ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ 
ರಾಜ್ಯ

ವಿಧಾನಸೌಧ ಹೊರಗೆ ಡಿಕೆಶಿ ಕಾಯಿಸಿದ ಡ್ರೈವರ್: ಕೋಪ ಮಾಡಿಕೊಳ್ಳದೆ ಕಾಯುತ್ತಲೇ ಸಾರ್ವಜನಿಕರ ಅಹವಾಲು ಆಲಿಸಿದ CM, ತಾಳ್ಮೆಗೆ ಸಾರ್ವಜನಿಕರ ಶ್ಲಾಘನೆ..!

ಚಾಲಕ ಬಾರದ ಹಿನ್ನೆಲೆಯಲ್ಲಿ ಸಿಎಂ ಸುಮಾರು ಐದು ನಿಮಿಷ ವಾಹನದ ಬಳಿ ಕಾದು ನಿಂತಿದ್ದರು. ವಿಳಂಬವಾಗುತ್ತಿರುವುದನ್ನು ಗಮನಿಸಿದ ಅವರ ವೈಯಕ್ತಿಕ ಸಿಬ್ಬಂದಿ ಪರ್ಯಾಯ ವಾಹನ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದ ಹೊರಗೆ ತಮ್ಮ ಕಾರಿನ ಚಾಲಕನಿಗಾಗಿ ಸುಮಾರು ಐದು ನಿಮಿಷಗಳ ಕಾಲ ಕಾದು ನಿಂತ ಬೆಳವಣಿಗೆ ಸೋಮವಾರ ಕಂಡು ಬಂದಿತು.

ವಿಧಾನಸೌಧದ ಪಶ್ಚಿಮ ದ್ವಾರದಿಂದ ತಮ್ಮ ಕೆಲಸಗಳನ್ನು ಮುಗಿಸಿ ಹೊರಬಂದ ಡಿಕೆ ಶಿವಕುಮಾರ್ ಅವರು, ತಮಗಾಗಿ ಸಿದ್ಧಪಡಿಸಲಾಗಿದ್ದ ಅಧಿಕೃತ ವಾಹನದತ್ತ ತೆರಳಿದರು. ಆದರೆ, ಅವರು ಕಾರಿನ ಬಳಿ ತಲುಪಿದಾಗ ಚಾಲಕ ಅಲ್ಲಿರಲಿಲ್ಲ.

ಚಾಲಕ ಬಾರದ ಹಿನ್ನೆಲೆಯಲ್ಲಿ ಸಿಎಂ ಸುಮಾರು ಐದು ನಿಮಿಷ ವಾಹನದ ಬಳಿ ಕಾದು ನಿಂತಿದ್ದರು. ವಿಳಂಬವಾಗುತ್ತಿರುವುದನ್ನು ಗಮನಿಸಿದ ಅವರ ವೈಯಕ್ತಿಕ ಸಿಬ್ಬಂದಿ ಪರ್ಯಾಯ ವಾಹನ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಸಿಎಂ ಸುತ್ತ ಸಾರ್ವಜನಿಕರು ಕೂಡ ಜಮಾಯಿಸಿ, ತಮ್ಮ ಅಹವಾಲುಗಳನ್ನು ಸಲ್ಲಿಸಲು ಹಾಗೂ ವಿವಿಧ ಸಮಸ್ಯೆಗಳನ್ನು ಅವರ ಗಮನಕ್ಕೆ ತರಲು ಮುಂದಾದರು.

ಪರ್ಯಾಯ ವಾಹನದ ವ್ಯವಸ್ಥೆ ಮಾಡಲಾಗುತ್ತಿದ್ದಂತೆಯೇ ಚಾಲಕ ಆತುರವಾಗಿ ಕಾರಿನ ಬಳಿ ಆಗಮಿಸಿದರು. ಬಳಿಕ ಡಿಕೆ ಶಿವಕುಮಾರ್ ಅವರು ಅದೇ ವಾಹನದಲ್ಲಿ ಮನೆಗೆ ತೆರಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Commercial Cylinder Rate: ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಹೆಚ್ಚಳ; ಪರಿಷ್ಕೃತ ದರ ಇಂದಿನಿಂದಲೇ ಜಾರಿ

"ಶಾಂತಿಯೆಡೆಗೆ ಹೆಜ್ಜೆ ಮಾನವೀಯತೆಗೆ ಹೊಸ ಭರವಸೆ"- ಯುಕ್ರೇನ್-ರಷ್ಯಾ ಯುದ್ಧ ಕೊನೆಗೊಳಿಸಲು Putin ಗೆ Modi ಒತ್ತಾಯ

ಅಮಿತ್ ಶಾ ಅಧ್ಯಕ್ಷತೆಯಲ್ಲಿ ಬಿಹಾರ-ಜಾರ್ಖಂಡ್ ನಡುವಿನ 25 ವರ್ಷಗಳ ಹಳೆಯ ನದಿ ನೀರು ಹಂಚಿಕೆ ವಿವಾದ ಇತ್ಯರ್ಥ!

ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ಹಠಾತ್ ನಿವೃತ್ತಿ ಘೋಷಿಸಿದ ಲಿಯೋನೆಲ್ ಮೆಸ್ಸಿ

ಇರಾನ್ ಸಂಘರ್ಷದ ನಡುವೆಯೂ ಭಾರತದ GDP ಶೇ.7.8ರಷ್ಟು ಬೆಳವಣಿಗೆ: ಪ್ರಧಾನಿ ಮೋದಿ ಮೆಚ್ಚುಗೆ!