ಆರೋಗ್ಯ ಸಚಿವ ಯು.ಟಿ. ಖಾದರ್ ನೇತೃತ್ವದ ಸಭೆ 
ರಾಜ್ಯ

ರಾಜ್ಯದ ಖಾಸಗಿ ಆಸ್ಪತ್ರೆಗಳ ಬಿಲ್ ಗೆ ಅಂಕುಶ: ಚಿಕಿತ್ಸಾ ದರ ಪಟ್ಟಿ ಪ್ರದರ್ಶನ ಕಡ್ಡಾಯ!

ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‌ಗಳ ಸಂಘಟನೆ (PHANA – ಫನಾ) ಪದಾಧಿಕಾರಿಗಳೊಂದಿಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಹತ್ವದ ಸಭೆ ನಡೆಸಿದ ಆರೋಗ್ಯ ಸಚಿವ ಯು.ಟಿ. ಖಾದರ್

ಬೆಂಗಳೂರು: ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಬೇಕಾಬಿಟ್ಟಿಯಾಗಿ ವಿಧಿಸುವ ಬಿಲ್ ಗೆ ಅಂಕುಶ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚ ಮಾತ್ರವಲ್ಲದೆ ಇನ್ಮುಂದೆ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ನೀಡಲಾಗದ ‘ಶೆಡ್ಯೂಲ್ಡ್ ಔಷಧ’ಗಳ ದರಪಟ್ಟಿಯನ್ನೂ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.

ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‌ಗಳ ಸಂಘಟನೆ (PHANA – ಫನಾ) ಪದಾಧಿಕಾರಿಗಳೊಂದಿಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಹತ್ವದ ಸಭೆ ನಡೆಸಿದ ಆರೋಗ್ಯ ಸಚಿವ ಯು.ಟಿ. ಖಾದರ್, ಆಸ್ಪತ್ರೆಗಳ ಸುಲಿಗೆ ಪ್ರವೃತ್ತಿ ಮತ್ತು ಅತಿಯಾದ ದರ ವಸೂಲಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು.

ಕ್ಯಾನ್ಸರ್ ಚಿಕಿತ್ಸೆಯ ಔಷಧಗಳ ದರ ಅತಿಯಾಗಿ ಏರಿಕೆಯಾಗಿದ್ದು, ರೋಗಿಗಳಿಂದ ಸುಲಿಗೆ ಮಾಡುತ್ತಿರುವುದನ್ನು ಔಷಧ ಆಡಳಿತ ಇಲಾಖೆ ನಡೆಸಿದ ತನಿಖೆಯಲ್ಲಿ ಕಂಡುಬಂದಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮತ್ತು ಔಷಧ ದರಗಳಲ್ಲಿ ಪಾರದರ್ಶಕತೆ ತರಲು ಸರ್ಕಾರ ಬದ್ಧವಾಗಿದೆ. ಅದೇ ರೀತಿ ಆಸ್ಪತ್ರೆಗಳು ನೀಡುವ ಚಿಕಿತ್ಸೆ ಹಾಗೂ ಖರೀದಿಸುವ ಔಷಧಗಳ ದರದಲ್ಲಿ ಪಾರದರ್ಶಕತೆ ಇರಬೇಕು. ಕಡಿಮೆ ದರದ ಲಾಭ ನೇರವಾಗಿ ರೋಗಿಗಳಿಗೆ ತಲುಪಬೇಕು ಎಂದು ಹೇಳಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಔಷಧಗಳಿಗೆ ಅಧಿಕ ದರ ವಿಧಿಸಿ ರೋಗಿಗಳನ್ನು ಶೋಷಿಸುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದೆ. ರಾಷ್ಟ್ರೀಯ ಔಷಧ ದರ ನಿಗದಿ ಪ್ರಾಧಿಕಾರ ಈಗ ಬೆಲೆ ನಿಯಂತ್ರಣದ ಹೊರಗಿರುವ ಕ್ಯಾನ್ಸರ್ ಔಷಧಗಳ ವ್ಯಾಪಾರ ಲಾಭಾಂಶವನ್ನು ಗರಿಷ್ಠ ಚಿಲ್ಲರೆ ಬೆಲೆಯ ಶೇ.30ಕ್ಕೆ ಮಿತಿಗೊಳಿಸಿ ಅನುಮೋದನೆ ನೀಡಿದೆ. ಇದರಿಂದ ಕ್ಯಾನ್ಸರ್ ರೋಗಿಗಳ ಆರ್ಥಿಕ ಹೊರೆ ಕಡಿಮೆಯಾಗಲಿದೆ ಎಂದು ಸಚಿವರು ತಿಳಿಸಿದರು.

