ಸಾಂದರ್ಭಿಕ ಚಿತ್ರ 
ರಾಜ್ಯ

ಎಲ್ ನಿನೋ ಎಫೆಕ್ಟ್: ಗಗನಕ್ಕೆರಿದ ಬೇಳೆಕಾಳುಗಳ ಬೆಲೆ, ಹಬ್ಬದ ಸಂಭ್ರಮಕ್ಕೆ ತಣ್ಣೀರು!

ದೇಶಾದ್ಯಂತ ಮುಂಗಾರು ಮಳೆ ಸಂಪೂರ್ಣವಾಗಿ ಕೈ ಕೊಟ್ಟಿದೆ. ಇದರ ಪರಿಣಾಮ ತೊಗರಿ ಮೇಲು ಸಹ ಇದರ ಎಫೆಕ್ಟ್ ಆಗಿದ್ದು, ಕಳೆದ 15 ದಿನಗಳ ಅಂತರದಲ್ಲಿಯೇ ಪ್ರತಿ ಕೆಜಿ ತೊಗರಿ ಬೇಳೆಯಲ್ಲಿ 30 ರೂ. ದರ ಏರಿಕೆಯಾಗಿದ್ದು,

ಎಲ್ ನಿನೋ ಎಫೆಕ್ಟ್‌ನಿಂದ ಮಳೆ ಕೊರತೆ ಉಂಟಾಗಿ ತೊಗರಿ ಬೇಳೆ ಇಳುವರಿ ಕುಸಿದಿದೆ. ಇದರ ಪರಿಣಾಮ ತೊಗರಿ ಬೆಳೆ ಸೇರಿದಂತೆ ಹಲವು ಕಾಳುಗಳ ದರ ಗಗನೆಕ್ಕೇರಿದೆ. ಮುಂದಿನ ದಿನಗಳಲ್ಲಿ ಸಹ ಊಹಿಸಲಾರದಷ್ಟು ತೊಗರಿ ಬೇಳೆ ದರದಲ್ಲಿ ಏರಿಕೆಯಾಗುವ ಲಕ್ಷಣವಿದೆ.

ದೇಶಾದ್ಯಂತ ಮುಂಗಾರು ಮಳೆ ಸಂಪೂರ್ಣವಾಗಿ ಕೈ ಕೊಟ್ಟಿದೆ. ಇದರ ಪರಿಣಾಮ ತೊಗರಿ ಮೇಲು ಸಹ ಇದರ ಎಫೆಕ್ಟ್ ಆಗಿದ್ದು, ಕಳೆದ 15 ದಿನಗಳ ಅಂತರದಲ್ಲಿಯೇ ಪ್ರತಿ ಕೆಜಿ ತೊಗರಿ ಬೇಳೆಯಲ್ಲಿ 30 ರೂ. ದರ ಏರಿಕೆಯಾಗಿದ್ದು, ಈ ಮೂಲಕ ಸಾಲು ಸಾಲು ಹಬ್ಬಗಳ ಸೀಸನ್‌ನಲ್ಲಿ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.

ಮಧ್ಯಮ ಮತ್ತು ಕಡಿಮೆ ಆದಾಯದ ಕುಟುಂಬಗಳು ತಮ್ಮ ಮಾಸಿಕ ಬಜೆಟ್‌ನಲ್ಲಿ ತೀವ್ರ ಒತ್ತಡವನ್ನು ಎದುರಿಸುತ್ತಿವೆ. ಪ್ರಮುಖ ಹಬ್ಬದ ಋತುವಿನ ಆರಂಭದಲ್ಲಿಯೇ ಸಂಭವಿಸಿರುವ ಈ ಭಾರಿ ಬೆಲೆ ಏರಿಕೆಯು, ಅಡುಗೆಮನೆಯ ವೆಚ್ಚವನ್ನು ಹೆಚ್ಚಿಸುವುದರೊಂದಿಗೆ ಹಬ್ಬದ ಸಂಭ್ರಮಕ್ಕೆ ತಣ್ಣೀರು ಎರಚಿದೆ.

