ವಿಜ್ಞಾನಿಗಳ ತಂಡಗಳು ಸೂರ್ಯನ ಸಮೀಪದ ಪ್ರದೇಶದಲ್ಲಿ ಸೌರ ಕರೋನಲ್ ಮಾಸ್ ಇಜೆಕ್ಷನ್‌ಗಳ (CME) ದ್ರವ್ಯರಾಶಿ, ಸಾಂದ್ರತೆ ಮತ್ತು ಶಕ್ತಿಯ ಪ್ರಮಾಣವನ್ನು ಅಳೆಯಿವೆ.  
ರಾಜ್ಯ

ಸೌರ ಸ್ಫೋಟಗಳ ಅಧ್ಯಯನ: ಭಾರತ-ಯುರೋಪ್ ವಿಜ್ಞಾನಿಗಳ ಜಂಟಿ ಪ್ರಯತ್ನ

ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ (IIA)ಯ ವಿಜ್ಞಾನಿಗಳು, ಆದಿತ್ಯ-ಎಲ್1ನಲ್ಲಿರುವ ವಿಇಎಲ್‌ಸಿ (VELC) ಪೇಲೋಡ್‌ನಿಂದ ಪಡೆದ ಅವಲೋಕನಗಳನ್ನು ಪ್ರೋಬಾ-3ನಲ್ಲಿರುವ ಎಎಸ್‌ಪಿಐಐಸಿಎಸ್‌ (ASPIICS) ಪೇಲೋಡ್‌ನ ಅವಲೋಕನಗಳೊಂದಿಗೆ ಸಂಯೋಜಿಸಿ, ಸೌರ ಕರೋನಲ್ ಮಾಸ್ ಇಜೆಕ್ಷನ್‌ (CME) ಅಧ್ಯಯನ ಮಾಡಿದ್ದಾರೆ.

ಬೆಂಗಳೂರು: ಇದೇ ಮೊದಲ ಬಾರಿಗೆ ಭಾರತದ ಆದಿತ್ಯ-ಎಲ್1 ಮತ್ತು ಯುರೋಪ್‌ನ ಪ್ರೋಬಾ-3 ಬಾಹ್ಯಾಕಾಶ ಅಭಿಯಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿಗಳು ಸೂರ್ಯನ ಸ್ಫೋಟಗಳನ್ನು ಜಂಟಿಯಾಗಿ ಅಧ್ಯಯನ ಮಾಡಿದ್ದಾರೆ.

ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ (IIA)ಯ ವಿಜ್ಞಾನಿಗಳು, ಆದಿತ್ಯ-ಎಲ್1ನಲ್ಲಿರುವ ವಿಇಎಲ್‌ಸಿ (VELC) ಪೇಲೋಡ್‌ನಿಂದ ಪಡೆದ ಅವಲೋಕನಗಳನ್ನು ಪ್ರೋಬಾ-3ನಲ್ಲಿರುವ ಎಎಸ್‌ಪಿಐಐಸಿಎಸ್‌ (ASPIICS) ಪೇಲೋಡ್‌ನ ಅವಲೋಕನಗಳೊಂದಿಗೆ ಸಂಯೋಜಿಸಿ, ಸೌರ ಕರೋನಲ್ ಮಾಸ್ ಇಜೆಕ್ಷನ್‌ (CME) ಗಳನ್ನು ಅಧ್ಯಯನ ಮಾಡಿದ್ದಾರೆ.

ವಿಜ್ಞಾನಿಗಳ ತಂಡಗಳು ಸೂರ್ಯನಿಗೆ ಸಮೀಪದ ಪ್ರದೇಶದಲ್ಲಿ ಸೌರ ಕರೋನಲ್ ಮಾಸ್ ಇಜೆಕ್ಷನ್‌ಗಳ ದ್ರವ್ಯರಾಶಿ, ಸಾಂದ್ರತೆ ಮತ್ತು ಶಕ್ತಿಯ ಪ್ರಮಾಣವನ್ನು ಅಳೆಯುವಲ್ಲಿ ಯಶಸ್ವಿಯಾಗಿವೆ. ಈ ಅಧ್ಯಯನವು ಆಸ್ಟ್ರಾನಮಿ ಆ್ಯಂಡ್ ಆಸ್ಟ್ರೋಫಿಸಿಕ್ಸ್ ನಿಯತಕಾಲಿಕದಲ್ಲಿಯೂ ಪ್ರಕಟವಾಗಿದೆ.