ಆಸ್ಪತ್ರೆಗಳು ಮತ್ತು ವಿಮಾ ಕಂಪನಿಗಳ ನಡುವಿನ ವ್ಯವಹಾರಗಳ ಮೇಲೂ ನಿಗಾ ಇರಿಸಲು ಸರ್ಕಾರ ಮುಂದಾಗಿದೆ. ಒಂದು ಲಕ್ಷ ರೂಪಾಯಿ ಆಗುವ ಸರ್ಜರಿಗೆ ಮೂರು ಲಕ್ಷ ರೂಪಾಯಿ ಬಿಲ್ ಕಳುಹಿಸಲಾಗುತ್ತದೆ. ಅಂತಿಮವಾಗಿ 50 ಸಾವಿರ ರೂಪಾಯಿಯನ್ನು ರೋಗಿಯ ಕಡೆಯವರೇ ಭರಿಸಬೇಕೆಂದು ಹೇಳುತ್ತಾರೆ. ವಿಮಾ ಕಂಪನಿಗಳು ಎಲ್ಲೋ ದೂರದಲ್ಲಿ ಕುಳಿತು ಸರಿಯಾಗಿ ಸ್ಪಂದಿಸುವುದಿಲ್ಲ. ಈ ಅನ್ಯಾಯವನ್ನು ಯಾರಲ್ಲಿ ಕೇಳುವುದು? ಹಾಗಾಗಿ ಶೀಘ್ರದಲ್ಲೇ ಇನ್ಶೂರೆನ್ಸ್ ಕಂಪನಿಗಳ ಜೊತೆಗೂ ಪ್ರತ್ಯೇಕ ಸಭೆ ನಡೆಸಿ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲಾಗುವುದು ಯು.ಟಿ. ಖಾದರ್ ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಫ್ರಾನ್ಸ್ ಹಿಂಸಾಚಾರ - ಭಾರತದ ಪ್ರತಿಭಟನೆಗೆ ಲಿಂಕ್; ರಾಹುಲ್ ಗಾಂಧಿ 'ದೇಶದ್ರೋಹಿ': BJP ಕಿಡಿ

‘ನನಗೆ ಎಕ್ಸ್‌ಪೋಸಿಂಗ್ ಅಥವಾ ಮೈ ತೋರಿಸೋದು ಇಷ್ಟ ಇಲ್ಲ’: 'ಪೆದ್ದಿ' ಜಾನ್ವಿ ಕಪೂರ್ ಬಗ್ಗೆ ರಶ್ಮಿಕಾ ಹೇಳಿದ್ದೇನು?

ಕೇವಲ 114 ಎಸೆತಗಳಲ್ಲಿ ದ್ವಿಶತಕ: ಗಿಲ್ ದಾಖಲೆ ಪುಡಿಗಟ್ಟಿ ಹೊಸ ವಿಶ್ವದಾಖಲೆ ಬರೆದ ಹ್ಯಾರಿ ಬ್ರೂಕ್!

ಶರಾವತಿ, ಮೇಕೆದಾಟು ಯೋಜನೆಗೆ ಅನುಮೋದನೆ ನೀಡಿ: CM ಡಿಕೆಶಿಯಿಂದ ಕೇಂದ್ರ ಸಚಿವ ಭೂಪೇಂದರ್ ಯಾದವ್ ಭೇಟಿ

ಪ್ರಧಾನಿ ಮೋದಿ ನಿವಾಸದ ಸಮೀಪವಿರುವ ಮಸೀದಿಗೆ ತೆರವು ನೋಟಿಸ್; ಕೇಂದ್ರದ ವಿರುದ್ಧ ಮೆಹಬೂಬಾ ಮುಫ್ತಿ ಕೆಂಡಾಮಂಡಲ