ಯದುವೀರ್ ಒಡೆಯರ್  online desk
ರಾಜ್ಯ

“ಹೌದು ನಾನು ದತ್ತುಪುತ್ರ, ಏನಿವಾಗ?”: ಸೋನಿಯಾ ಪುಸ್ತಕ ಓದ್ಕೊಂಡಿದ್ರೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾಹಿತಿ ಸಿಗಲ್ಲ; ಕಾಂಗ್ರೆಸ್ ನಾಯಕರಿಗೆ ಯದುವೀರ್ ತಿರುಗೇಟು!

ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಸೇರಿದಂತೆ ಕೆಲವು ಕಾಂಗ್ರೆಸ್ ನಾಯಕರು ಯದುವೀರ್ ಒಡೆಯರ್ ಅವರನ್ನು "ದತ್ತುಪುತ್ರ" ಎಂದು ಉಲ್ಲೇಖಿಸಿ, ಟೀಕಿಸಿದ್ದರು.

ಮೈಸೂರು: ಮೈಸೂರಿನ ರಾಜಮನೆತನದ ಬಗ್ಗೆ ಕಾಂಗ್ರೆಸ್ ನಾಯಕರ ವೈಯಕ್ತಿಕ ಟೀಕೆಗಳಿಗೆ ರಾಜವಂಶಸ್ಥರೂ ಆಗಿರುವ ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ನಿಮ್ಮ ದತ್ತು ಹಿನ್ನೆಲೆಯ ಬಗ್ಗೆ ಕಾಂಗ್ರೆಸ್ ನಾಯಕರು ಟೀಕಾ ಪ್ರಹಾರ ನಡೆಸುತ್ತಿದ್ದಾರೆ? ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಯದುವೀರ್ ಒಡೆಯರ್, ಹೌದು ನಾನು ದತ್ತುಪುತ್ರ ಎನ್ನುವುದು ವಾಸ್ತವ. ಅದರಲ್ಲೇನು ವಿಶೇಷವಿದೆ. ಆದರೆ, ದತ್ತು ಪುತ್ರನಾಗಲಿ ಇನ್ನೊಂದು ಪುತ್ರನಾಗಲಿ ಭಾರತೀಯ ಸಂವಿಧಾನದ ಅಡಿಯಲ್ಲಿ ಎಲ್ಲರೂ ಪ್ರಜೆಗಳೇ, ಇಲ್ಲಿ ಯಾರಿಗೂ ವಿಶೇಷ ಸ್ಥಾನವಿಲ್ಲ. ಇವರೇನು ಹೇಳುತ್ತಿದ್ದಾರೆ ಅನ್ನೋದೇ ನನಗೆ ಅರ್ಥವಾಗುತ್ತಿಲ್ಲ ಎಂದು ಕಾಂಗ್ರೆಸ್ ನಾಯಕರ ಟೀಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ರಾಜಕೀಯದಲ್ಲಿ ವೈಯಕ್ತಿಕ ಟೀಕೆಗಳಿಗೆ ಮಹತ್ವ ನೀಡಬಾರದು ಎಂದು ಯದುವೀರ್ ಅಭಿಪ್ರಾಯಪಟ್ಟಿದ್ದಾರೆ. “ರಾಜ್ಯದ ಜನತೆ ಹಾಗೂ ನಮ್ಮ ಕ್ಷೇತ್ರದ ಜನತೆ ರಾಜಕಾರಣದಲ್ಲಿ ಸುಧಾರಣೆ ನಿರೀಕ್ಷಿಸುತ್ತಿದ್ದಾರೆ. ನಾವೆಲ್ಲರೂ ವಿಚಾರ, ಸಮಸ್ಯೆ, ನೀತಿ ಅಥವಾ ನಿಯಮ, ಸೈದ್ಧಾಂತಿಕ ಆಧಾರದ ಮೇಲೆ ಚರ್ಚಿಸಬೇಕು,” ಎಂದು ಅವರು ಕರೆ ನೀಡಿದ್ದು, ವೈಯಕ್ತಿಕ ದಾಳಿಯಿಂದ ಯಾವುದೇ ಲಾಭವಿಲ್ಲ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕರು ತಾವು ಸಂಸದರಾಗಿ ಯಾವುದೇ ಕೆಲಸ ಮಾಡಿಲ್ಲ ಎಂದು ಆರೋಪಿಸುತ್ತಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಯದುವೀರ್, “ಸೋನಿಯಾ ಗಾಂಧಿ ಅವರ ಪುಸ್ತಕ ಅಥವಾ ಕಾಂಗ್ರೆಸ್ ಪತ್ರಿಕೆಗಳನ್ನು ಓದಿದರೆ ಅವರಿಗೆ ಸರಿಯಾದ ಮಾಹಿತಿ ಸಿಗುವುದಿಲ್ಲ. ಕ್ಷೇತ್ರದಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಯಲು ಅವರು ಸುದ್ದಿ ವಾಹಿನಿಗಳನ್ನು ವೀಕ್ಷಿಸಬೇಕು,” ಎಂದು ವ್ಯಂಗ್ಯವಾಡಿದ್ದಾರೆ.

ಹಿನ್ನೆಲೆ

ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಸೇರಿದಂತೆ ಕೆಲವು ಕಾಂಗ್ರೆಸ್ ನಾಯಕರು ಯದುವೀರ್ ಒಡೆಯರ್ ಅವರನ್ನು "ದತ್ತುಪುತ್ರ" ಎಂದು ಉಲ್ಲೇಖಿಸಿ, ಅವರಿಗೆ ಕಾಂಗ್ರೆಸ್ ಇತಿಹಾಸ ಮತ್ತು ಮೈಸೂರು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ರಾಜಮನೆತನದ ಇತಿಹಾಸದ ಬಗ್ಗೆ ಅರಿವಿಲ್ಲ ಎಂದು ಟೀಕಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

IPL ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ MS ಧೋನಿ: ಅವರ ಮುಂದಿನ ನಡೆ ಏನು?

ವಿಶ್ವಕ್ಕೆ ಶಾಂತಿ-ಸ್ಥಿರತೆ ಅಗತ್ಯ, ಪೈಪೋಟಿ ಬದಿಗಿಟ್ಟು ಸಹಕಾರದ ಹಾದಿಯಲ್ಲಿ ಸಾಗೋಣ: India-ASEAN ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

ರಾಜ್ಯದ ₹2,186 ಕೋಟಿ ಅನುದಾನ ಬಾಕಿ: ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಈಶ್ವರ್ ಖಂಡ್ರೆ ಸೂಚನೆ

ಕಾಂಗ್ರೆಸ್`ಗೆ ಹೊನ್ನಾಳಿ ಶಾಸಕ ಶಾಕ್; ಶಾಂತನಗೌಡ ರಾಜೀನಾಮೆಗೆ ಮುಂದು!

ಅತಿರೇಕದ ಆಚರಣೆ ಮಧ್ಯೆಯೂ ಭಾರತ ಯುವ ಪಡೆಯನ್ನು ಶ್ಲಾಘಿಸಿದ್ದೇಕೆ ಶೋಯೆಬ್ ಅಖ್ತರ್, Pak ವಿರುದ್ಧ ಆಕ್ರೋಶ!