ಶಾಸನ  
ರಾಜ್ಯ

ಕಳ್ಳತನಕ್ಕೆ ‘ಶಾಪದ ಶಿಕ್ಷೆ’: ಬಳ್ಳಾರಿಯಲ್ಲಿ ಅಪರೂಪದ ಶಾಸನ ಪತ್ತೆ..!

ರೈತ ತಾಯಪ್ಪ ಅವರಿಗೆ ಸೇರಿದ ಜಮೀನಿನಲ್ಲಿ ಪತ್ತೆಯಾಗಿರುವ ನಾಲ್ಕು ಸಾಲಿನ ಈ ಶಾಸನವು ಸುಮಾರು ಮೂರು ಅಡಿ ಎತ್ತರ ಹಾಗೂ ಒಂದೂವರೆ ಅಡಿ ಅಗಲವಿದೆ.

ಬಳ್ಳಾರಿ: ಇತಿಹಾಸ ಪ್ರಸಿದ್ಧ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ದೊಡ್ಡ ಅಂತಾಪುರ ಗ್ರಾಮದಲ್ಲಿ ಕೃಷಿ ಜಮೀನಿನ ಕಟ್ಟೆಯ ಮೇಲೆ ಇತಿಹಾಸಕಾರರ ಗಮನ ಸೆಳೆಯುವಂತಹ ಅತ್ಯಂತ ಅಪರೂಪದ ಶಾಸನವೊಂದು ಪತ್ತೆಯಾಗಿದೆ.

ಸಾಮಾನ್ಯವಾಗಿ ರಾಜರ ವಿಜಯಗಾಥೆ ಅಥವಾ ದೇವಸ್ಥಾನಗಳ ದಾನದತ್ತಿ ಇತಿಹಾಸದ ಶಾಸನಗಳನ್ನು ನಾವು ಕೇಳಿರುತ್ತೇವೆ. ಆದರೆ, ಈ ಶಾಸನವು ಕಳ್ಳತನದ ವಿರುದ್ಧ ಕಠಿಣ ಸಾಂಪ್ರದಾಯಿಕ ಶಾಪವನ್ನು ಹೊಂದಿರುವುದು ಇತಿಹಾಸ ತಜ್ಞರಲ್ಲಿ ಕುತೂಹಲ ಕೆರಳಿಸಿದೆ.

ವಿಜಯನಗರ ಸಾಮ್ರಾಜ್ಯದ ನಂತರದ ಅವಧಿಯ ಈ ಶಾಸನವು ಅಂದಿನ ಕೃಷಿ ಪದ್ಧತಿ, ಆಸ್ತಿ ರಕ್ಷಣೆ ಹಾಗೂ ಸಾಮಾಜಿಕ ನಂಬಿಕೆಗಳ ಕುರಿತು ಮಹತ್ವದ ಮಾಹಿತಿ ನೀಡಿದೆ.

ರೈತ ತಾಯಪ್ಪ ಅವರಿಗೆ ಸೇರಿದ ಜಮೀನಿನಲ್ಲಿ ಪತ್ತೆಯಾಗಿರುವ ನಾಲ್ಕು ಸಾಲಿನ ಈ ಶಾಸನವು ಸುಮಾರು ಮೂರು ಅಡಿ ಎತ್ತರ ಹಾಗೂ ಒಂದೂವರೆ ಅಡಿ ಅಗಲವಿದೆ. ಶಾಸನದ ಲಿಪಿ ಮತ್ತು ಶೈಲಿಯನ್ನು ಆಧರಿಸಿ, ವಿಜಯನಗರ ಸಾಮ್ರಾಜ್ಯದ ಬಳಿಕ ಸ್ಥಳೀಯ ಪಾಳೇಗಾರರು ಆಳ್ವಿಕೆ ನಡೆಸುತ್ತಿದ್ದ ಕಾಲಕ್ಕೆ ಸೇರಿದ್ದಿರಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ. ವಿಜಯನಗರ ಸಂಶೋಧನಾ ತಂಡವು ಕ್ಷೇತ್ರ ಸಮೀಕ್ಷೆ ನಡೆಸುವ ವೇಳೆ ಈ ಶಾಸನವನ್ನು ಪತ್ತೆ ಮಾಡಿದೆ.

