ಮಂಗಳೂರು: ಭಾರತದ ನಾಲ್ಕನೇ ಅತ್ಯನ್ಯತ ಪ್ರಶಸ್ತಿಯಾದ ಪದ್ಮಶ್ರೀಯನ್ನ ಕೋಡೊದೇ ಅವರು ದೇಶಕ್ಕೆ ನೀಡಿರುವ ಕೊಡುಗೆಯನ್ನ ಗಮನಿಸಿ, ಆದರೆ, ಹೀಗೆ ಪದ್ಮಶ್ರೀ ಪುರಸ್ಕೃತ ಮಹಾನ್ ಸಾಧಕನಿಗೂ ಚುನಾವಣಾ ಆಯೋಗ SIR ನೋಟಿಸ್ ನೀಡಿ, ಕೊನೆಗೆ ತನ್ನ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿ ಆ ನೋಟಿಸ್ ವಾಪಸ್ ಪಡೆದಿರುವ ಘಟನೆ ನಡೆದಿದೆ.
ಹೌದು, ಮಂಗಳೂರಿನ ಅಕ್ಷರ ಸಂತ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೂ ಚುನಾವಣಾ ಆಯೋಗವು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಅಡಿಯಲ್ಲಿ ನೋಟಿಸ್ ಜಾರಿ ಮಾಡಿ, ನಂತರ ತಪ್ಪು ಮನಗಂಡು ಕೆಲವೇ ಗಂಟೆಗಳಲ್ಲಿ ಅದನ್ನು ವಾಪಸ್ ಪಡೆದಿದೆ. ಆ ಕುರಿತ ವರದಿ ಇಲ್ಲಿದೆ:
ನೋಟಿಸ್ ಜಾರಿಯಾಗಲು ಕಾರಣವೇನು?
2002ರ ಚುನಾವಣಾ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಕೇವಲ ಹಾಜಬ್ಬ ಎಂದು ಮಾತ್ರ ನಮೂದಾಗಿತ್ತು. ಆದರೆ ಸದ್ಯ ಅವರ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾಸ್‌ಪೋರ್ಟ್, ಪದ್ಮಶ್ರೀ ಪ್ರಶಸ್ತಿ ಪತ್ರ ಸೇರಿದಂತೆ ಎಲ್ಲಾ ಅಧಿಕೃತ ದಾಖಲೆಗಳಲ್ಲಿ ಹರೇಕಳ ಹಾಜಬ್ಬ ಎಂದು ಪೂರ್ಣ ಹೆಸರಿದೆ. ಅದರಂತೆ, ಆಯೋಗದ ಸಿಎಸ್‌ಆರ್/ಎಸ್‌ಐಆರ್ ತಂತ್ರಜ್ಞಾನ ವ್ಯವಸ್ಥೆಯಲ್ಲಿ ಹಳೆಯ ಹೆಸರಿಗೂ ಪ್ರಸ್ತುತ ದಾಖಲೆಗಳಿಗೂ ತಾಳೆಯಾಗದ ಕಾರಣ ವ್ಯವಸ್ಥೆಯು ಸ್ವಯಂಚಾಲಿತವಾಗಿ ನೋಟಿಸ್ ಸೃಷ್ಟಿಸಿದೆ. ಅದರಂತೆ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ತಲುಪಿಸಲಾಗಿದ್ದ ಈ ನೋಟಿಸ್‌ನಲ್ಲಿ, ಸೆಪ್ಟೆಂಬರ್ 11ರ ಶುಕ್ರವಾರದಂದು ಹರೇಕಳ ಗ್ರಾಮ ಪಂಚಾಯತ್ ಕಚೇರಿಗೆ ಎಲ್ಲಾ ಅಸಲಿ ದಾಖಲೆಗಳೊಂದಿಗೆ ಬಂದು ವಿವರಣೆ ನೀಡುವಂತೆ ಸೂಚಿಸಲಾಗಿತ್ತು.
ಹಾಗಾದ್ರೆ, ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡಿದ್ದು ಹೇಗೆ?
ವರದಿಗಳ ಪ್ರಕಾರ, ಸುದ್ದಿ ತಿಳಿಯುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು, ತಕ್ಷಣವೇ ಮಂಗಳೂರಿನ ಹರೇಕಳದಲ್ಲಿರುವ ಹಾಜಬ್ಬ ಅವರ ಮನೆಗೆ ಖುದ್ದಾಗಿ ಭೇಟಿ ನೀಡಿ, ತಾಂತ್ರಿಕ ಪ್ರಮಾದದಿಂದಾಗಿ ಈ ನೋಟಿಸ್ ಜಾರಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅದರಂತೆ, ಹಾಜಬ್ಬ ಅವರ ಬಳಿ ಕ್ಷಮೆಯಾಚಿಸಿದ ಅಧಿಕಾರಿಗಳು, ತದನಂತರ ಅವರ ಮನೆಯಲ್ಲೇ ದಾಖಲೆಗಳನ್ನು ಪರಿಶೀಲಿಸಿ, ನೋಟಿಸ್ ಅನ್ನು ವಾಪಸ್ ಪಡೆದರು. ಇದರೊಂದಿಗೆ, ಅಂತಿಮ ಮತದಾರರ ಪಟ್ಟಿಯಲ್ಲಿ ಅವರ ಹೆಸರನ್ನು ಯಾವುದೇ ಗೊಂದಲವಿಲ್ಲದೆ ಉಳಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