ಸಾಂದರ್ಭಿಕ ಚಿತ್ರ  
ರಾಜ್ಯ

ಪತ್ನಿ ತೊರೆದು ಹೋಗಿದ್ದಕ್ಕೆ ಸಿಟ್ಟಿನಿಂದ ಗುಜರಿ ಗೋಡೌನ್ ಗಳಿಗೆ ಬೆಂಕಿ ಹಚ್ಚಿದ ಪತಿ; ಓರ್ವ ಸಾವು

ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ತಿಬೆಲೆ ಪೊಲೀಸರು ಜೀವನ್ ರಾಜ್ (35ವ) ಎಂಬಾತನನ್ನು ಬಂಧಿಸಿದ್ದಾರೆ. ಈತ ಸುಧ್ದಗುಂಟೆಪಾಳ್ಯದಲ್ಲಿ ವಾಸವಾಗಿದ್ದು, ತರಕಾರಿ ವ್ಯಾಪಾರ ಮಾಡುತ್ತಿದ್ದಾನೆ. ಮೂಲತಃ ತಮಿಳುನಾಡಿನವನು ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಪತ್ನಿ ತನ್ನನ್ನು ತೊರೆದು ತವರು ಮನೆಗೆ ತೆರಳಿದ್ದರಿಂದ ಆಕ್ರೋಶಗೊಂಡ ವ್ಯಕ್ತಿಯೊಬ್ಬ ನಗರದ ಹೊರವಲಯದಲ್ಲಿರುವ ಐದಕ್ಕೂ ಹೆಚ್ಚು ಗುಜರಿ ಗೋದಾಮುಗಳಿಗೆ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ಈ ಪೈಕಿ ಒಂದು ಗೋದಾಮಿನಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರು ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ತಿಬೆಲೆ ಪೊಲೀಸರು ಜೀವನ್ ರಾಜ್ (35ವ) ಎಂಬಾತನನ್ನು ಬಂಧಿಸಿದ್ದಾರೆ. ಈತ ಸುಧ್ದಗುಂಟೆಪಾಳ್ಯದಲ್ಲಿ ವಾಸವಾಗಿದ್ದು, ತರಕಾರಿ ವ್ಯಾಪಾರ ಮಾಡುತ್ತಿದ್ದಾನೆ. ಮೂಲತಃ ತಮಿಳುನಾಡಿನವನು ಎಂದು ಪೊಲೀಸರು ತಿಳಿಸಿದ್ದಾರೆ.

ಜೀವನ್ ರಾಜ್ ಮತ್ತು ಆತನ ಪತ್ನಿ ನಡುವೆ ಕೌಟುಂಬಿಕ ಕಲಹವಿತ್ತು. ಕಳೆದ ಅಕ್ಟೋಬರ್‌ನಲ್ಲಿ ಪತ್ನಿ ಮಗನೊಂದಿಗೆ ಆತನನ್ನು ತೊರೆದು ಆನೇಕಲ್‌ನಲ್ಲಿರುವ ತನ್ನ ತವರು ಮನೆಗೆ ತೆರಳಿದ್ದಳು.

ಮದ್ಯದ ಅಮಲಿನಲ್ಲಿ ಅತ್ತೆಯ ಮನೆಗೆ ತೆರಳಿದ್ದ ಜೀವನ್ ರಾಜ್‌ನನ್ನು ಪತ್ನಿ ತರಾಟೆಗೆ ತೆಗೆದುಕೊಂಡು ಮನೆಯೊಳಗೆ ಪ್ರವೇಶಿಸಲು ನಿರಾಕರಿಸಿದ್ದಳು. ಇದರಿಂದ ಆಕ್ರೋಶಗೊಂಡ ಆತ, ವಾಪಸ್ ಮನೆಗೆ ತೆರಳುವ ಮಾರ್ಗಮಧ್ಯೆ ಬೆಂಕಿಪೊಟ್ಟಣ ಬಳಸಿ ಗುಜರಿ ಅಂಗಡಿಗಳು ಹಾಗೂ ಗೋದಾಮುಗಳಿಗೆ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ.

