ಸಂಗ್ರಹ ಚಿತ್ರ 
ರಾಜ್ಯ

ಕೃಷ್ಣಾ ನೀರು ಬಿಡುಗಡೆಗೆ ಕರ್ನಾಟಕ ಸಮ್ಮತಿ; ಜುರಾಲಾ ಗೇಟ್ಸ್ ತೆರೆದ ತೆಲಂಗಾಣ, ಒಣಗುತ್ತಿದ್ದ 5.5 ಲಕ್ಷ ಎಕರೆ ಬೆಳೆಗೆ ಜೀವದಾನ..!

ಜುರಾಲಾ, ಭೀಮಾ, ನೆಟ್ಟಂಪಾಡು ಹಾಗೂ ಕೊಯಿಲ್‌ಸಾಗರ್ ಯೋಜನೆಗಳ ಅಡಿಯಲ್ಲಿ 5.5 ಲಕ್ಷ ಎಕರೆ ಪ್ರದೇಶದಲ್ಲಿರುವ ಬೆಳೆಗಳನ್ನು ರಕ್ಷಿಸಲು 30 ದಿನಗಳ ಕಾಲ ಪ್ರತಿದಿನ ನಿರಂತರವಾಗಿ 5,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ತೆಲಂಗಾಣ ನಿಯೋಗ ಕರ್ನಾಟಕವನ್ನು ಕೋರಿತ್ತು.

ಹೈದರಾಬಾದ್/ಬೆಂಗಳೂರು: ತೀವ್ರ ರಾಜಕೀಯ ಕಸರತ್ತು ಹಾಗೂ ರೈತರ ಪ್ರತಿಭಟನೆಗಳ ಬೆನ್ನಲ್ಲೇ, ಕೃಷ್ಣಾ ನದಿ ಜಲಾನಯನ ಪ್ರದೇಶದಿಂದ ನೀರು ಬಿಡಲು ಕರ್ನಾಟಕ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಇದರ ಬೆನ್ನಲ್ಲೇ ತೆಲಂಗಾಣದ ಅಧಿಕಾರಿಗಳು ಇಂದು (ಬುಧವಾರ) ಮುಂಜಾನೆ ಪ್ರಿಯದರ್ಶಿನಿ ಜುರಾಲಾ ಯೋಜನೆಯ ಗೇಟ್‌ಗಳನ್ನು ತೆರೆದು ರೈತರ ಜಮೀನುಗಳಿಗೆ ನೀರು ಹರಿಸಿದ್ದಾರೆ.

ಮಹಬೂಬ್‌ನಗರ ಜಿಲ್ಲೆಯಲ್ಲಿನ ಬೆಳೆಗಳನ್ನು ರಕ್ಷಿಸಲು ಕರ್ನಾಟಕದ ನಾರಾಯಣಪುರ ಯೋಜನೆಯಿಂದ ತೆಲಂಗಾಣಕ್ಕೆ ಕೃಷ್ಣಾ ನೀರು ಬಿಡುಗಡೆ ಮಾಡುವಂತೆ ಕೋರಿ ತೆಲಂಗಾಣ ಸಚಿವರ ನಿಯೋಗ ಮಂಗಳವಾರ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಮಾಡಿತ್ತು.

ಜುರಾಲಾ, ಭೀಮಾ, ನೆಟ್ಟಂಪಾಡು ಹಾಗೂ ಕೊಯಿಲ್‌ಸಾಗರ್ ಯೋಜನೆಗಳ ಅಡಿಯಲ್ಲಿ 5.5 ಲಕ್ಷ ಎಕರೆ ಪ್ರದೇಶದಲ್ಲಿರುವ ಬೆಳೆಗಳನ್ನು ರಕ್ಷಿಸಲು 30 ದಿನಗಳ ಕಾಲ ಪ್ರತಿದಿನ ನಿರಂತರವಾಗಿ 5,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ತೆಲಂಗಾಣ ನಿಯೋಗ ಕರ್ನಾಟಕವನ್ನು ಕೋರಿತ್ತು. ತೆಲಂಗಾಣ ಸಚಿವರ ಮನವಿಗೆ ಕರ್ನಾಟಕ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದರು.

ಇದರ ಬೆನ್ನಲ್ಲೇ ತೆಲಂಗಾಣ ಪಶುಸಂಗೋಪನಾ ಸಚಿವ ವಕಿತಿ ಶ್ರೀಹರಿ ಬುಧವಾರ ಅಧಿಕಾರಿಗಳಿಗೆ ಜುರಾಲಾ ಯೋಜನೆಯಡಿ ರೈತರಿಗೆ ನೀರು ಬಿಡುಗಡೆ ಮಾಡುವಂತೆ ಸೂಚಿಸಿದರು. ಬಳಿಕ ಅಧಿಕಾರಿಗಳು ಜಲಾಶಯದ ಗೇಟ್‌ಗಳನ್ನು ತೆರೆದು ನೀರು ಹರಿಸಿದರು.

ಶ್ರೀಹರಿ ಅವರು ಪ್ರವಾಸೋದ್ಯಮ ಸಚಿವ ಜುಪಲ್ಲಿ ಕೃಷ್ಣರಾವ್ ಅವರೊಂದಿಗೆ ಮಂಗಳವಾರ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಕೃಷ್ಣಾ ನೀರು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನವರಾತ್ರಿ ವೇಳೆ ಸಂಸತ್ತಿನ ವಿಶೇಷ ಅಧಿವೇಶನ ?: ಮಹಿಳಾ ಮೀಸಲಾತಿ- ಕ್ಷೇತ್ರ ಪುನರ್‌ವಿಂಗಡಣೆ ಚರ್ಚೆ ಸಾಧ್ಯತೆ

'ಒಪ್ಪಂದಕ್ಕೆ ಬನ್ನಿ, ಇಲ್ಲವೇ ನರಕಕ್ಕೆ ಹೋಗಿ': ವಿಶ್ವಸಂಸ್ಥೆಯಲ್ಲಿ Iran ವಿರುದ್ಧ Trump ಗುಡುಗು; India-Pak ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಚಾರ..!

ಹಬ್ಬದ ಸಂಭ್ರಮದ ನಡುವೆ ದುರಂತ; ಕೊಯೆಲ್ ನದಿಯಲ್ಲಿ ಮೂವರು ಅಪ್ರಾಪ್ತರು ಸೇರಿ 5 ಮಂದಿ ಜಲಸಮಾಧಿ!

ಆರ್ಥಿಕ ಸಂಕಷ್ಟದಲ್ಲಿ ರಾಜ್ಯ ಸರ್ಕಾರ: ಯಾವ ಯೋಜನೆ ಕೈಬಿಡಬೇಕು, ಯಾವುದು ಜಾರಿಗೆ ತರಬೇಕೆಂಬುದು ನನಗೆ ಗೊತ್ತು; ಹಣಕಾಸು ಇಲಾಖೆ ಸಲಹೆ ಬೆನ್ನಲ್ಲೇ ಡಿಕೆಶಿ ಸ್ಪಷ್ಟನೆ

ನ್ಯೂನತೆಗಳನ್ನು ಸರಿಪಡಿಸಲು ಕಸ್ತೂರಿರಂಗನ್ ವರದಿಯ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಭೌತಿಕ ಪರಿಶೀಲನೆ: ಸಿಎಂ ಶಿವಕುಮಾರ್