ಸಾಂದರ್ಭಿಕ ಚಿತ್ರ 
ರಾಜ್ಯ

ಮೊದಲ ಬಾರಿ ಸಿಗ್ನಲ್ ಜಂಪ್ ಗೆ 3 ಸಾವಿರ, ಮರುಕಳಿಸಿದರೆ 5 ಸಾವಿರ ಫೈನ್: ನಿಯಮ ಉಲ್ಲಂಘನೆಗೆ ಭಾರೀ ದಂಡ ವಿಧಿಸಲು ಸರ್ಕಾರ ಪ್ಲಾನ್!

ಸಚಿವ ಭೈರತಿ ಸುರೇಶ್ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಸಭೆ ನಡೆದಿದ್ದು, ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಸಂಚಾರ ನಿಯಮಗಳ ಉಲ್ಲಂಘನೆಯೂ ಪ್ರಮುಖ ಕಾರಣವಾಗಿರುವ ಹಿನ್ನೆಲೆಯಲ್ಲಿ ದಂಡ ಹೆಚ್ಚಿಸುವ ಬಗ್ಗೆ ಚರ್ಚೆ ನಡೆದಿದೆ.

ಬೆಂಗಳೂರು: ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಸಂಚಾರ ನಿಯಮ ಉಲ್ಲಂಘನೆಗಳಿಗೆ ವಿಧಿಸುವ ದಂಡದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಸಾರಿಗೆ ಇಲಾಖೆ ಮತ್ತು ಗೃಹ ಇಲಾಖೆ ನಡುವೆ ಚರ್ಚೆ ನಡೆದಿದೆ.

ಬುಧವಾರ ನಡೆದ ಸಾರಿಗೆ ಇಲಾಖೆ ಮತ್ತು ಗೃಹ ಇಲಾಖೆಯ ಜಂಟಿ ಸಭೆಯಲ್ಲಿ, ಸಂಚಾರ ನಿಯಮ ಉಲ್ಲಂಘನೆಗಳಿಗೆ ಹೆಚ್ಚಿನ ದಂಡ ವಿಧಿಸುವ ಕುರಿತು ಚರ್ಚಿಸಲಾಗಿದೆ. ಸಚಿವ ಭೈರತಿ ಸುರೇಶ್ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಸಭೆ ನಡೆದಿದ್ದು, ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಸಂಚಾರ ನಿಯಮಗಳ ಉಲ್ಲಂಘನೆಯೂ ಪ್ರಮುಖ ಕಾರಣವಾಗಿರುವ ಹಿನ್ನೆಲೆಯಲ್ಲಿ ದಂಡ ಹೆಚ್ಚಿಸುವ ಬಗ್ಗೆ ಚರ್ಚೆ ನಡೆದಿದೆ.

ಫುಟ್‌ಪಾತ್‌ನಲ್ಲಿ ವಾಹನ ನಿಲುಗಡೆ, ಒನ್‌ವೇ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಾಲನೆ, ಫುಟ್‌ಪಾತ್ ಮೇಲೆ ಚಾಲನೆ, ಅನಧಿಕೃತ ಪಾರ್ಕಿಂಗ್, ನೋ ಪಾರ್ಕಿಂಗ್ ಉಲ್ಲಂಘನೆ, ಸಿಗ್ನಲ್ ಜಂಪ್ ಹಾಗೂ ಟ್ರಾಫಿಕ್ ಮುಕ್ತ ಸಂಚಾರಕ್ಕೆ ಅಡ್ಡಿಪಡಿಸುವುದು ಸೇರಿದಂತೆ ವಿವಿಧ ನಿಯಮ ಉಲ್ಲಂಘನೆಗಳಿಗೆ ದಂಡ ಹೆಚ್ಚಿಸುವ ಪ್ರಸ್ತಾವನೆ ಚರ್ಚೆಯಲ್ಲಿದೆ.

ಮೊದಲ ಉಲ್ಲಂಘನೆಗೆ ಪ್ರಸ್ತಾವಿತ ದಂಡ: ₹3,000 ಮರುಕಳಿಸಿದರೆ, ₹5,000, ಒನ್‌ವೇ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಾಲನೆ. ಮೊದಲ ಉಲ್ಲಂಘನೆಗೆ ಪ್ರಸ್ತಾವಿತ ದಂಡ: ₹3,000 ಮರುಕಳಿಸಿದರೆ, ₹5,000 ರು ಭಾರೀ ದಂಡ ವಿಧಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ.

