ಮಾಜಿ ಮುಖ್ಯಮಂತ್ರಿ, ಸಾಹಿತಿ ಡಾ. ಎಂ. ವೀರಪ್ಪ ಮೊಯಿಲಿಯವರ 'ವಿಶ್ವಸಂಸ್ಕೃತಿಯ ಮಹಾಯಾನ' (ಸಂಪುಟ 4) - ಗದ್ಯ ಮಹಾಕಾವ್ಯವನ್ನು ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲಾಯಿತು. 
ರಾಜ್ಯ

ವೀರಪ್ಪ ಮೊಯ್ಲಿ ಕೊಡುಗೆ ಅಪಾರ, ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಿಗಬೇಕು, ಮುಂದಿನ ವರ್ಷ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ: ಸಿಎಂ ಡಿಕೆಶಿ; Video

ರಾಜ್ಯ ಬಜೆಟ್‌ನಲ್ಲಿ ಘೋಷಿಸಿರುವಂತೆ ಮುಂದಿನ ವರ್ಷ ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸಲಾಗುವುದು ಎಂದು ತಿಳಿಸಿದ ಡಿ ಕೆ ಶಿವಕುಮಾರ್, ಮೊಯ್ಲಿ ಸೇರಿದಂತೆ ಹಲವು ಗಣ್ಯರು ಈ ಅದ್ಧೂರಿ ಕನ್ನಡ ಕಾರ್ಯಕ್ರಮದ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದರು.

ಮೈಸೂರು: ಹಿರಿಯ ಸಾಹಿತಿ ಹಾಗೂ ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಅವರ ಕೃತಿಗಳು ವಿಶ್ವಾದ್ಯಂತ ಓದುಗರ ಮೆಚ್ಚುಗೆಗೆ ಪಾತ್ರವಾಗಿವೆ. ಮೊಯ್ಲಿ ಅವರು ತಮ್ಮ ಲೇಖನಿಯ ಶಕ್ತಿ ಖಡ್ಗ ಮತ್ತು ಭಾಷಣಗಳಿಗಿಂತಲೂ ಪ್ರಬಲ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಾಲೇಜಿನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠ, ಸಪ್ನಾ ಬುಕ್ ಹೌಸ್ ಹಾಗೂ ನಗರದ ವಿದ್ಯಾ ವಿಕಾಸ ಎಜುಕೇಷನಲ್ ಟ್ರಸ್ಟ್ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೀರಪ್ಪ ಮೊಯ್ಲಿ ಅವರ ಗದ್ಯ ಮಹಾಕಾವ್ಯ 'ವಿಶ್ವಸಂಸ್ಕೃತಿಯ ಮಹಾಯಾನ' ಕೃತಿಯ ನಾಲ್ಕನೇ ಸಂಪುಟವನ್ನು ಬಿಡುಗಡೆ ಮಾಡಿ ಮಾತನಾಡಿದರು.

1990ರ ದಶಕದಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೊಯ್ಲಿ ಅವರು ಕೈಗೊಂಡಿದ್ದ ಉಪಕ್ರಮಗಳನ್ನು ಸ್ಮರಿಸಿದ ಡಿ ಕೆ ಶಿವಕುಮಾರ್, “ಹಲವು ಕೃತಿಗಳನ್ನು ರಚಿಸಿರುವ ವೀರಪ್ಪ ಮೊಯ್ಲಿ ಅವರು ವಿಶಿಷ್ಟ ರಾಜಕಾರಣಿ. ಇಂದು ಬಿಡುಗಡೆಯಾದ ಕೃತಿಯಲ್ಲೂ ಸ್ವಾತಂತ್ರ್ಯ ಹೋರಾಟದ ಸ್ಮರಣೆ ಇದೆ. ನಮ್ಮ ಧರ್ಮ ಮತ್ತು ಸಂಸ್ಕೃತಿಯನ್ನು (ಧರ್ಮ-ಸಂಸ್ಕೃತಿ) ಸಂರಕ್ಷಿಸುವ ಅಗತ್ಯವಿದೆ” ಎಂದರು.

ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಘೋಷಣೆ

ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಪಸರಿಸಲು 2027ರಲ್ಲಿ ಡಾ. ಎಂ. ವೀರಪ್ಪ ಮೊಯಿಲಿ ಅವರ ಸಾರಥ್ಯದಲ್ಲಿ ಮೂರು ದಿನಗಳ 'ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ' ಆಯೋಜಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ಇದೇ ವೇದಿಕೆಯಲ್ಲಿ ಘೋಷಿಸಿದರು. ಕನ್ನಡ ಧ್ವಜಕ್ಕೆ ಅಧಿಕೃತ ಮಾನ್ಯತೆ ನೀಡುವ ನಿಟ್ಟಿನಲ್ಲಿ ಕಾನೂನು ರೂಪಿಸಲಾಗುವುದು ಎಂದೂ ಅವರು ತಿಳಿಸಿದರು. ಈ ಮೂಲಕ ಕನ್ನಡ ಭಾಷೆಯ ಮಹತ್ವವನ್ನು ಒತ್ತಿಹೇಳಿದರು.

ಜ್ಞಾನಪೀಠ ಪ್ರಶಸ್ತಿಗೆ ಆಶಯ

ಈಗಾಗಲೇ 'ರಾಮಾಯಣ ಮಹಾನ್ವೇಷಣಂ' ಕೃತಿಗೆ ಸರಸ್ವತಿ ಸಮ್ಮಾನ್, ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಮೂರ್ತಿದೇವಿ ಪ್ರಶಸ್ತಿಗಳನ್ನು ಪಡೆದಿರುವ ಮೊಯಿಲಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಸೇರಿದಂತೆ ಇನ್ನಷ್ಟು ಉನ್ನತ ಸಾಹಿತ್ಯ ಗೌರವಗಳು ಸಿಗಬೇಕು ಎಂದು ಶಿವಕುಮಾರ್ ಹೇಳಿದರು.

ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಿದ್ದರು.

ಕೃತಿಕಾರ ಡಾ. ವೀರಪ್ಪ ಮೊಯ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಎಂ. ರೇವಣ್ಣ, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತಿನ ಅಧ್ಯಕ್ಷ ಕೆ.ಎಂ. ನಾಗರಾಜ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ, ಶಾಸಕರಾದ ಎಚ್.ಎಂ. ಗಣೇಶ್ ಪ್ರಸಾದ್, ದರ್ಶನ್ ಧ್ರುವನಾರಾಯಣ್ ಮತ್ತು ತನ್ವೀರ್ ಸೇಠ್, ಸಪ್ನಾ ಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಶಾ, ಮಾಜಿ ಕುಲಪತಿ ಪ್ರೊ. ಪದ್ಮಾ ಶೇಖರ್, ಹಿರಿಯ ಸಾಹಿತಿ ಡಾ. ಕೆ. ಅನಂತರಾಮು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಚೀನಾ Spy ಮೋಹಕ್ಕೆ ಬಿದ್ದರಾ ಟೆಕ್ ದಿಗ್ಗಜ..? Nvidia CEO ಕುರ್ಚಿಗೆ ಕುತ್ತು, Jensen Huang ತಲೆದಂಡಕ್ಕೆ ಮುಹೂರ್ತ ಫಿಕ್ಸ್..?

ಪ್ರೀತಿ, ನಷ್ಟ, ನೋವು, ತ್ಯಾಗದ ಅಪರೂಪದ ಕಥನ; ಪ್ರತಿಯೊಬ್ಬ ಭಾರತೀಯರ ಓದಲೇಬೇಕಾದ ಪುಸ್ತಕ': ಸೋನಿಯಾ ಗಾಂಧಿ ಆತ್ಮಕಥನಕ್ಕೆ ಕಾಂಗ್ರೆಸ್ ನಾಯಕರ ಮೆಚ್ಚುಗೆ..!

'ಕೈ' ಕಾರ್ಯಕರ್ತರಿಗೆ ಸರ್ಕಾರ ಭರ್ಜರಿ ಗಿಫ್ಟ್; 428 ಮಂದಿಗೆ ನಿಗಮ-ಮಂಡಳಿಗಳಲ್ಲಿ ಸ್ಥಾನ..!

ಭಾರತದ ವೀಸಾ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ: ವಿದೇಶಿ ಪ್ರಯಾಣಿಕರ ಪ್ರವೇಶ ಸುಲಭ, ವಿಭಾಗಗಳು 13ರಿಂದ 9ಕ್ಕೆ ಇಳಿಕೆ!

ಕಾಶ್ಮೀರದಲ್ಲಿ ಉಗ್ರ ದಾಳಿ ಬೆನ್ನಲ್ಲೇ ಕಿಶ್ತ್ವಾರ್‌ನಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ನಾಪತ್ತೆ, ಶೋಧ ಕಾರ್ಯಾಚರಣೆ!