ಅಶ್ವಿನಿ ಹಾಗೂ ಆಕೆಯ ಪ್ರಿಯಕರ ಆನಂದ್​ ಕಲ್ಲೂರ ಮತ್ತು ಸಚಿನ್ ಬಡಳ್ಳಿ 
ರಾಜ್ಯ

ವಿಜಯಪುರ: ಮನೆಗೆ ಪೇಂಟ್ ಮಾಡಲು ಬಂದವನ ಜತೆ ಲವ್ವಿಡವ್ವಿ; ಪ್ರಿಯಕರನ ಜತೆ ಸೇರಿ ಪತಿಯನ್ನೇ ಕೊಂದ ಪತ್ನಿ, ಇತರ ಮೂವರ ಬಂಧನ!

ಪತಿ ರಾಜಶೇಖರ್ ನನ್ನು ಎಸ್‌ಯುವಿ(SUV) ಕಾರು ಹರಿಸಿ ಕೊಲೆ ಮಾಡಿದ ಆರೋಪದ ಮೇಲೆ ಆತನ ಪತ್ನಿ ಅಶ್ವಿನಿ ಹಾಗೂ ಆಕೆಯ ಪ್ರಿಯಕರ ಆನಂದ್​ ಕಲ್ಲೂರ(25) ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ವಿಜಯಪುರ: ತಮ್ಮ ಹೊಸ ಮನೆಗೆ ಪೇಂಟಿಂಗ್ ಮಾಡಲು ಬಂದಿದ್ದ ಕಾರ್ಮಿಕನೊಂದಿಗೆ ಅನೈತಿಕ ಸಂಬಂಧ ಬೆಳೆಸಿದ ಮಹಿಳೆ, ಪ್ರಿಯರಕನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿದ ಆಘಾತಕಾರಿ ಘಟನೆ ವಿಜಯಪುರದಲ್ಲಿ ನಡೆದಿದೆ.

ಪತಿ ರಾಜಶೇಖರ್ ನನ್ನು ಎಸ್‌ಯುವಿ(SUV) ಕಾರು ಹರಿಸಿ ಕೊಲೆ ಮಾಡಿದ ಆರೋಪದ ಮೇಲೆ ಆತನ ಪತ್ನಿ ಅಶ್ವಿನಿ ಹಾಗೂ ಆಕೆಯ ಪ್ರಿಯಕರ ಆನಂದ್​ ಕಲ್ಲೂರ(25) ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಬಂಧಿತರಲ್ಲಿ ಒಬ್ಬ ಅಪ್ರಾಪ್ತನೂ ಸೇರಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಾಜಶೇಖರ್ ಬಿರಾದಾರ ಮತ್ತು ಅಶ್ವಿನಿ ದಂಪತಿಗೆ ಮದುವೆಯಾಗಿ 10 ವರ್ಷಗಳಾಗಿದ್ದು, ಅವರಿಗೆ ಆರು ವರ್ಷದ ಅವಳಿ ಗಂಡು ಮಕ್ಕಳಿದ್ದಾರೆ. ಅವರು ವಿಜಯಪುರದ ಏಕತಾ ನಗರದಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಅಕ್ಟೋಬರ್ 4 ರಂದು ವಿಜಯಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ದಾಖಲಾದ ರಸ್ತೆ ಅಪಘಾತ ಪ್ರಕರಣವೊಂದರ ತನಿಖೆಯ ವೇಳೆ ಈ ಕೊಲೆ ಬೆಳಕಿಗೆ ಬಂದಿದೆ.

ರಾಜಶೇಖರ್ ಹಾಗೂ ಅಶ್ವಿನಿ ಮಧ್ಯೆ ಸಾಮರಸ್ಯವಿರಲಿಲ್ಲ. ಈ ಮಧ್ಯೆ ರಾಜಶೇಖರ್ ನೂತನವಾಗಿ ಮನೆ ಕಟ್ಟಿಸಿದ್ದರು. ಮನೆಯ ಪೇಂಟಿಂಗ್ ಕೆಲಸಕ್ಕೆ ಬಂದಿದ್ದ ಮದೀನಾ ನಗರ ನಿವಾಸಿ ಆನಂದ್​ ಕಲ್ಲೂರ, ಅಶ್ವಿನಿಗೆ ಪರಿಚಯವಾಗಿದ್ದ. ಇವರಿಬ್ಬರ ಪರಿಚಯ ಮುಂದೆ ಪ್ರೀತಿಗೆ ತಿರುಗಿದೆ. ‘ಅಶ್ವಿನಿ ನನ್ನ ಗಂಡನನ್ನು ಮುಗಿಸಿ ಬಿಡೋಣ, ನಂತರ ನಾನು-ನೀನು ಜೊತೆಯಾಗಿರೋಣ’ ಎಂದು ಆನಂದ್​ಗೆ ಹೇಳಿದ್ದಳಂತೆ. ಆನಂದ್​ ಸಹ ತನಗೆ ಮದುವೆಯಾಗಿರುವ ವಿಚಾರ ಮುಚ್ಚಿಟ್ಟು ರಾಜಶೇಖರ್ ಕೊಲೆ ಮಾಡಿ ಇಡೀ ಆಸ್ತಿ ಹೊಡೆಯಲು ಮುಂದಾಗಿದ್ದ ಎನ್ನಲಾಗಿದೆ.

