ಮಂಗಳೂರು: ಮಂಗಳೂರಿನ ವೆಲೆನ್ಸಿಯಾ ಚರ್ಚ್ನಲ್ಲಿ ಹಲವು ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪಾದ್ರಿ ಸಿಪ್ರಿಯನ್ ಪಿಂಟೋ ಎಂಬಾತನನ್ನು ಬಂಧಿಸಲಾಗಿದೆ. ಪ್ರಾರ್ಥನೆಗೆ ಹೋದ ಸಂದರ್ಭದಲ್ಲಿ ಬಾಲಕರಿಗೆ ಸಿಪ್ರಿಯನ್ ಪಿಂಟೋ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಅಲ್ಲದೆ ಈ ಸಂಬಂಧ ಮಕ್ಕಳ ಪೋಷಕರು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಈ ದೂರಿನ ಮೇರೆಗೆ ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಸಿಪ್ರಿಯನ್ ಪಿಂಟೋನನ್ನು ಬಂಧಿಸಲಾಗಿದೆ. ತನ್ನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆ ಸಿಪ್ರಿಯನ್ ಪಿಂಟೋ ತಲೆಮರೆಸಿಕೊಂಡಿದ್ದರು.
ಮಂಗಳೂರಿನಿಂದ ಪಲಾಯನ ಮಾಡಿದ್ದ ಸಿಪ್ರಿಯನ್ ಪಿಂಟೋ ಹಾಸನದ ಸಕಲೇಶಪುರದ ಸಂಬಂಧಿ ಮನೆಯಲ್ಲಿ ಅಡಗಿಕೊಂಡಿರುವುದು ತಿಳಿಯುತ್ತಿದ್ದಂತೆಯೇ ಪೊಲೀಸರು ಕಾರ್ಯಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.