ಇನ್ನೂ ಅಂಕ ಆಧಾರಿತ ಚಾಲನಾ ಪರವಾನಗಿ ವ್ಯವಸ್ಥೆಯನ್ನು ಪರಿಚಯಿಸಲಿದೆ. ಇದರಡಿ ವಿವಿಧ ಸಂಚಾರ ನಿಯಮ ಉಲ್ಲಂಘನೆಗಳಿಗೆ ಅಂಕಗಳನ್ನು ನಿಗದಿಪಡಿಸಲಾಗುತ್ತದೆ ಮತ್ತು ನಿಗದಿತ ಮಿತಿಯನ್ನು ತಲುಪಿದಾಗ ಚಾಲನಾ ಪರವಾನಗಿಯನ್ನು ರದ್ದುಪಡಿಸಲಾಗುತ್ತದೆ. ಈ ವ್ಯವಸ್ಥೆಯನ್ನು ಜಾರಿಗೆ ತರಲು ಅಗತ್ಯವಿರುವ ಕಾನೂನು ಕ್ರಮಗಳ ಕುರಿತು ಗೃಹ ಮತ್ತು ಸಾರಿಗೆ ಇಲಾಖೆಗಳ ಜಂಟಿ ಪರಿಶೀಲನಾ ಸಭೆಯಲ್ಲಿ ಚರ್ಚಿಸಲಾಗಿದೆ.

ಚಾಲನಾ ಪರವಾನಗಿ ಅಮಾನತು ಹಾಗೂ ಸಂಚಾರಿ ಉಲ್ಲಂಘನೆಗಳ ಮಾಹಿತಿಯ ಸಮಗ್ರ ನಿರ್ವಹಣೆಗಾಗಿ ಸಾರಿಗೆ ಇಲಾಖೆಯ ಸಾರಥಿ ವ್ಯವಸ್ಥೆಯನ್ನು ಬೆಂಗಳೂರು ಸಂಚಾರ ಪೊಲೀಸರ ಇ-ಚಲನ್ ವ್ಯವಸ್ಥೆಯೊಂದಿಗೆ ನೇರವಾಗಿ ಸಂಯೋಜಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಇದರಿಂದ ಕಾಗದ ಆಧಾರಿತ ಪ್ರಕ್ರಿಯೆ ಕಡಿಮೆಯಾಗಿ, ಸಂಚಾರಿ ನಿಯಮಗಳ ಜಾರಿ ಮತ್ತಷ್ಟು ಪರಿಣಾಮಕಾರಿಯಾಗುವ ನಿರೀಕ್ಷೆಯಿದೆ. ಈ ವ್ಯವಸ್ಥೆಯಿಂದ ಸಂಚಾರಿ ಪೊಲೀಸರಿಗೆ ಸ್ಥಳದಲ್ಲಿಯೇ ಚಾಲನಾ ಪರವಾನಗಿಯ ಸಿಂಧುತ್ವ ಪರಿಶೀಲಿಸಲು, ಚಾಲಕರ ಹಿಂದಿನ ಉಲ್ಲಂಘನೆಗಳ ವಿವರ ಪಡೆಯಲು ಹಾಗೂ ಹೊಸದಾಗಿ ದಾಖಲಿಸುವ ಪ್ರಕರಣಗಳನ್ನು ಚಾಲಕರ ಡಿಜಿಟಲ್ ದಾಖಲೆಯೊಂದಿಗೆ ನೇರವಾಗಿ ಜೋಡಿಸಲು ಸಾಧ್ಯವಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಶಾಸನಬದ್ಧ ಕಾರ್ಯವಿಧಾನ ಅನುಸರಿಸದೆ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡುವಂತಿಲ್ಲ: ಚುನಾವಣಾ ಆಯೋಗದ ವಿರುದ್ಧ ಹೈಕೋರ್ಟ್ ಕೆಂಡ..!

Flydubai ವಿಮಾನ ಹೈಜಾಕ್'ಗೆ ಯತ್ನ; ಕಾಕ್‌ಪಿಟ್‌ನಲ್ಲೇ ಡೆಡ್ಲಿ ಫೈಟ್; 174 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಸಾಹಸಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ..!

ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ: ವಾಣಿಜ್ಯ ಸಿಲಿಂಡರ್ ಬೆಲೆ 62.50 ರೂ. ಹೆಚ್ಚಳ, ವಿಮಾನ ಇಂಧನವೂ ದುಬಾರಿ..!

ಕಾಂಗ್ರೆಸ್‌ನಲ್ಲಿ ಮತ್ತೆ ಸಂಪುಟ ಸರ್ಕಸ್: ದೆಹಲಿಯಲ್ಲಿ ವೇಣುಗೋಪಾಲ್ ಭೇಟಿಯಾದ ಸಿದ್ದರಾಮಯ್ಯ, ಖಾಲಿ ಇರೋ 2 ಸಚಿವ ಸ್ಥಾನ ಭರ್ತಿಗೆ ಪಟ್ಟು..!

ಡಿಕೆಶಿ ಕನಸಿನ ಅವಳಿ ಸುರಂಗ ಮಾರ್ಗಕ್ಕೆ ಹೊಸ ಕಂಟಕ: ಹೆಬ್ಬಾಳ ಕೆರೆಯ 3.45 ಎಕರೆ ಜೌಗು ಪ್ರದೇಶ ನಾಶಕ್ಕೆ ಯತ್ನ, ಎದುರಾಯ್ತು ಕಾನೂನು ಸಂಕಷ್ಟ..!