ಅಸ್ಥಿರ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಉಂಟಾದ ತೀವ್ರ ಪೂರೈಕೆ ಕೊರತೆ. "ಇದಕ್ಕೆ ಹಲವು ಕಾರಣಗಳಿದ್ದರೂ, ದೇಶದ ಪ್ರಮುಖ ಕೃಷಿ ವಲಯಗಳಲ್ಲಿ ಮಳೆಯ ಕೊರತೆಯೇ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಮತ್ತು ಪ್ರಮುಖ ಸಗಟು ವ್ಯಾಪಾರಿಗಳು ತಿಳಿಸಿದ್ದಾರೆ.

ಅ.1ರಂದು ಸಾಮಾನ್ಯ ಗುಣಮಟ್ಟದ ಪ್ರತಿ ಕೆ.ಜಿ ತೊಗರಿ ಬೇಳೆ ದರವು 110 ರೂ. ಇತ್ತು, ಆದರೆ ಇದೀಗ ಕಳೆದ 15 ದಿನಗಳ ಅಂತರದಲ್ಲಿಯೇ ಪ್ರತಿ ಕೆಜಿಗೆ 30 ರೂಪಾಯಿ ಏರಿಕೆಯಾಗಿದೆ. ಇದೀಗ ಪ್ರತಿ ಕೆಜಿ ತೊಗರಿ ಬೇಳೆ ದರ 140 ರೂ. ಏರಿಕೆಯಾಗಿದೆ. ಪ್ರೀಮಿಯಂ ಗುಣಮಟ್ಟದ ತೊಗರಿ ಬೇಳೆ ದರವು ಅ.1 ರಂದು ಪ್ರತಿ ಕೆ.ಜಿಗೆ 146 ಇತ್ತು ಇದೀಗ 160 ರೂ.ಗೆ ಏರಿಕೆಯಾಗಿದೆ. ಈ ಮೂಲಕ ತೊಗರಿ ಬೇಳೆ ಇದೇ ಮೊದಲ ಬಾರಿಗೆ ದಾಖಲೆ ಮಟ್ಟದಲ್ಲಿ ಏರಿಕೆಯಾಗಿ ಜನರ ಜೇಬಿಗೆ ಕತ್ತರಿ ಹಾಕಿದೆ.

ಒಂದೆಡೆ ಬರ ಮತ್ತೊಂದೆಡೆ ಹಬ್ಬದ ಸೀಸನ್‌ನಿಂದಾಗಿ ತೊಗರಿ ಬೇಳೆ ದರ ನಿತ್ಯ ಏರುತ್ತಿದೆ. ಅಂದ ಹಾಗೆ ಕಳೆದ ತಿಂಗಳು ಪ್ರತಿ ಕ್ವಿಂಟಲ್ ತೊಗರಿಗೆ ಕನಿಷ್ಠ 7,100ರಿಂದ ಗರಿಷ್ಠ 9,500 ದರವಿತ್ತು. ಆದೇ ಅ.1 ರಂದು ಕನಿಷ್ಠ 8,500 ಹಾಗೂ ಗರಿಷ್ಠ 10 ಸಾವಿರ ರೂ. ದರ ಏರಿಕೆ ಮೂಲಕ ಕಳೆದ 15 ದಿನಗಳಲ್ಲಿ ಪ್ರತಿ ಕ್ವಿಂಟಲ್‌ಗೆ 1,500ರಷ್ಟು ಏರಿಕೆಯಾಗಿದೆ.

ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿ 6.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಗುರಿ ಹೊಂದಲಾಗಿತ್ತು. ಮಳೆ ಕೊರತೆಯಿಂದ ಬರೀ 5.34 ಲಕ್ಷ ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆಯಾಗಿದೆ. ಬರ ಆವರಿಸಿದ್ದರಿಂದ 5.34 ಲಕ್ಷ ಹೆಕ್ಟೇರ್ ಪೈಕಿ 4.04 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತಿದ ತೊಗರಿ ಹಾಳಾಗಿದೆ. ಈ ಪ್ರಮಾಣದಲ್ಲಿ ತೊಗರಿ ಬೆಳೆ ಕೈ ಕೊಟ್ಟ ಹಿನ್ನೆಲೆ ತೊಗರಿ ಬೇಳೆ ದರದಲ್ಲಿ ಭಾರಿ ಏರಿಕೆಯಾಗಿದೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ನೇರವಿಗೆ ಬರಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.

