ಸಾಂದರ್ಭಿಕ ಚಿತ್ರ 
ರಾಜ್ಯ

ಮಂತ್ರಾಲಯ: ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಐವರು ನೀರುಪಾಲು; ಸತ್ಯನಾರಾಯಣ ಪೂಜೆಗೆ ಬಂದಿದ್ದ ವೇಳೆ ದುರಂತ!

ಮಂತ್ರಾಲಯದಲ್ಲಿ ಸಂಬಂಧಿಕರ ಮನೆಯಲ್ಲಿ ಏರ್ಪಡಿಸಿದ್ದ ಸತ್ಯನಾರಾಯಣ ಪೂಜೆಗೆ ಬಂದಿದ್ದ ಸಂಬಂಧಿಕರು ದುರ್ಮರಣಕ್ಕೀಡಾಗಿದ್ದಾರೆ.

ರಾಯಚೂರು: ಮಂತ್ರಾಲಯದ ಬಳಿ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐವರು ನೀರುಪಾಲಾಗಿರುವ ದಾರುಣ ಘಟನೆ ನಡೆದಿದೆ.

ಮಂತ್ರಾಲಯದಲ್ಲಿ ಸಂಬಂಧಿಕರ ಮನೆಯಲ್ಲಿ ಏರ್ಪಡಿಸಿದ್ದ ಸತ್ಯನಾರಾಯಣ ಪೂಜೆಗೆ ಬಂದಿದ್ದ ಸಂಬಂಧಿಕರು ದುರ್ಮರಣಕ್ಕೀಡಾಗಿದ್ದಾರೆ. ಹೈದ್ರಾಬಾದ್ ಮೂಲದ ಯುವನ ಚಂದ್ರ, ಸತೀಶ್, ಮಂತ್ರಾಲಯ ಗ್ರಾಮದ ರಾಘವೇಂದ್ರ , ಧನುಷ್, ಉರವಕೊಂಡದ ಸಂಧ್ಯಾ ನೀರುಪಾಲಾದವರು.

ಪೂಜೆಯ ಬಳಿಕ ನದಿಯಲ್ಲಿ ಈಜಲು ತೆರಳಿದ್ದ ವೇಳೆ ದುರ್ಘಟನೆ ನಡೆದಿದೆ. ನದಿಯಲ್ಲಿ ನೀರಿನ ಆಳ ತಿಳಿಯದೇ ಈಜಲು ತೆರಳಿ ನೀರುಪಾಲಾಗಿದ್ದಾರೆ. ಘಟನೆಯಲ್ಲಿ ಯುವತಿ ಅಪರ್ಣಾ ಪಾರಾಗಿದ್ದಾಳೆ.

ಸ್ಥಳದಲ್ಲಿ ಪೊಲೀಸರು, ಮೀನುಗಾರರಿಂದ ಹುಡುಕಾಟ ನಡೆದಿದ್ದು ಧನುಷ್ ಮೃತ ದೇಹ ಪತ್ತೆಯಾಗಿದೆ. ಉಳಿದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮತ್ತೆ ಕೋವಿಡ್ ಅಬ್ಬರ: ಆಂಧ್ರದಲ್ಲಿ ನಾಲ್ವರು ಬಲಿ; ರಾಜ್ಯದ ಗಡಿಭಾಗದಲ್ಲಿ ಹೈ ಅಲರ್ಟ್, 8 ಮಾರ್ಗಗಳಲ್ಲಿ ತೀವ್ರ ತಪಾಸಣೆ!

ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ Sir Garry Sobers ನಿಧನ, 6 ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟರ್!

'ಭೂಮಿ ಮೇಲಿನ ಎಲ್ಲರೂ ಹಿಂದೂಗಳೇ, ಧರ್ಮ ಬದಲಾವಣೆ ತಂದೆ ಬದಲಿಸಿದಂತೆ': ಆಟೋ ಮೇಲಿನ ಬರಹ ವೈರಲ್, ಚಾಲಕನಿಗೆ ಬೆದರಿಕೆ!

ನವೀಕೃತಗೊಂಡ ರಾಜ್ಯದ 4 ರೈಲ್ವೆ ನಿಲ್ದಾಣಗಳನ್ನು ವರ್ಚುವಲ್​​ ಮೂಲಕ ಉದ್ಘಾಟಿಸಿದ ಪ್ರಧಾನಿ ಮೋದಿ

2022 ಡ್ರಗ್ಸ್ ಪ್ರಕರಣ: ನಟ ಸಿದ್ಧಾಂತ್ ಕಪೂರ್ ವಿರುದ್ಧದ ಎಫ್‌ಐಆರ್ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್