ಹಾಸನಾಂಬೆ 
ರಾಜ್ಯ

12 ದಿನಗಳ ಹಾಸನಾಂಬೆ ಜಾತ್ರೋತ್ಸವಕ್ಕೆ ಸಂಪನ್ನ; ಶಾಸ್ತ್ರೋಕ್ತವಾಗಿ ಪೂಜೆ ಮಾಡಿ ಗರ್ಭಗುಡಿ ಬಾಗಿಲು ಬಂದ್..!

ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹಾಸನಾಂಬೆ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರೋತ್ಸವವು ಯಾವುದೇ ವಿವಾದ ಅಥವಾ ಸಂಘರ್ಷವಿಲ್ಲದೆ ಸುಸೂತ್ರವಾಗಿ ಮುಕ್ತಾಯಗೊಂಡಿದೆ.

ಹಾಸನ: ಪ್ರಸಿದ್ಧ ಹಾಸನಾಂಬೆ ದೇವಾಲಯದ ಬಾಗಿಲುಗಳನ್ನು ಬುಧವಾರ ಮಧ್ಯಾಹ್ನ ಸರಿಯಾಗಿ 1.35ಕ್ಕೆ ಶ್ಲೋಕಗಳ ಪಠಣ ಹಾಗೂ ಅರ್ಚಕರ ಸತತ ಮೂರು ಗಂಟೆಗಳ ಪೂಜಾ ವಿಧಿವಿಧಾನಗಳ ಬಳಿಕ ಬಂದ್ ಮಾಡಲಾಯಿತು. ಇದರೊಂದಿಗೆ ದೇವಿ ಹಾಸನಾಂಬೆಯ 12 ದಿನಗಳ ವಾರ್ಷಿಕ ಜಾತ್ರೋತ್ಸವಕ್ಕೆ ತೆರೆ ಬಿದ್ದಿದೆ.

ನಾಗರಾಜ್ ನೇತೃತ್ವದ ಅರ್ಚಕರ ತಂಡ ದೇವಾಲಯದ ಬಾಗಿಲುಗಳಿಗೆ ಬೀಗ ಹಾಕಿತು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಹಾಗೂ ದೇವಾಲಯದ ಆಡಳಿತಾಧಿಕಾರಿ ಜಗದೀಶ್ ಗಂಗಣ್ಣನವರ್ ಉಪಸ್ಥಿತರಿದ್ದರು.

ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹಾಸನಾಂಬೆ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರೋತ್ಸವವು ಯಾವುದೇ ವಿವಾದ ಅಥವಾ ಸಂಘರ್ಷವಿಲ್ಲದೆ ಸುಸೂತ್ರವಾಗಿ ಮುಕ್ತಾಯಗೊಂಡಿದೆ.

ದೇವಾಲಯ ಪ್ರವೇಶದ ವ್ಯವಸ್ಥೆಗೆ ಸಂಬಂಧಿಸಿದಂತೆ ಕಂದಾಯ ಮತ್ತು ಪೊಲೀಸ್ ಇಲಾಖೆಗಳ ನಡುವೆ ಈ ಹಿಂದೆ ಉಂಟಾಗುತ್ತಿದ್ದ ಭಿನ್ನಾಭಿಪ್ರಾಯಗಳು ಈ ಬಾರಿ ಕಂಡುಬಂದಿಲ್ಲ. 12 ದಿನಗಳ ಉತ್ಸವದ ಅವಧಿಯಲ್ಲಿ 30 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ.

1,000 ರೂಪಾಯಿ ಹಾಗೂ 300 ರೂಪಾಯಿ ದರದ ವಿಶೇಷ ಪ್ರವೇಶ ಟಿಕೆಟ್‌ಗಳ ಮಾರಾಟ ಮತ್ತು ಹಾಸನಾಂಬೆ ಲಡ್ಡು ಪ್ರಸಾದದ ಮಾರಾಟದ ಮೂಲಕ ದೇವಾಲಯಕ್ಕೆ ಒಟ್ಟು 25.6 ಕೋಟಿ ರೂಪಾಯಿ ಆದಾಯ ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಚೀನಾ Spy ಮೋಹಕ್ಕೆ ಬಿದ್ದರಾ ಟೆಕ್ ದಿಗ್ಗಜ..? Nvidia CEO ಕುರ್ಚಿಗೆ ಕುತ್ತು, Jensen Huang ತಲೆದಂಡಕ್ಕೆ ಮುಹೂರ್ತ ಫಿಕ್ಸ್..?

E-ಖಾತಾ ಅಕ್ರಮ: GBA ಸಹಾಯಕ ಆಯುಕ್ತ ಮಾಗಿ ಸೇರಿ 31 ಜನರ ವಿರುದ್ಧ FIR ದಾಖಲು

ಪ್ರೀತಿ, ನಷ್ಟ, ನೋವು, ತ್ಯಾಗದ ಅಪರೂಪದ ಕಥನ; ಪ್ರತಿಯೊಬ್ಬ ಭಾರತೀಯರ ಓದಲೇಬೇಕಾದ ಪುಸ್ತಕ': ಸೋನಿಯಾ ಗಾಂಧಿ ಆತ್ಮಕಥನಕ್ಕೆ ಕಾಂಗ್ರೆಸ್ ನಾಯಕರ ಮೆಚ್ಚುಗೆ..!

'ಕೈ' ಕಾರ್ಯಕರ್ತರಿಗೆ ಸರ್ಕಾರ ಭರ್ಜರಿ ಗಿಫ್ಟ್; 428 ಮಂದಿಗೆ ನಿಗಮ-ಮಂಡಳಿಗಳಲ್ಲಿ ಸ್ಥಾನ..!

ಭಾರತದ ವೀಸಾ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ: ವಿದೇಶಿ ಪ್ರಯಾಣಿಕರ ಪ್ರವೇಶ ಸುಲಭ, ವಿಭಾಗಗಳು 13ರಿಂದ 9ಕ್ಕೆ ಇಳಿಕೆ!