ಅತ್ತಿಬೆಲೆ ಮತ್ತು ಆನೇಕಲ್‌ನಲ್ಲಿ ತಲಾ ಎರಡು ಹಾಗೂ ಜಿಗಣಿಯಲ್ಲಿ ಒಂದು ಬೆಂಕಿ ಅವಘಡ ಸಂಭವಿಸಿತ್ತು. ಆರಂಭದಲ್ಲಿ ಅಂಗಡಿ ಮಾಲೀಕರು ಈ ಘಟನೆಗಳನ್ನು ಆಕಸ್ಮಿಕ ಬೆಂಕಿ ಅವಘಡಗಳೆಂದು ಭಾವಿಸಿದ್ದರು. ಇದೇ ವೇಳೆ ನವೆಂಬರ್ 1ರಂದು ಅತ್ತಿಬೆಲೆಯಲ್ಲಿ ಎರಡು ಅಗ್ನಿ ಅವಘಡಗಳು ವರದಿಯಾಗಿದ್ದವು.

ಇವುಗಳ ಪೈಕಿ ಒಂದು ಘಟನೆಯಲ್ಲಿ ಗುಜರಿ ಗೋದಾಮಿನೊಳಗೆ ಮಲಗಿದ್ದ ಕಾರ್ಮಿಕ ಮಣಿಕಂಠ ಎಂಬಾತ ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟಿದ್ದ.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು 120ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಗುಜರಿ ಅಂಗಡಿಗಳ ಸುತ್ತ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನ ಸುಳಿವು ಸಿಕ್ಕಿದೆ. ಇದರ ಆಧಾರದ ಮೇಲೆ ಶುಕ್ರವಾರ ಜೀವನ್ ರಾಜ್‌ನನ್ನು ಬಂಧಿಸಲಾಗಿದೆ.

ಪತ್ನಿಯೊಂದಿಗಿನ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾನೇ ಈ ಬೆಂಕಿ ಅವಘಡಗಳನ್ನು ಸೃಷ್ಟಿಸಿರುವುದಾಗಿ ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

2027ರ ಯುಪಿ ಚುನಾವಣೆ: ಸೀಟು ಹಂಚಿಕೆ ಕುರಿತು ಖರ್ಗೆ ನೇತೃತ್ವದಲ್ಲಿ ಇಂದು ಮಹತ್ವದ ಸಭೆ; ರಾಹುಲ್,ಪ್ರಿಯಾಂಕಾ ಭಾಗಿ!

ಬೆಂಗಳೂರು ನಿವಾಸಿಗಳ ಸಮಗ್ರ ದತ್ತಾಂಶ ನಿರ್ವಹಿಸಿ: ಪೊಲೀಸರಿಗೆ ಸಿಎಂ ಡಿ ಕೆ ಶಿವಕುಮಾರ್ ಸೂಚನೆ

ಮೇಕೆದಾಟು ಯೋಜನೆ: ಸಿಎಂ ಡಿಕೆ ಶಿವಕುಮಾರ್ ನಿಲುವಿಗೆ ತಮಿಳುನಾಡು ರೈತ ಸಂಘಟನೆಗಳ ಖಂಡನೆ! ಅನುಮತಿ ನೀಡದಂತೆ ಪ್ರಧಾನಿಗೆ ಒತ್ತಾಯ

ಪಾಕ್ ಸಂಚುಕೋರರು, ವಿಫಲ ಬಾಂಬ್ ದಾಳಿ ಪ್ರಯತ್ನ: ರಾಜಸ್ಥಾನದಲ್ಲಿ ರೈಲ್ವೆ ಹಳಿ ಸ್ಫೋಟದ ಸಂಚು ನಡೆದಿದ್ದು ಹೇಗೆ?

ವಿದೇಶಗಳಲ್ಲಿ 'ರಾಮಾಯಣ' ರಾಕಿಂಗ್; ಅಮೆರಿಕದಲ್ಲಿ ಶಾರುಖ್ ದಾಖಲೆ ಉಡೀಸ್: 2027ರಲ್ಲಿ ಚೀನಾ, ಜಪಾನ್, ರಷ್ಯಾದಲ್ಲಿ ಬಿಡುಗಡೆ!