ಶಾಸನದಲ್ಲಿ ಕಡಬ ಎಂಬ ವ್ಯಕ್ತಿ ಹಾಗೂ ಆತನ ಕೃಷಿ ಜಮೀನಿನ ಉಲ್ಲೇಖವಿದೆ. ಅಲ್ಲದೆ, ಕೃಷಿ ಚಟುವಟಿಕೆಯಲ್ಲಿ ಬಳಸುತ್ತಿದ್ದ ‘ಸೆದೆ’ ಎಂಬ ವಸ್ತುವನ್ನು ಕಳ್ಳತನ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.

ಕಳ್ಳತನವನ್ನು ತಡೆಯಲು ಹಾಗೂ ಕೃಷಿ ಆಸ್ತಿಯನ್ನು ರಕ್ಷಿಸಲು ಧಾರ್ಮಿಕ ಮತ್ತು ಸಾಮಾಜಿಕ ನಂಬಿಕೆಗಳನ್ನು ಆಧರಿಸಿದ ಇಂತಹ ಕಠಿಣ ಶಾಪದ ಮಾತುಗಳನ್ನು ಅಂದಿನ ಕಾಲದಲ್ಲಿ ಬಳಸಲಾಗುತ್ತಿತ್ತು ಎಂದು ಸಂಶೋಧಕರು ತಿಳಿಸಿದ್ದಾರೆ.

ಶಾಸನದ ಬರಹದ ಕೆಳಭಾಗದಲ್ಲಿ ವಿಶಿಷ್ಟ ಮಾನವ ಶಿಲ್ಪವೂ ಇದೆ. ಅಸಾಮಾನ್ಯ ಭಂಗಿಯಲ್ಲಿ ನಿಂತಿರುವ ವ್ಯಕ್ತಿಯ ಆಕೃತಿಯನ್ನು ಇದರಲ್ಲಿ ಕೆತ್ತಲಾಗಿದೆ.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ಎಚ್. ತಿಪ್ಪೇಸ್ವಾಮಿ ಮಾತನಾಡಿ, ಮಾನವ ಶಿಲ್ಪ ಹಾಗೂ ಅಪರೂಪದ ಶಾಪದ ಉಲ್ಲೇಖ ಈ ಶಾಸನವನ್ನು ವಿಶೇಷವಾಗಿಸಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR Row: ನೋಟಿಸ್ ನೀಡದೆ, ವಿಚಾರಣೆಯಿಲ್ಲದೆ ಮತದಾರರ ಹೆಸರು ತೆಗೆದುಹಾಕುವಂತಿಲ್ಲ- ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್!

ಏಷ್ಯನ್ ಗೇಮ್ಸ್‌ 2026: ಭಾರತ ಚಿನ್ನದ ಪದಕ ಗೆದ್ದ ಬಳಿಕ ಜಪಾನ್‌ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿದ ಭಾರತೀಯ ಅಭಿಮಾನಿಗಳು! Video

'It Was Scripted': ದೇಶದಲ್ಲಿ ಈಗ ಶಾಂತಿಯ ಅನುಭವವಾಗುತ್ತಿಲ್ಲ, ಹೇಳಿಕೆಗೆ ಸ್ಪಷ್ಟನೆ ಕೊಟ್ಟ ಸಂಜಯ್ ದತ್!

ಕುಸಿದ ಅಮೆರಿಕ: ಬದಲಾಗ್ತಿದೆ ವಿಶ್ವದ ದೊಡ್ಡಣ್ಣನ ಸ್ಥಾನ; ಇನ್ಮುಂದೆ EMPs ಪ್ರಬಲ- EAM Jaishankar

'ನನಗೆ ಸಾವಿನ ಭಯವಿರಲಿಲ್ಲ': ವಿಮಾನವನ್ನು ಪತನಗೊಳಿಸುವುದೇ ಉದ್ದೇಶವಾಗಿತ್ತು! ಸಹ-ಪೈಲಟ್ ಹಮ್ಮಾಮಿ ಹೇಳಿಕೆ