ಟ್ರಕ್ ಪಲ್ಟಿ 
ರಾಜ್ಯ

ರಾಯಚೂರು ಬಳಿ ಟ್ರಕ್ ಪಲ್ಟಿ; ಗಾಯಗೊಂಡವರಿಗೆ ನೆರವಾಗುವ ಬದಲು 15 ನಿಮಿಷದಲ್ಲಿ ಇಡೀ ಲಾರಿ ಈರುಳ್ಳಿ ದೋಚಿದ ಜನ!

ಇಂದು ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಲಾರಿ ಚಾಲಕ ಮತ್ತು ಕ್ಲೀನರ್ ಗಾಯಗೊಂಡಿದ್ದಾರೆ.

ರಾಯಚೂರು: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಳಿ ಶನಿವಾರ ಈರುಳ್ಳಿ ತುಂಬಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಇಡೀ ಲಾರಿ ಈರುಳಿ ಜನರ ಪಾಲಾಗಿದೆ.

ಇಂದು ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಲಾರಿ ಚಾಲಕ ಮತ್ತು ಕ್ಲೀನರ್ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆದರೆ, ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಜನರ ವರ್ತನೆ ಮಾತ್ರ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಗಾಯಗೊಂಡ ಚಾಲಕ ಮತ್ತು ಕ್ಲೀನರ್‌ಗೆ ನೆರವಾಗುವ ಬದಲು, ಅಲ್ಲಿದ್ದ ಈರುಳ್ಳಿ ಚೀಲಗಳನ್ನ ಹೊತ್ತೊಯ್ಯಲು ಮುಗಿಬಿದ್ದಿದ್ದಾರೆ. ಮಾನವೀಯತೆಯನ್ನೇ ಮರೆತು, ಗಾಯಾಳುಗಳ ನೆರವಿಗೆ ಧಾವಿಸದೆ ಈರುಳ್ಳಿ ದೋಚಿದ್ದಾರೆ.

ಕೇವಲ 15 ರಿಂದ 20 ನಿಮಿಷಗಳಲ್ಲೇ ದೊಡ್ಡ ಲಾರಿಯಲ್ಲಿದ್ದ ಸಂಪೂರ್ಣ ಈರುಳ್ಳಿ ಲೋಡ್ ಖಾಲಿಯಾಗಿದೆ. ಜನರು ಚೀಲಗಳಲ್ಲಿ ಈರುಳ್ಳಿ ತುಂಬಿಕೊಂಡು ಹೋಗಿದ್ದು, ಅಪಘಾತದ ಸ್ಥಳದಲ್ಲಿ ಮಾನವೀಯತೆಗಿಂತ ಈರುಳ್ಳಿಯೇ ಮುಖ್ಯವಾದಂತಾಗಿದೆ.

ಮಾನ್ವಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್ ನಾಯಕಿ ಸೌಮ್ಯಾ ರೆಡ್ಡಿ ದಿಢೀರ್ ರಾಜಿನಾಮೆ!

ಮುಖ್ಯಮಂತ್ರಿಯೂ ಬಲಿಪಶುವಾಗಿರಬಹುದು, ರಾಜಕೀಯ ನಾಯಕತ್ವ ನಿಯಂತ್ರಣಕ್ಕೆ 'ಸ್ಟಿಂಗ್ ಆಪರೇಷನ್' ವಿಡಿಯೋ ಬಳಕೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ

ಮಕ್ಕಳ ಇಂಟರ್‌ನೆಟ್‌ ಬಳಕೆಗೆ ಸಂಪೂರ್ಣ ನಿಷೇಧ ಬೇಡ; child mode ಜಾರಿಗೆ ಸುಪ್ರೀಂ ಕೋರ್ಟ್‌ ಸಲಹೆ!

‘ನ್ಯಾಯಕ್ಕಾಗಿ ಹೋರಾಡುವ ಧೈರ್ಯವಿರಲಿ, ಕೇಳಿಸದ ಧ್ವನಿಗಳಿಗೂ ಕಿವಿಯಾಗಿ’: ಕಾನೂನು ಪದವೀಧರರಿಗೆ CJI ಸೂರ್ಯಕಾಂತ್‌ ಕರೆ

ದೇವರಾಯನದುರ್ಗ ಟ್ರೆಕ್ಕಿಂಗ್‌ ಹೋಗಿ ವಾಪಸ್‌ ಆಗುವಾಗ ದುರಂತ; ನೆಲಮಂಗಲ ಬಳಿ ಲಾರಿ ಡಿಕ್ಕಿಗೆ ಕೇರಳ ಮೂಲದ ಯುವತಿ ಬಲಿ