ಸೂರ್ಯನ ಸಮೀಪದಲ್ಲೇ ಸಿಎಂಇಗಳ ವಿವಿಧ ಮಾನದಂಡಗಳನ್ನು ಅಳೆಯುವುದು, ಅವುಗಳ ಗುಣಲಕ್ಷಣಗಳನ್ನು ರೂಪಿಸುವ ಭೌತಿಕ ಪ್ರಕ್ರಿಯೆಗಳು ಮತ್ತು ನಂತರದ ವಿಕಾಸವನ್ನು ಅರ್ಥಮಾಡಿಕೊಳ್ಳಲು ಅತ್ಯಂತ ಮಹತ್ವದ್ದಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಆದರೆ, ಸೂರ್ಯನ ಮೇಲ್ಮೈಗೆ ಅತ್ಯಂತ ಸಮೀಪದಲ್ಲಿ ಸಂಭವಿಸುವ ಸಿಎಂಇಗಳನ್ನು ವೀಕ್ಷಿಸುವುದು ಸವಾಲಿನ ಕೆಲಸವಾಗಿದೆ. ಈ ಹಿಂದೆ ಬಳಸಲಾಗಿದ್ದ ಬಾಹ್ಯಾಕಾಶ ಕೊರೊನಾಗ್ರಾಫ್‌ಗಳು ಅವುಗಳನ್ನು ಭಾಗಶಃ ಮಾತ್ರ ವೀಕ್ಷಿಸುವಲ್ಲಿ ಯಶಸ್ವಿಯಾಗಿದ್ದವು. ಅಲ್ಲದೆ, ಮಂದವಾದ ಸಿಎಂಇಗಳ ಆರಂಭಿಕ ಬೆಳವಣಿಗೆಯನ್ನು ನಿರಂತರವಾಗಿ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.

ಈಗ ಎರಡು ಪೇಲೋಡ್‌ಗಳ ಸಾಮರ್ಥ್ಯವನ್ನು ಸಂಯೋಜಿಸುವುದರಿಂದ ಸೌರ ಸ್ಫೋಟಗಳ ಕುರಿತು ಇನ್ನಷ್ಟು ಆಳವಾದ ತಿಳಿವಳಿಕೆ ಪಡೆಯಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದಿತ್ಯ-ಎಲ್1 ಮತ್ತು ಪ್ರೋಬಾ-3ನಲ್ಲಿರುವ ಕೊರೊನಾಗ್ರಾಫ್‌ಗಳು ಸೂರ್ಯನ ಕರೋನಾ ವಲಯದ ಬಹುತೇಕ ಒಂದೇ ಭಾಗವನ್ನು ಎರಡು ವಿಭಿನ್ನ ವಿಧಾನಗಳಲ್ಲಿ ಜಂಟಿಯಾಗಿ ವೀಕ್ಷಿಸಿವೆ. ಒಂದೇ ಬಾಹ್ಯಾಕಾಶ ನೌಕೆಯಿಂದ ನಡೆಸುವ ಅವಲೋಕನಗಳಿಗೆ ಹೋಲಿಸಿದರೆ, ಈ ಜಂಟಿ ಅಧ್ಯಯನವು ಸಿಎಂಇಗಳ ವಿಕಾಸದ ಕುರಿತು ಹೆಚ್ಚಿನ ಒಳನೋಟಗಳನ್ನು ಒದಗಿಸುತ್ತದೆ.

ಎರಡೂ ಪ್ರಕರಣಗಳಲ್ಲಿ ಸೌರ ಸ್ಫೋಟಗಳನ್ನು ಆರಂಭಿಕ ಹಂತದಲ್ಲೇ ವಿಇಎಲ್‌ಸಿ ಪತ್ತೆಹಚ್ಚಿದೆ. ಇದು ಈ ಎರಡು ಉಪಕರಣಗಳು ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸುವುದನ್ನು ತೋರಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ವಸ್ತುಗಳ ಸುಂಕಗಳಿಗೆ ಡೊನಾಲ್ಡ್ ಟ್ರಂಪ್ ವಿನಾಯಿತಿ; ತೈಲ ಆಮದಿಗೆ ಭಾರತ ನಿಟ್ಟುಸಿರು

Lehra Do Tiranga ಮೆರವಣಿಗೆ: CEC ರಾಜೀನಾಮೆ ಆಗ್ರಹಿಸಿ ದೆಹಲಿಯಲ್ಲಿ ಹೈಡ್ರಾಮಾ; ಪ್ರತಿಭಟನೆಗೂ ಮುನ್ನ ವಶಕ್ಕೆ ಪಡೆದಿದ್ದ ನೆಹಾ ಬೋರಾ ಬಿಡುಗಡೆ, ಅಭಿಜೀತ್ ದೀಪ್ಕೆಗಿಲ್ಲ ರಿಲೀಫ್..!

BJP ಹಿರಿಯ ನಾಯಕ ಎಲ್‌ಕೆ ಅಡ್ವಾಣಿಗೆ ಅನಾರೋಗ್ಯ; ದೆಹಲಿ ಅಪೋಲೋ ಆಸ್ಪತ್ರೆಗೆ ದಾಖಲು..!

Sting operation ವಿವಾದ: ‘ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ’ ಎಂದ ಡಿಕೆಶಿ, ಗೃಹ ಸಚಿವರ ಜೊತೆ ಮಹತ್ವದ ಚರ್ಚೆ, ಪ್ರಿಯಾಂಕ್ ಖರ್ಗೆ ಹೆಗಲಿಗೆ ತನಿಖೆ ಜವಾಬ್ದಾರಿ..!

ಕಾಂಗ್ರೆಸ್‌ನಲ್ಲಿ ಸ್ಟಿಂಗ್ ಆಪರೇಷನ್ ಕಿಚ್ಚು: ಸಿದ್ದರಾಮಯ್ಯರನ್ನು ಇಂತಹ ಸ್ಥಿತಿಗೆ ತಳ್ಳಬಾರದಿತ್ತು, ಕೋಟಿ ಕೋಟಿ ಹಣ ಎಲ್ಲಿಂದ ಬಂತು..?