ಬಿ.ಕೆ ಹರಿಪ್ರಸಾದ್ 
ರಾಜ್ಯ

ಸಿದ್ದರಾಮಯ್ಯ ಅಷ್ಟೊಂದು ವೀಕ್ ಅಲ್ಲ: ಕುಮಾರಸ್ವಾಮಿಗಿಂತ ಹೆಚ್ಚು ಧೈರ್ಯ ಇದೆ; MLC ಚುನಾವಣೆ ಬಳಿಕ ನಿಗಮ, ಮಂಡಳಿ ನೇಮಕಾತಿ- ಹರಿಪ್ರಸಾದ್

ನಮ್ಮ ಪಕ್ಷದವರೇ ಅಂತ ಯಾರ ಮೇಲಾದರೂ ಪುರಾವೆ ಇದ್ದರೆ ಕ್ರಮ ತೆಗೆದುಕೊಳ್ಳುತ್ತೇನೆ. ಪುರಾವೆ ಇಲ್ಲದೇ ಅಪಾದನೆ ಮಾಡಿದರೆ ಆಗುವುದಿಲ್ಲ. ವಿಡಿಯೊದಲ್ಲಿ‌ ಯಾರಿದ್ದಾರೆ, ಅವರ‌‌ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ತನಿಖೆ ಮಾಡಲು ಸಿಐಡಿ, ಸಿಬಿಐ ಎಲ್ಲಾ ಇದೆ ಎಂದು ಹೇಳಿದರು.

ಬೆಂಗಳೂರು : ಸಿದ್ದರಾಮಯ್ಯನವರು ಅಷ್ಟೊಂದು ವೀಕ್ ಮನುಷ್ಯ ಅಲ್ಲ. ಕುಮಾರಸ್ವಾಮಿಯವರಿಗೆ ಇರುವುದಕ್ಕಿಂತ ಜಾಸ್ತಿ ಧೈರ್ಯ ಅವರಿಗೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸ್ಟಿಂಗ್ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯ ಅವರನ್ನೂ ಭೇಟಿ ಮಾಡುವೆ ಎಂದರು.

ಸ್ಟಿಂಗ್ ಕಾರ್ಯಾಚರಣೆಯಲ್ಲಿ ನಮ್ಮ ಪಕ್ಷದವರೇ ಇದ್ದಾರೆ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ರಾಜಕೀಯವಾಗಿ ಸೇಡು ತೀರಿಸಿಕೊಳ್ಳಲು ಕೆಲವರು ಮಾಡಿರುವ ಹೀನ ಕೃತ್ಯ ಇದು ಎಂದು ಹೇಳಿದ್ದೇನೆ. ಅದನ್ನು ರಾಜಕೀಯವಾಗಿ ಎದುರಿಸುತ್ತೇವೆ ಎಂದರು.

ನಮ್ಮ ಪಕ್ಷದವರೇ ಅಂತ ಯಾರ ಮೇಲಾದರೂ ಪುರಾವೆ ಇದ್ದರೆ ಕ್ರಮ ತೆಗೆದುಕೊಳ್ಳುತ್ತೇನೆ. ಪುರಾವೆ ಇಲ್ಲದೇ ಅಪಾದನೆ ಮಾಡಿದರೆ ಆಗುವುದಿಲ್ಲ. ವಿಡಿಯೊದಲ್ಲಿ‌ ಯಾರಿದ್ದಾರೆ, ಅವರ‌‌ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ತನಿಖೆ ಮಾಡಲು ಸಿಐಡಿ, ಸಿಬಿಐ ಎಲ್ಲಾ ಇದೆ ಎಂದು ಹೇಳಿದರು.

ಇನ್ನೂ ವಿಧಾನ ಪರಿಷತ್ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳ ಚುನಾವಣಾ ನೀತಿ ಸಂಹಿತೆ ಮುಕ್ತಾಯದ ಬಳಿಕವೇ ನಿಗಮ ಮಂಡಳಿ ನೂತನ ಅಧ್ಯಕ್ಷರ ನೇಮಕಾತಿ ಪಟ್ಟಿ ಪ್ರಕಟವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.

ಚುನಾವಣೆ ಬಳಿಕ ಯಾವುದೇ ಕ್ಷಣದಲ್ಲಿಯಾದರೂ ನಿಗಮ ಮಂಡಳಿ ನೇಮಕ ಪಟ್ಟಿ ಪ್ರಕಟವಾಗಬಹುದು. ಮೊದಲಿಗೆ ನಿರ್ದೇಶಕರು, ಸದಸ್ಯರ ನೇಮಕವಾಗುತ್ತದೆ. ಮುಂದಿನ ದಿನಗಳಲ್ಲಿ ಯಾರನ್ನು ಅಧ್ಯಕ್ಷರನ್ನಾಗಿ ಮಾಡುವುದು ಎಂದು ಗೊತ್ತಾಗಲಿದೆ ಎಂದರು.

ಪಕ್ಷದ ವರಿಷ್ಟರು ನಿಗಮ ಮಂಡಳಿ ಅಧ್ಯಕ್ಷ ಮತ್ತು ಸದಸ್ಯರ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಈ ವೇಳೆಗೆ ಪಟ್ಟಿ ಬಿಡುಗಡೆ ಆಗಬೇಕಿತ್ತು. ಆದರೆ, ಚುನಾವಣೆ ನೀತಿ ಸಂಹಿತೆ ಜಾರಿ ಇರುವುದರಿಂದ ವಿಳಂಬವಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ನಿಗಮ ಮಂಡಳಿ ಪಟ್ಟಿ ಪ್ರಕಟವಾಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗಡಿಯಲ್ಲಿ ಚೀನಾ ಕ್ಯಾತೆ: ITBP ಮಹಾನಿರ್ದೇಶಕರ ಹೇಳಿಕೆ ತೀವ್ರ ಆತಂಕಕಾರಿ: ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಮತ್ತೆ ಚೀನಾ ಕ್ಯಾತೆ, ಗಲ್ವಾನ್ ರೀತಿಯ ಸಂಘರ್ಷ; ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯೊಂದಿಗೆ ಮತ್ತೆ ಮುಖಾಮುಖಿ?

ಮೈಸೂರಿನಲ್ಲಿ ದುರಂತ: ನೀರಿನ ಪಂಪ್‌ ಸ್ವಚ್ಛಗೊಳಿಸುವಾಗ ವಿದ್ಯುತ್‌ ಶಾಕ್‌, ರಾಜಸ್ಥಾನ ಮೂಲದ ಯುವಕ ಸಾವು,Video

ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್‌ ಅಲರ್ಟ್‌: ಅ.31ರೊಳಗೆ ಪರಿಶೀಲನೆ ಪೂರ್ಣಗೊಳಿಸಿ, ಗಡುವು ವಿಸ್ತರಣೆ ಇಲ್ಲ!

ಹುಬ್ಬಳ್ಳಿ ಮಹಿಳೆ ಕತ್ತು ಸೀಳಿದ ಮಾಂಜಾದಾರ: 'ಮನರಂಜನೆಗಾಗಿ ಮತ್ತೊಬ್ಬರ ಜೀವದ ಜೊತೆ ಆಟವಾಡಬೇಡಿ': DCM ಪರಮೇಶ್ವರ್ ಖಡಕ್ ಎಚ್ಚರಿಕೆ