ಹಬ್ಬದ ಸಂದರ್ಭದಲ್ಲಿ ಹೆಚ್ಚಾಗುವ ಬೇಡಿಕೆ ಮತ್ತು ಸೀಮಿತ ಪೂರೈಕೆಯ ನಡುವಿನ ಅಸಮತೋಲನದಿಂದಾಗಿ, ಮುಂದಿನ ವಾರಗಳಲ್ಲಿ ಚಿಲ್ಲರೆ ಬೆಲೆಗಳು ಇನ್ನೂ ಹೆಚ್ಚಾಗಬಹುದು ಎಂದು ಮಾರುಕಟ್ಟೆ ತಜ್ಞರು ಎಚ್ಚರಿಸಿದ್ದಾರೆ. ಈ ಬೆಲೆ ಏರಿಕೆಯ ಪರಿಣಾಮವು ಸಾಮಾನ್ಯವಾಗಿ ಬಳಸುವ ಬಹುತೇಕ ಎಲ್ಲಾ ಬೇಳೆಕಾಳುಗಳ ಮೇಲೆ ಕಂಡುಬರುತ್ತಿದೆ. ಮನೆಗಳಲ್ಲಿ ನಿತ್ಯವೂ ಬಳಸುವ ತೊಗರಿ ಬೇಳೆಯ ಬೆಲೆ ಕೆಜಿಗೆ 120 ರೂಪಾಯಿಯಿಂದ 150 ರೂಪಾಯಿಗೆ ಏರಿಕೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lehra Do Tiranga ಮೆರವಣಿಗೆ: CEC ರಾಜೀನಾಮೆ ಆಗ್ರಹಿಸಿ ದೆಹಲಿಯಲ್ಲಿ ಹೈಡ್ರಾಮಾ; ಪ್ರತಿಭಟನೆಗೂ ಮುನ್ನ ವಶಕ್ಕೆ ಪಡೆದಿದ್ದ ನೆಹಾ ಬೋರಾ ಬಿಡುಗಡೆ, ಅಭಿಜೀತ್ ದೀಪ್ಕೆಗಿಲ್ಲ ರಿಲೀಫ್..!

BJP ಹಿರಿಯ ನಾಯಕ ಎಲ್‌ಕೆ ಅಡ್ವಾಣಿಗೆ ಅನಾರೋಗ್ಯ; ದೆಹಲಿ ಅಪೋಲೋ ಆಸ್ಪತ್ರೆಗೆ ದಾಖಲು..!

Sting operation ವಿವಾದ: ‘ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ’ ಎಂದ ಡಿಕೆಶಿ, ಗೃಹ ಸಚಿವರ ಜೊತೆ ಮಹತ್ವದ ಚರ್ಚೆ, ಪ್ರಿಯಾಂಕ್ ಖರ್ಗೆ ಹೆಗಲಿಗೆ ತನಿಖೆ ಜವಾಬ್ದಾರಿ..!

ಕಾಂಗ್ರೆಸ್‌ನಲ್ಲಿ ಸ್ಟಿಂಗ್ ಆಪರೇಷನ್ ಕಿಚ್ಚು: ಸಿದ್ದರಾಮಯ್ಯರನ್ನು ಇಂತಹ ಸ್ಥಿತಿಗೆ ತಳ್ಳಬಾರದಿತ್ತು, ಕೋಟಿ ಕೋಟಿ ಹಣ ಎಲ್ಲಿಂದ ಬಂತು..?

ಸ್ಟಿಂಗ್ ಆಪರೇಷನ್ ವಿಚಾರ ಪ್ರಸ್ತಾಪಿಸಿದ್ದು ಡಿಕೆ.ಶಿವಕುಮಾರ್, ತನಿಖೆಯಾಗದಿದ್ದರೆ ಅವರ ಮೇಲೆಯೇ ಅನುಮಾನ: ಸಂಸದ ಬೊಮ್ಮಾಯಿ