಥಿಕವಾಗಿ ಲಾಭದಾಯಕವಲ್ಲದಂತೆ ಮಾಡಿದೆ.

ಒಂದು ದಶಕಕ್ಕೂ ಹೆಚ್ಚು ಹಿಂದೆ ಆಕ್ರಮಿಸಿಕೊಂಡಿರುವ ಆಸ್ತಿಗಳಿಗೆ ಪ್ರಸ್ತುತ ದರಗಳನ್ನು ಪಾವತಿಸಲು ಕೇಳಲಾಗುತ್ತಿದೆ ಎಂದು ನಿವಾಸಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಭೂಮಾಲೀಕರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಪರಿಷ್ಕೃತ ಶುಲ್ಕ ರಚನೆಯನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ. ಹೊಸ 100 ದಿನಗಳ ಅವಧಿಯಲ್ಲಿ ಅನಧಿಕೃತ ಕಟ್ಟಡಗಳ ಸಕ್ರಮ ಯೋಜನೆ ಅರ್ಜಿಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.

ಶುಲ್ಕ ಈ ರೀತಿ ಇದೆ:

200-600 ಚದರ ಅಡಿಗಳಿಗೆ ಶೇ.5

600-900 ಚದರ ಅಡಿಗಳಿಗೆ 12.5%

1,200-2,400 ಚದರ ಅಡಿಗಳಿಗೆ 20%

2,400-4,000 ಚದರ ಅಡಿಗಳಿಗೆ 25%

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ರಜಾಸೇವೆ ಇಲಾಖೆ ಆರಂಭ; ಕಲಬುರಗಿಯಲ್ಲಿ ಜವಳಿ, ದೇವನಳ್ಳಿಯಲ್ಲಿ ಏರೋ ಪಾರ್ಕ್ ಸ್ಥಾಪ​ಗೆ ಸಚಿವ ಸಂಪುಟ ಅಸ್ತು

ಪೊಲೀಸ್ ಇಲಾಖೆಯ ಮಾಹಿತಿ ಹಂಚಿಕೆಗೆ ಹೊಸ ಮಾರ್ಗಸೂಚಿ, ಅನಧಿಕೃತ ಮಾಹಿತಿ ಸೋರಿಕೆಗೆ ತಡೆ- ಪ್ರಿಯಾಂಕ್ ಖರ್ಗೆ

ಸಾರಿಗೆ ನೌಕರರಿಗೆ ಸಿಹಿ ಸುದ್ದಿ: ವೇತನ ಪರಿಷ್ಕರಣೆ ಈ ತಿಂಗಳಿನಿಂದಲೇ ಖಾತೆಗೆ ಜಮೆ!

ಬೇನಾಮಿ ಗುತ್ತಿಗೆದಾರರಿಗೆ ಲಾಭ ಆರೋಪ, ಲೋಕಾಯುಕ್ತಕ್ಕೆ ದೂರು: ನಿಷ್ಪಕ್ಷಪಾತ ತನಿಖೆಗೆ MLA ಎಸ್ ಸುರೇಶ್ ಕುಮಾರ್ ಆಗ್ರಹ!

ಸಂಸದರು, ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಿಢೀರ್ ದಾಳಿ: 2,700 ಕೋಟಿ ಮೌಲ್ಯದ ಚಿನ್ನ, ನಗದು ಪತ್ತೆ, ರಾಶಿ ರಾಶಿ ಹಣ ಕಂಡು ಅಧಿಕಾರಿಗಳೇ ದಂಗು!