ಅಕ್ಟೋಬರ್ 4 ರಂದು ಬೆಳಿಗ್ಗೆ ಸುಮಾರು 5:30 ರ ಸುಮಾರಿಗೆ ರಾಜಶೇಖರ್ ಎಂದಿನಂತೆ ವಾಕಿಂಗ್​​ಗೆ ತೆರಳಿದ್ದರು. ತಕ್ಷಣ ಈ ವಿಚಾರವನ್ನು ಅಶ್ವಿನಿ ಆನಂದ್​ಗೆ ತಿಳಿಸಿದ್ದಾರೆ. ಅತ್ತ ಆನಂದ್​ ತನ್ನದೇ ಏರಿಯಾದ ಸಹಚರರಾದ ಓರ್ವ ಅಪ್ರಾಪ್ತ ಬಾಲಕ ಹಾಗೂ ಸಚಿನ್ ಬಡಳ್ಳಿಗೆ ಮೊದಲೇ ಪ್ಲ್ಯಾನ್ ಮಾಡಿದಂತೆ ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಸ್ಕಾರ್ಪಿಯೋದಲ್ಲಿ ಬರಲು ಹೇಳಿ, ತಾನು ರೀಂಗ್ ರೋಡ್ ಬಳಿಯ ಜುಮನಾಳ ರಸ್ತೆಯಲ್ಲಿ ಕಾಯುತ್ತಾ ನಿಂತಿದ್ದ.

ಇದೇ ವೇಳೆ ಜಮನಾಳದತ್ತ ರಾಜಶೇಖರ್ ನಡೆದುಕೊಂಡು ಹೋಗುತ್ತಿರುವುದನ್ನ ಕಂಡ ಆನಂದ್​ ಈತನ ಮೇಲೆ ವಾಹನ ಚಲಾಯಿಸಿ ಬಿಡಿ ಎಂದು ಅಪ್ರಾಪ್ತ ವಯಸ್ಸಿನ ಬಾಲಕ ಹಾಗೂ ಸಚಿನ್​ಗೆ ಹೇಳುತ್ತಾನೆ. ಆಗ ಸಚಿಸ್​ ಬಡಳ್ಳಿ ವೇಗವಾಗಿ ಸ್ಕಾರ್ಪಿಯೋ ಚಲಾಯಿಸಿಕೊಂಡು ರಾಜಶೇಖರ್​ಗೆ ಡಿಕ್ಕಿ ಹೊಡೆಯುತ್ತಾನೆ. ಡಿಕ್ಕಿಯ ರಭಸಕ್ಕೆ ರಾಜಶೇಖರ್​​ನನ್ನ ನೂರು ಅಡಿ ದೂರ ಎಳೆದುಕೊಂಡ ಹೋಗಲಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬಳಿಕ ಅಪರಿಚತ ವಾಹನ ಡಿಕ್ಕಿಯಾಗಿ ನನ್ನ ಪತಿ ಮೃತಪಟ್ಟಿದ್ದಾರೆಂದು ಅಶ್ವಿನಿ ಪೊಲೀಸ್​ ಠಾಣೆಗೆ ದೂರು ನೀಡಿ ಸುಮ್ಮನಿರುತ್ತಾಳೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಅನುಮಾನ ಕಂಡು ಬಂದ ಹಿನ್ನೆಲೆ ಪೊಲೀಸರು ಆಳವಾಗಿ ತನಿಖೆ ಕೈಗೊಂಡಾಗ, ಸ್ವತಃ ಪತ್ನಿಯೇ ಸಂಚು ರೂಪಿಸಿ ಕೊಲೆ ಮಾಡಿಸಿರುವುದು ಬಯಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಟೈಗರ್ ಶ್ರಾಫ್‌ ಮೇಲೆ ಶೂಟ್ ಔಟ್ ಕೇಸ್: ಮೂವರು ಆರೋಪಿಗಳಲ್ಲಿ ಯಾರೊಬ್ಬರೂ ಅಪ್ರಾಪ್ತರಲ್ಲ- ಡಿಸಿಪಿ ರಾಜ್ ತಿಲಕ್ ರೋಷನ್ ಸ್ಪಷ್ಟನೆ

ನನ್ನ ಪ್ರೀತಿಯ ಕನ್ನಡಿಗರೇ ಮನಸ್ಪೂರ್ತಿಯಾಗಿ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ: ಸೋನು ನಿಗಮ್

ಪ್ರಧಾನಿ ಮೋದಿ, ಸೀತಾರಾಮನ್ ಡೀಪ್‌ಫೇಕ್ ವೀಡಿಯೊ ಬಳಸಿ ನಕಲಿ ಕಲ್ಯಾಣ ಯೋಜನೆ ಜಾಹೀರಾತುಗಳ ಬಗ್ಗೆ ಎಚ್ಚರ- ಸೈಬರ್ ಅಪರಾಧ ವಿಭಾಗ

ಕೆಂಪುಕೋಟೆ ಮೇಲೆ ಮುತ್ತು ಚೆಲ್ಲಿತ್ತಲೇ ಪರಾಕ್: ಕಾರ್ಣಿಕೋತ್ಸವದಲ್ಲಿ ಗೊರವಯ್ಯನ ಭವಿಷ್ಯ!

ಕಬ್ಬು ರೈತರ ‘ಹುಬ್ಬಳ್ಳಿ ಚಲೋ’ ಪ್ರತಿಭಟನಾ ಮೆರವಣಿಗೆ ತಾತ್ಕಾಲಿಕ ಸ್ಥಗಿತ: ಸರ್ಕಾರಕ್ಕೆ ನವೆಂಬರ್ 26 ಗಡುವು