ಕಾಡಾನೆ 
ರಾಜ್ಯ

ಹಾಸನದಲ್ಲಿ ಇಬ್ಬರ ಸಾವಿನ ಬಳಿಕೆ ಎಚ್ಚೆತ್ತ ಸರ್ಕಾರ: 10 ಕಾಡಾನೆಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಅನುಮತಿ

ಹಾಸನದಲ್ಲಿ ಮಾನವ-ಆನೆ ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 10 ಗಂಡು ಕಾಡಾನೆಗಳನ್ನು ಸೆರೆಹಿಡಿಯಲು ಕರ್ನಾಟಕ ಅರಣ್ಯ ಇಲಾಖೆ ಅನುಮತಿ ನೀಡಿದೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ವಾರ್ಡನ್ ಅವರು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು: ಹಾಸನದಲ್ಲಿ ಮಾನವ-ಆನೆ ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 10 ಗಂಡು ಕಾಡಾನೆಗಳನ್ನು ಸೆರೆಹಿಡಿಯಲು ಕರ್ನಾಟಕ ಅರಣ್ಯ ಇಲಾಖೆ ಅನುಮತಿ ನೀಡಿದೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ವಾರ್ಡನ್ ಅವರು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಆದೇಶದ ಪ್ರಕಾರ, ನವೆಂಬರ್ 15ರಂದು ಹಾಸನ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಗಳು ಸಲ್ಲಿಸಿದ ಮೌಖಿಕ ಮನವಿಯ ಮೇರೆಗೆ ಈ ಅನುಮತಿಯನ್ನು ನೀಡಲಾಗಿದೆ. ಇದಕ್ಕೂ ಮುನ್ನ, ವನ್ಯಜೀವಿ (ಸಂರಕ್ಷಣೆ) ಕಾಯಿದೆ, 1972ರ ಸೆಕ್ಷನ್ 11(1)(ಎ) ಅಡಿಯಲ್ಲಿ ಎರಡು ಆನೆಗಳನ್ನು ಸೆರೆಹಿಡಿಯಲು ಇಲಾಖೆ ಅನುಮತಿ ನೀಡಿತ್ತು.

ಆದರೆ, ಕಳೆದ ಎರಡು ದಿನಗಳಲ್ಲಿ ಸಂಘರ್ಷ ತೀವ್ರಗೊಂಡಿದ್ದು, ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಭಾನುವಾರದಂದು ಬೇಲೂರು ತಾಲೂಕಿನ ಚಿಕ್ಕಡಹಳ್ಳಿ ಗ್ರಾಮದ 50 ವರ್ಷದ ಜಯಮ್ಮ ಅವರು ಆನೆಯ ದಾಳಿಯಿಂದ ಮೃತಪಟ್ಟರು. ಸೋಮವಾರದಂದು 64 ವರ್ಷದ ಹಫೀಜ್ ಉರ್ ರೆಹಮಾನ್ ಇದೇ ರೀತಿಯ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದರು.

ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ), ನಿರ್ದಿಷ್ಟವಾಗಿ ಗುರುತಿಸಲಾದ 10 ಗಂಡು ಆನೆಗಳನ್ನು ಸೆರೆಹಿಡಿಯಲು ಅನುಮತಿ ನೀಡಿದ್ದಾರೆ. ಈ ಆನೆಗಳ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ, ಅವುಗಳನ್ನು ಸೂಕ್ತ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತದೆ. ಏಪ್ರಿಲ್ 6ರ ಆದೇಶದಂತೆ ಪುನಾರಚಿಸಲಾದ ಸಾಕಾನೆಗಳ ತಂಡ 'ಎ' ಮತ್ತು 'ಸಿ'ಯನ್ನು ಬಳಸಿಕೊಂಡು ಈ ಕಾರ್ಯಾಚರಣೆಯನ್ನು ನಡೆಸಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'Belonging - A Journey of Love' ಬಿಡುಗಡೆ: ಆತ್ಮಚರಿತ್ರೆ ಬರೆಯಲು ಕಾರಣ ಬಿಚ್ಚಿಟ್ಟ ಸೋನಿಯಾ ಗಾಂಧಿ; Video

ಸಂಸದೆ ಪ್ರಿಯಾ ಜತೆ ರಿಂಕು ಸಿಂಗ್ ಮದುವೆ: ಪ್ರಧಾನಿ ಮೋದಿ ಭೇಟಿಯಾಗಿ ಆಹ್ವಾನ ಪತ್ರಿಕೆ ನೀಡಿದ ಕ್ರಿಕೆಟರ್!

'SIRಗೆ ಆದೇಶ ನೀಡಿದ್ದು ಯಾರು?': ಚುನಾವಣಾ ಆಯೋಗದ ವಿರುದ್ಧ 48 ಪ್ರಶ್ನೆಗಳ ಅಸ್ತ್ರ; ಸುಪ್ರೀಂ ಅನುಮತಿ ಕೋರಿದ INDIA!

ನಿಮ್ಮ ವಿಚ್ಛೇದನ ಯಾವಾಗ?: ಶ್ರುತಿ ಹಾಸನ್ ನೇರ ಪ್ರಶ್ನೆಗೆ ಆವಕ್ಕಾದ ಹಿರಿಯ ನಟಿ ಸುಹಾಸಿನಿ, Video!

ವಿಜಯಲಕ್ಷ್ಮಿ ಜತೆ ಜಟಾಪಟಿ: ನಟ ಧನ್ವೀರ್​​ಗೆ ಬಿಗ್ ರಿಲೀಫ್; ಮೂರು ಎಫ್‌ಐಆರ್‌ಗಳ ತನಿಖೆಗೆ ಹೈಕೋರ್ಟ್ ತಡೆ!