CM ಡಿಕೆಶಿಗೆ ಆಹ್ವಾನ ಪತ್ರಿಕೆ ನೀಡಿದ ಕಲಾನಿಧಿ ಮಾರನ್ ದಂಪತಿ 
ರಾಜ್ಯ

ನವೆಂಬರ್‌ನಲ್ಲಿ ಅನಿರುದ್ಧ್ - ಕಾವ್ಯಾ ಮಾರನ್ ಮದುವೆ; CM ಡಿಕೆಶಿಗೆ ಆಹ್ವಾನ ಪತ್ರಿಕೆ ನೀಡಿದ ಕಲಾನಿಧಿ ಮಾರನ್ ದಂಪತಿ!

ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್ ಗ್ರೂಪ್ ಮಾಲೀಕ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯಾ ಮಾರನ್ ಅವರ ವಿವಾಹ ನವೆಂಬರ್ ತಿಂಗಳಲ್ಲಿ ನಡೆಯಲಿದೆ.

ಚೆನ್ನೈ: ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲೀಕೆ ಕಾವ್ಯಾ ಮಾರನ್ ಅವರು ನವೆಂಬರ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವುದು ಅಧಿಕೃತವಾಗಿದೆ.

ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್ ಗ್ರೂಪ್ ಮಾಲೀಕ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯಾ ಮಾರನ್ ಅವರ ವಿವಾಹ ನವೆಂಬರ್ ತಿಂಗಳಲ್ಲಿ ನಡೆಯಲಿದೆ.

ಈಗಾಗಲೇ ಮದುವೆ ಕಾರ್ಯಗಳು ಆರಂಭವಾಗಿದ್ದು, ಹಲವು ಗಣ್ಯರಿಗೆ ಮದುವೆಯ ಆಹ್ವಾನ ಪತ್ರಿಕೆಗಳನ್ನು ನೀಡಲಾಗುತ್ತಿದೆ. ಅದರಂತೆ ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರಿಗೂ ಮದುವೆ ಆಹ್ವಾನ ಪತ್ರಿಕೆ ನೀಡಲಾಗಿದೆ.

ಸನ್​ ಟಿವಿ ಗ್ರೂಪ್ ಅಧ್ಯಕ್ಷ ಕಲಾನಿಧಿ ಮಾರನ್​​ ಮತ್ತು ಅವರ ಪತ್ನಿ ಕಾವೇರಿ ಮಾರನ್​​ ಅವರು ಶನಿವಾರ ಬೆಂಗಳೂರಿನಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ, ತಮ್ಮ ಮಗಳ ಮದುವೆಯ ಆಮಂತ್ರಣ ನೀಡಿದ್ದಾರೆ. ಈ ವೇಳೆ ಕಾವ್ಯ ಕಲಾನಿಧಿ ಅವರು ಕೂಡ ಜೊತೆಗಿದ್ದರು.

ಇನ್ನು ಮಾರನ್ ದಂಪತಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೂ ಆಹ್ವಾನ ಪತ್ರಿಕೆ ನೀಡಿದ್ದಾರೆ. ತೆಲಂಗಾಣ ಮುಖ್ಯಮಂತ್ರಿಯವರ ಅಧಿಕೃತ 'ಎಕ್ಸ್' (X) ಖಾತೆಯಲ್ಲಿ ರೇವಂತ್ ರೆಡ್ಡಿ ಅವರು ಕಾವ್ಯಾ ಅವರ ಪೋಷಕರಾದ ಕಲಾನಿಧಿ ಮಾರನ್ ಮತ್ತು ಕಾವೇರಿ ಮಾರನ್ ಅವರೊಂದಿಗೆ ಇರುವ ಫೋಟೋ ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ನವೆಂಬರ್ 21 ರಂದು ಚೆನ್ನೈನಲ್ಲಿ ಆರತಕ್ಷತೆ ನಡೆಯಲಿದೆ ಎಂದೂ ಸಹ ಬಹಿರಂಗಪಡಿಸಿದ್ದಾರೆ.

ಅನಿರುದ್ಧ್ ಮತ್ತು ಕಾವ್ಯಾ ಅವರ ವಿವಾಹ ನವೆಂಬರ್ 11ರಂದು ಗ್ರೀಸ್‌ನಲ್ಲಿ ನಡೆಯಲಿದೆ. ಬಳಿಕ ನವೆಂಬರ್ 21 ರಂದು ಚೆನ್ನೈನಲ್ಲಿ ಆರತಕ್ಷತೆ ನಡೆಯಲಿದೆ.

ಚಿತ್ರರಂಗದ ನಟ, ನಟಿಯರು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖ ರಾಜಕಾರಣಿಗಳಿಗೆ ಕಲಾನಿಧಿ ಮಾರನ್​​ ದಂಪತಿ ಖುದ್ದಾಗಿ ತಾವೇ ಆಹ್ವಾನ ಪತ್ರಿಕೆಯನ್ನ ನೀಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾನೇ ವಿಡಿಯೋ ಮಾಡಿದ್ದೇನೆಂದು ಕಿಂಗ್ ಪಿನ್ ಹೇಳಿದ್ದಾರೆ; ಇದನ್ನೆಲ್ಲ ನೋಡಿ ಸಿದ್ದರಾಮಯ್ಯ ರಕ್ತ ಕುದಿಯುತ್ತಿಲ್ವಾ?: HDK

ಅಭಿಜಿತ್ ದೀಪ್ಕೆಗೆ ಷರತ್ತುಬದ್ಧ ಜಾಮೀನು; ಬಾಂಡ್‌ ಗೆ ಸಹಿ ಹಾಕಿಸಿ ಬಿಡುಗಡೆ

ಜಲಪಾತದಲ್ಲಿ ಮೋಜು-ಮಸ್ತಿ: ಜಾರಿಕೊಂಡು ಹೋಗಿ ಯುವತಿ ಸಾವು, ಸ್ನೇಹಿತರ ರಕ್ಷಣಾ ಪ್ರಯತ್ನವೂ ವಿಫಲ! Video

ನ. 1ರಂದು ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ರ್ಯಾಲಿಗೆ ದೆಹಲಿ ಪೊಲೀಸರಿಂದ ಅನುಮತಿ!

ರಾಜಕೀಯವಾಗಿ ಸಿದ್ದರಾಮಯ್ಯರನ್ನು ಮುಗಿಸಿದರೆ ಕೆಲವರ ಹಾದಿ ಸುಲಭ: 'ಸ್ಟಿಂಗ್' ಹಿಂದಿನ ಲೆಕ್ಕಾಚಾರ ಬಿಚ್ಚಿಟ್ಟ ಎಚ್‌ ವಿಶ್ವನಾಥ್!