ಬಿಜೆಪಿ ಪ್ರತಿಭಟನೆ ವೇಳೆ ಬೈಕ್ ಸವಾರನ ಮೇಲೆ ಹಲ್ಲೆ  
ರಾಜ್ಯ

ಬರ ಪರಿಹಾರಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಬೈಕ್ ಸವಾರನ ಹೆಲ್ಮೆಟ್ ಕಿತ್ತು ನೆಲಕ್ಕೆ ಬಡಿದ ಮಾಜಿ ಶಾಸಕ; Video Viral

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳದ ಮೂಲಕ ತೆರಳಲು ಬೈಕ್ ಸವಾರನೊಬ್ಬ ಪ್ರಯತ್ನಿಸಿದ್ದನು.

ಕಲಬುರಗಿ: ಬರ ಪರಿಹಾರ ನೀಡಬೇಕೆಂದು ಮತ್ತು ಸೇಡಂ ತಾಲೂಕನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ಕಲಬುರಗಿಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಅವರು ಬೈಕ್ ಸವಾರನ ಹೆಲ್ಮೆಟ್ ಕಿತ್ತು ನೆಲಕ್ಕೆ ಬಡಿದ ವಿಡಿಯೊ ವ್ಯಾಪಕವಾಗಿ ವೈರಲ್ ಆಗಿದೆ.

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳದ ಮೂಲಕ ತೆರಳಲು ಬೈಕ್ ಸವಾರನೊಬ್ಬ ಪ್ರಯತ್ನಿಸಿದ್ದಾನೆ. ಇದರಿಂದ ಬಿಜೆಪಿ ಕಾರ್ಯಕರ್ತರು ಹಾಗೂ ಬೈಕ್ ಸವಾರನ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಬಳಿಕ ಪ್ರತಿಭಟನಾಕಾರರು ಆತನ ದ್ವಿಚಕ್ರ ವಾಹನದ ಟೈರ್‌ಗಳ ಗಾಳಿ ತೆಗೆದಿದ್ದಾರೆ.

ಈ ವೇಳೆ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಅವರು ಬೈಕ್ ಸವಾರನ ಹೆಲ್ಮೆಟ್ ಕಿತ್ತು ನೆಲಕ್ಕೆ ಬಡಿದಿದ್ದಾರೆ ಎನ್ನಲಾಗಿದೆ.

ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ಬರ ಪರಿಹಾರ ಹಾಗೂ ಸೇಡಂ ತಾಲೂಕನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಹಗರಣ: ಕುಮಾರಸ್ವಾಮಿ ವಿರುದ್ದವೇ ಪ್ರಾಸಿಕ್ಯೂಷನ್ ಅಸ್ತ್ರ? ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಸಾಧ್ಯತೆ

Asian Games 2026: ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ನೇಮಕ

ಹಾಸನ: KSRTC ಬಸ್, ATM ವಾಹನದ ನಡುವೆ ಭೀಕರ ಅಪಘಾತ; ಓರ್ವ ಸಾವು, ನಾಲ್ವರಿಗೆ ಗಂಭೀರ ಗಾಯ

ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಗೆ ಭಾರಿ ಹಿನ್ನಡೆ: ಚುನಾವಣಾ ಅಕ್ರಮ ಆರೋಪ ಅರ್ಜಿ ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್!

ಈ ಬಾರಿ ಬ್ರಿಕ್ಸ್ ಶೃಂಗಸಭೆಯೇಕೆ ಮಹತ್ವವನ್ನು ಪಡೆದುಕೊಂಡಿದೆ? (ಹಣಕ್ಲಾಸು)