ರಾಮಾಂಜಿನಪ್ಪ 
ರಾಜ್ಯ

ಚಿಕ್ಕಬಳ್ಳಾಪುರ: ಕಚೇರಿಯಲ್ಲೇ ರೈತ ಸಂಘದ ತಾಲೂಕು ಅಧ್ಯಕ್ಷ ಆತ್ಮಹತ್ಯೆಗೆ ಶರಣು; ಡೆತ್‌ನೋಟ್‌ನಲ್ಲಿ ಏನಿದೆ?

ರೈತ ಸಂಘದ ಕಚೇರಿಯ ಫ್ಯಾನಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ರಾಮಾಂಜಿನಪ್ಪ ಅವರ ಮೃತದೇಹ ಪತ್ತೆಯಾಗಿದ್ದು, ಸ್ಥಳದಲ್ಲಿ ಡೆತ್‌ನೋಟ್ ಸಹ ಪತ್ತೆಯಾಗಿದೆ.

ಚಿಕ್ಕಬಳ್ಳಾಪುರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ಮರಳುಕುಂಟೆ ರಾಮಾಂಜಿನಪ್ಪ ಅವರು ಮಂಗಳವಾರ ರೈತ ಸಂಘದ ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.

ಇಂದು ನಗರದ ವಾಪಸಂದ್ರ ಬಡಾವಣೆಯ ಹಾಲು ಉತ್ಪಾದಕರ ಸಹಕಾರ ಸಂಘದ(ಡೈರಿ) ಮೇಲ್ಭಾಗದಲ್ಲಿರುವ ರೈತ ಸಂಘದ ಕಚೇರಿಯ ಫ್ಯಾನಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ರಾಮಾಂಜಿನಪ್ಪ ಅವರ ಮೃತದೇಹ ಪತ್ತೆಯಾಗಿದ್ದು, ಸ್ಥಳದಲ್ಲಿ ಡೆತ್‌ನೋಟ್ ಸಹ ಪತ್ತೆಯಾಗಿದೆ.

ಸ್ಥಳದಲ್ಲಿ ಪತ್ತೆಯಾದ ಡೆತ್‌ನೋಟ್‌ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಜಮೀನು ಮಾರಾಟದ ಬಾಕಿ ಹಣ ಬಾರದೆ ಮಾನಸಿಕವಾಗಿ ನೊಂದು ಈ ನಿರ್ಧಾರ ಕೈಗೊಂಡಿರುವುದಾಗಿ ಬರೆಯಲಾಗಿದೆ.

ರಾಮಾಂಜಿನಪ್ಪ ಅವರು ತಮ್ಮ ಮಾಲೀಕತ್ವದ 35 ಗುಂಟೆ ಜಮೀನನ್ನು ರವೀಂದ್ರರೆಡ್ಡಿ ಎಂಬವರಿಗೆ ಒಟ್ಟು 77 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದರು.

ಜಮೀನು ಖರೀದಿಸಿದ್ದ ರವೀಂದ್ರರೆಡ್ಡಿ ಮುಂಗಡ ಹಾಗೂ ಕಂತುಗಳ ರೂಪದಲ್ಲಿ ಕೇವಲ 57.50 ಲಕ್ಷ ರೂ. ಮಾತ್ರ ಪಾವತಿಸಿದ್ದರು. ಉಳಿದ 19.50 ಲಕ್ಷ ರೂಪಾಯಿ ಬಾಕಿ ಹಣವನ್ನು ನೀಡದೆ ಕಳೆದ ಹತ್ತು ತಿಂಗಳುಗಳಿಂದ ಸತಾಯಿಸಿ, ಕಾಲಹರಣ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಆರ್ಥಿಕ ಸಂಕಷ್ಟ ಹಾಗೂ ಬರಬೇಕಾದ ಹಣ ಕೈಸೇರದೆ ತೀವ್ರ ಹತಾಶೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ರಾಮಾಂಜಿನಪ್ಪ ಪತ್ರದಲ್ಲಿ ಬರೆದಿದ್ದಾರೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಚಿಕ್ಕಬಳ್ಳಾಪುರ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಡೆತ್‌ನೋಟ್ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅನಂತ್ ನಾಗ್​ಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ; ಸ್ಟ್ಯಾಂಡಿಂಗ್ ಒವೇಶನ್; ರಕ್ಷಿತ್​ ಶೆಟ್ಟಿ ನಿರ್ಮಾಣದ 'ಮಿಥ್ಯ'ಗೆ 3 ರಾಷ್ಟ್ರ ಪ್ರಶಸ್ತಿ! Video

ಪಶ್ಚಿಮ ಬಂಗಾಳ ಪ್ರವೇಶಿಸಲು ಇಬ್ಬರು ಬಾಂಗ್ಲಾದೇಶಿ ಪ್ರಜೆಗಳಿಗೆ ಸಹಾಯ: ಭಾರತೀಯ ಯೋಧನ ಬಂಧನ

'ಮೋದಿ ಸ್ನೇಹಿತೆ ಅಲ್ವಾ, ಬುರ್ಖಾ ಎಂದರೆ ದ್ವೇಷ; ಅವರಿಗೆ ಬ್ರಾ, ಬಿಕಿನಿ ಇಷ್ಟವಿರಬಹುದು': ಮೆಲೋನಿ ವಿರುದ್ಧ ನಾಲಿಗೆ ಹರಿಬಿಟ್ಟ AIMIM ನಾಯಕ!

ಗಣೇಶೋತ್ಸವ ಸಂಭ್ರಮಾಚರಣೆಗೆ ಬಾಂಬೆ ಹೈಕೋರ್ಟ್ ಬ್ರೇಕ್​! ರಸ್ತೆಗಳಲ್ಲಿ ಪಟಾಕಿ ಹಚ್ಚುವಂತಿಲ್ಲ; ಸಂಪೂರ್ಣ ನಿಷೇಧ!

'ಶಾರುಖ್ ಖಾನ್‌ಗೆ ಏನಾಯಿತು?' ನಡೆಯಲು ಕಷ್ಟಪಡುತ್ತಿರುವ ಖ್ಯಾತ ನಟ, Video ವೈರಲ್, ಅಭಿಮಾನಿಗಳಲ್ಲಿ ಆತಂಕ!