ಡಿಕೆ.ಶಿವಕುಮಾರ್ 
ರಾಜ್ಯ

Brand Bengaluru ಎಂದರೆ ತೆರಿಗೆ ಹೆಸರಿನಲ್ಲಿ ಜನರ ಜೇಬಿಗೆ ಕನ್ನ ಹಾಕುವುದು, ನಿತ್ಯ ಕಿರುಕುಳ ನೀಡುವುದೇ..?

ತಂತ್ರಜ್ಞಾನದ ಹೆಸರಿನಲ್ಲಿ ಬೆಂಗಳೂರಿನ ನಾಗರಿಕರನ್ನು ಸುಲಿಗೆ ಮಾಡಲು ಹೊರಟಿರುವ ಈ ಕಾಂಗ್ರೆಸ್ ಸರ್ಕಾರಕ್ಕೆ ನಿಜಕ್ಕೂ ನಾಚಿಕೆಯಾಗಬೇಕು. ಜಿಪಿಎಸ್ ಹಾಗೂ ಡ್ರೋನ್ ಸರ್ವೇ ಹೆಸರಿನಲ್ಲಿ ಜಿಬಿಎ (ಗ್ರೇಟರ್ ಬೆಂಗಳೂರು ಪ್ರಾಧಿಕಾರ) ಅಧಿಕಾರಿಗಳು ಮಾಡಿರುವ ಎಡವಟ್ಟುಗಳು ಒಂದೆರಡಲ್ಲ.

ಬೆಂಗಳೂರು: ‘ಬ್ರ್ಯಾಂಡ್ ಬೆಂಗಳೂರು’ ಹೆಸರಿನಲ್ಲಿ ತೆರಿಗೆ ವಿಧಿಸುವ ಮೂಲಕ ಜನಸಾಮಾನ್ಯರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಮಂಗಳವಾರ ಆರೋಪಿಸಿದ್ದು, ಜಿಪಿಎಸ್ ಹಾಗೂ ಡ್ರೋನ್ ಸಮೀಕ್ಷೆಯ ನೆಪದಲ್ಲಿ ಆಸ್ತಿ ಅಳತೆಯಲ್ಲಿ ಎಡವಟ್ಟು ಮಾಡಿ, ಹೆಚ್ಚುವರಿ ತೆರಿಗೆ ಪಾವತಿಸುವಂತೆ ನಾಗರಿಕರಿಗೆ ನೋಟಿಸ್ ನೀಡಲಾಗುತ್ತಿರುವ ಕುರಿತು ಜಿಬಿಎ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ನಿಮ್ಮ ‘ಬ್ರಾಂಡ್ ಬೆಂಗಳೂರು’ ಎಂದರೆ ತೆರಿಗೆ ಹೆಸರಿನಲ್ಲಿ ಜನಸಾಮಾನ್ಯರ ಜೇಬಿಗೆ ಕನ್ನ ಹಾಕುವುದು ಮತ್ತು ನಿತ್ಯ ಕಿರುಕುಳ ನೀಡುವುದೇ? ಜಿಬಿಎ (GBA) ಮತ್ತು ಕಾಂಗ್ರೆಸ್ ಸರ್ಕಾರದ ಲೂಟಿ ಮತ್ತು ಎಡವಟ್ಟುಗಳಿಗೆ ಕೊನೆಯಿಲ್ಲವೇ? ಎಂದು ವಾಗ್ದಾಳಿ ನಡೆಸಿದ್ದಾರೆ.

ತಂತ್ರಜ್ಞಾನದ ಹೆಸರಿನಲ್ಲಿ ಬೆಂಗಳೂರಿನ ನಾಗರಿಕರನ್ನು ಸುಲಿಗೆ ಮಾಡಲು ಹೊರಟಿರುವ ಈ ಕಾಂಗ್ರೆಸ್ ಸರ್ಕಾರಕ್ಕೆ ನಿಜಕ್ಕೂ ನಾಚಿಕೆಯಾಗಬೇಕು. ಜಿಪಿಎಸ್ ಹಾಗೂ ಡ್ರೋನ್ ಸರ್ವೇ ಹೆಸರಿನಲ್ಲಿ ಜಿಬಿಎ (ಗ್ರೇಟರ್ ಬೆಂಗಳೂರು ಪ್ರಾಧಿಕಾರ) ಅಧಿಕಾರಿಗಳು ಮಾಡಿರುವ ಎಡವಟ್ಟುಗಳು ಒಂದೆರಡಲ್ಲ. ಜನರ ಆಸ್ತಿಯ ಅಳತೆಯನ್ನೇ ಬೇಕಾಬಿಟ್ಟಿ ಹೆಚ್ಚಿಸಿ, ದುಪ್ಪಟ್ಟು ತೆರಿಗೆ ಕಟ್ಟುವಂತೆ ಡಿಮ್ಯಾಂಡ್ ನೋಟಿಸ್ ನೀಡಿ ನಾಗರಿಕರಿಗೆ ನಿತ್ಯ ಕಿರುಕುಳ ನೀಡುತ್ತಿದ್ದಾರೆ.

ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರೇ, ನಿಮ್ಮ ‘ಬ್ರಾಂಡ್ ಬೆಂಗಳೂರು’ ಎಂದರೆ ತೆರಿಗೆ ಹೆಸರಿನಲ್ಲಿ ಜನಸಾಮಾನ್ಯರ ಜೇಬಿಗೆ ಕನ್ನ ಹಾಕುವುದು ಮತ್ತು ನಿತ್ಯ ಕಿರುಕುಳ ನೀಡುವುದೇ? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರೇ, 2,500 ಚದರ ಅಡಿ ಮನೆಗೆ 4,436 ಚದರ ಅಡಿ ಎಂದು ನಮೂದಿಸಿ, ಪಕ್ಕದ ಮನೆಯ ಫೋಟೋ ಲಗತ್ತಿಸಿ 92,000 ರೂ.ಗಳಿಗಿಂತ ಹೆಚ್ಚು ತೆರಿಗೆ ನೋಟಿಸ್ ಕಳುಹಿಸುವುದು ಯಾವ ಸೀಮೆ ಆಡಳಿತ ಸ್ವಾಮಿ?

ನ್ಯಾಯ ಕೇಳಲು ಹೋದರೆ ದಬ್ಬಾಳಿಕೆ, ತಪ್ಪು ನಿಮ್ಮ ಅಧಿಕಾರಿಗಳದ್ದು, ಆದರೆ ಮೇಲ್ಮನವಿ ಸಲ್ಲಿಸಲು 'ಮೊದಲು ಅರ್ಧದಷ್ಟು ತಪ್ಪಾದ ತೆರಿಗೆಯನ್ನು ಪಾವತಿಸಿ' ಎಂದು ಬಡ ಹಾಗೂ ಮಧ್ಯಮ ವರ್ಗದ ಜನರನ್ನು ಪೀಡಿಸುತ್ತಿರುವುದು ಅನ್ಯಾಯದ ಪರಮಾವಧಿ. ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುವ ಸೌಜನ್ಯವೂ ಇಲ್ಲದೆ, ಜನರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಿರುವ ಈ ತುಘಲಕ್ ಆಡಳಿತಕ್ಕೆ ಬೆಂಗಳೂರಿನ ಜನ ಶೀಘ್ರದಲ್ಲೇ ತಕ್ಕ ಪಾಠ ಕಲಿಸಲಿದ್ದಾರೆಂದು ಎಚ್ಚರಿಸಿದ್ದಾರೆ.

ಡ್ರೋನ್ ಸರ್ವೇ ಹೆಸರಿನಲ್ಲಿ ಜಿಬಿಎ ನೀಡುತ್ತಿರುವ ಈ ನಿರರ್ಥಕ, ಸುಲಿಗೆ ನೋಟಿಸ್ ಸ್ಥಗಿತಗೊಳಿಸಿ, ಸಾರ್ವಜನಿಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಚುನಾವಣಾ ಆಯೋಗದಲ್ಲಿ ಆಂತರಿಕ ಬಿಕ್ಕಟ್ಟು? ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸಿಡಿದೆದ್ದ ಇಬ್ಬರು ಆಯುಕ್ತರು! ಸುಪ್ರೀಂ ಮಧ್ಯಪ್ರವೇಶಕ್ಕೆ ವಿಪಕ್ಷಗಳ ಆಗ್ರಹ

ನವರಾತ್ರಿ ವೇಳೆ ಸಂಸತ್ತಿನ ವಿಶೇಷ ಅಧಿವೇಶನ ?: ಮಹಿಳಾ ಮೀಸಲಾತಿ- ಕ್ಷೇತ್ರ ಪುನರ್‌ವಿಂಗಡಣೆ ಚರ್ಚೆ ಸಾಧ್ಯತೆ

ಜಪಾನ್ ವಿರುದ್ಧ ಗೋಲ್ಡನ್ ಡಕ್; Unwanted Record ಸೃಷ್ಟಿಸಿದ ಅಭಿಷೇಕ್ ಶರ್ಮಾ: ಈ ದಾಖಲೆ ಮುರಿಯುವುದು ಯಾರಿಗೂ ಅಸಾಧ್ಯ!

'ಒಪ್ಪಂದಕ್ಕೆ ಬನ್ನಿ, ಇಲ್ಲವೇ ನರಕಕ್ಕೆ ಹೋಗಿ': ವಿಶ್ವಸಂಸ್ಥೆಯಲ್ಲಿ Iran ವಿರುದ್ಧ Trump ಗುಡುಗು; India-Pak ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಚಾರ..!

ಮುಳುವಾಯ್ತಾ ಓಲೈಕೆ ರಾಜಕಾರಣ?; ಯಾದವರು 7%, ಮುಸ್ಲಿಮರು 22%, ನಮ್ಮಲ್ಲೇ CM ಅಭರ್ಥಿ ಮಾಡಿ, ಅಖಿಲೇಶ್ ಯಾದವ್`ಗೆ ಮೌಲಾನಾ ಗಡುವು!