ರಾಜ್ಯ

ಬೆಂಗಳೂರು: ಸೋದರನ ಜೊತೆಯೇ ಅನೈತಿಕ ಸಂಬಂಧ; ಪತ್ನಿಯ 'ರಾಸಲೀಲೆ' ವಿಡಿಯೋ ನೋಡಿ ಪತಿ ಆತ್ಮಹತ್ಯೆ!

ತನ್ನ ಪತ್ನಿ ಸಂಬಂಧದಲ್ಲಿ ತಮ್ಮನಾಗಬೇಕಾಗಿರುವವನ ಜೊತೆಯೇ ಅಕ್ರಮ ಸಂಬಂಧ ಇಟ್ಟುಕೊಂಡಿರುವುದರಿಂದ ಮನನೊಂದ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನ ನೆರಿಗಾ ಗ್ರಾಮದಲ್ಲಿ ನಡೆದಿದೆ.

ಆನೇಕಲ್: ತನ್ನ ಪತ್ನಿ ಸಂಬಂಧದಲ್ಲಿ ತಮ್ಮನಾಗಬೇಕಾಗಿರುವವನ ಜೊತೆಯೇ ಅಕ್ರಮ ಸಂಬಂಧ ಇಟ್ಟುಕೊಂಡಿರುವುದರಿಂದ ಮನನೊಂದ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನ ನೆರಿಗಾ ಗ್ರಾಮದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು 35 ವರ್ಷದ ಮುನಿಕೃಷ್ಣ ಎಂದು ಗುರುತಿಸಲಾಗಿದೆ. ಮುನಿಕೃಷ್ಣ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ಮುನಿಕೃಷ್ಣ 10 ವರ್ಷಗಳ ಹಿಂದೆ ನಯನ ಎಂಬುವವರನ್ನು ಮದುವೆಯಾಗಿದ್ದು ದಂಪತಿಗೆ 6 ವರ್ಷದ ಒಬ್ಬ ಗಂಡು ಮಗ ಇದ್ದಾನೆ. ಪ್ರಸ್ತುತ ನಯನ ಎರಡನೇ ಮಗುವಿನ ಗರ್ಭಿಣಿಯಾಗಿದ್ದರು. ಈ ಮಧ್ಯೆ ಕುಮಾರ ಎಂಬಾತ ಕಳೆದೆರಡು ವರ್ಷದಿಂದ ನಯನಾಳ ಜೊತೆ ಲವ್ವಿಡವ್ವಿ ನಡೆಸುತ್ತಿದ್ದನು.

ಇನ್ನು ವಿಷಯವನ್ನು ಕುಮಾರನೇ ಮುನಿಕೃಷ್ಣನಿಗೆ ವಾಟ್ಸಾಪ್ ಮೂಲಕ ಮೆಸೇಜ್ ಮಾಡಿ ನಯನಾಳ ಜೊತೆಗಿನ ಫೋಟೋ, ಅಶ್ಲೀಲ ವಿಡಿಯೋಗಳನ್ನ ಕಳಿಸಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಮುನಿಕೃಷ್ಣ ನಯನ ಜೊತೆ ಗಲಾಟೆ ಮಾಡಿದ್ದಾನೆ. ತನ್ನ ಅಕ್ರಮ ಸಂಬಂಧ ಬಯಲಾಗಿದ್ದರಿಂದ ನಯನ ಗಂಡನನ್ನು ತೊರೆದು ತವರು ಮನೆ ಸೇರಿದ್ದಳು.

ನಂತರ ಮುನಿಕೃಷ್ಣ ಕಂಡಾಗಲೆಲ್ಲಾ ಕುಮಾರ್ ನಿಂದಿಸಲು ಶುರು ಮಾಡಿದ್ದಾನೆ. ನಿನ್ನ ಪತ್ನಿ ನಯನಾಳ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ನನ್ನದು ಹೇಳುತ್ತಿದ್ದನು. ಇದರಿಂದ ಮನನೊಂದಿದ್ದ ಮುನಿಕೃಷ್ಣ ತನ್ನ ಸಹೋದರನಿಗೆ ಈ ವಿಷಯಗಳನ್ನೆಲ್ಲಾ ಹೇಳಿ ಆತ್ಮಹತ್ಯೆ ಮಾಡಿದ್ದಾನೆ. ಈ ಕುರಿತು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಯನ ಹಾಗೂ ಕುಮಾರನ ಅನೈತಿಕ ಸಂಬಂಧ ಮತ್ತು ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆರೋಪಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಟೈಗರ್ ಶ್ರಾಫ್‌ ಮೇಲೆ ಶೂಟ್ ಔಟ್ ಕೇಸ್: 3 ಆರೋಪಿಗಳಲ್ಲಿ ಅಪ್ರಾಪ್ತರಿಲ್ಲ- ಡಿಸಿಪಿ ರಾಜ್ ತಿಲಕ್ ರೋಷನ್

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಮೂವರು ಹತ್ಯೆಗೈದ ಉಗ್ರರು; ಭುಗಿಲೆದ್ದ ಆಕ್ರೋಶ, ಸಿಎಂ ನಿವಾಸದ ಹೊರಗೆ ಪ್ರತಿಭಟನೆ!

ರಾಹುಲ್ ಗಾಂಧಿ ನನ್ನ ಪರ್ಸ್, ಮೊಬೈಲ್ ಕದ್ದಿದ್ದಾರೆ?: ಅಮೆರಿಕನ್ ಕಾರ್ಯಕರ್ತೆ ರೆನೀ ಲಿನ್ ವ್ಯಂಗ್ಯಾತ್ಮಕ ಹೇಳಿಕೆ, Video

ಹಾಡುವುದಷ್ಟೇ ಅಲ್ಲ, ನಾನೂ ಅತ್ಯುತ್ತಮವಾಗಿ ನಟಿಸಬಲ್ಲೆ: ಮಹಾ CM ಪತ್ನಿ ಅಮೃತಾ ಫಡ್ನವೀಸ್

Scrap ಮಾರಾಟ: ಭಾರತ ಸರ್ಕಾರಕ್ಕೆ ರೂ. 500 ಕೋಟಿ ಗಳಿಕೆ!