ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಶಯಾನ ಆರೋಗ್ಯ ಮತ್ತಷ್ಟು ಕ್ಷೀಣ: ಕ್ಲೌಡ್ ನೈನ್ ಆಸ್ಪತ್ರೆಗೆ ನ. 29ರವರೆಗೆ ಗಡುವು ನೀಡಿದ ಕುಮಾರಸ್ವಾಮಿ, ಕಾನೂನು ಹೋರಾಟದ ಎಚ್ಚರಿಕೆ!

ಕೇಂದ್ರ ಸಚಿವ ಎಚ್. ಡಿ, ಕುಮಾರಸ್ವಾಮಿ ಶನಿವಾರ ಕ್ಲೌಡ್ ನೈನ್ ಆಸ್ಪತ್ರೆಗೆ ತೆರಳಿ ಹಲವಾರು ತಿಂಗಳಿನಿಂದ ಜೀವನ್ಮರಣ ಹೋರಾಟ ನಡೆಸುತ್ತಿರುವ ಒಂದೂವರೆ ವರ್ಷದ ಬಾಲಕಿಯ ಆರೋಗ್ಯ ವಿಚಾರಿಸಿದ್ದಾರೆ.

ಬಾಲಕಿ ಶಯಾನ ಆರೋಗ್ಯ ವಿಚಾರಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ
Nagaraja AB
Updated On : 28 Nov 2026, 5:07 pm

ಬೆಂಗಳೂರು: ನಗರದ ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಾಗ ವೈದ್ಯರ ನಿರ್ಲಕ್ಷ್ಯ ಹಾಗೂ ಅರಿವಳಿಕೆ (ಅನಾಸ್ತೇಶಿಯಾ) ನೀಡಿದ ಕಾರಣದಿಂದ ಕೋಮಾ ಸ್ಥಿತಿಗೆ ತಲುಪಿರುವ ಬಾಲಕಿ ಶಯಾನ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ.

ಕೇಂದ್ರ ಸಚಿವ ಎಚ್. ಡಿ, ಕುಮಾರಸ್ವಾಮಿ ಶನಿವಾರ ಕ್ಲೌಡ್ ನೈನ್ ಆಸ್ಪತ್ರೆಗೆ ತೆರಳಿ ಹಲವಾರು ತಿಂಗಳಿನಿಂದ ಜೀವನ್ಮರಣ ಹೋರಾಟ ನಡೆಸುತ್ತಿರುವ ಒಂದೂವರೆ ವರ್ಷದ ಬಾಲಕಿಯ ಆರೋಗ್ಯ ವಿಚಾರಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, ಆಸ್ಪತ್ರೆಯ ನಿರ್ಲಕ್ಷ್ಯದಿಂದ ಮಗುವಿನ ಆರೋಗ್ಯ ಮತ್ತಷ್ಟು ಹದಗೆಡುತ್ತಿದ್ದು, ಮಗುವಿನ ಜೀವ ಹಾಗೂ ಪೋಷಕರ ನೋವಿನೊಂದಿಗೆ ಅಮಾನುಷವಾಗಿ ವರ್ತಿಸುತ್ತಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿರುವುದಾಗಿ ತಿಳಿಸಿದ್ದಾರೆ.

Advertisement

Advertisement

Also Read

ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿರುವ ತುಮಕೂರಿನ ಬಾಲಕಿಗೆ ಜಪಾನ್‌ನಿಂದಲೇ ಕರೆ ಮಾಡಿ ಧೈರ್ಯ ತುಂಬಿದ ಸಿಎಂ ಶಿವಕುಮಾರ್‌!

ಆ ಮಗುವಿಗೆ ಈವರೆಗೂ ಆಗಿರುವ ಅನ್ಯಾಯಕ್ಕೆ ಆಸ್ಪತ್ರೆಯೇ ನೇರ ಹೊಣೆ. ಆದರೂ ಕೂಡ ಅವರು ಚೆಲ್ಲಾಟವಾಡುತ್ತಿರುವುದು ಖಂಡನೀಯ. ನಾಳೆ ಸಂಜೆ 4 ಗಂಟೆವರೆಗೂ ನಾನು ಕ್ಲೌಡ್ ನೈನ್ ಆಸ್ಪತ್ರೆಗೆ ಗಡುವು ನೀಡಿದ್ದು, ಅಷ್ಟರೊಳಗೆ ಆಸ್ಪತ್ರೆ ಆಡಳಿತ ಮಂಡಳಿ ನನ್ನ ಸಮ್ಮುಖದಲ್ಲಿ ಮಗುವಿನ ಪೋಷಕರನ್ನು ಭೇಟಿ ಮಾಡಿ ಆಗಿರುವ ಅನರ್ಥಕ್ಕೆ ಸಂಪೂರ್ಣ ಹೊಣೆ ಹೊರಬೇಕು. ಇಲ್ಲವಾದದಲ್ಲಿ ಈ ಕುರಿತಂತೆ ಪೋಷಕರ ಪರವಾಗಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement