ಶರಣಗೌಡ ಕಂದಕೂರು  
ರಾಜ್ಯ

ನೀರಿಗಾಗಿ ಬೋರ್​ವೆಲ್ ಕೊರೆಸಿದ್ರೆ ಕೆಮಿಕಲ್ ಬರ್ತಿದೆ: ಟ್ರಾನ್ಸ್‌ಫಾರ್ಮರ್ ದುರಸ್ತಿ ಮಾಡಿಸಲು ಸರ್ಕಾರದ ಬಳಿ ಹಣವಿಲ್ಲ; ಶರಣಗೌಡ ಕಂದಕೂರು

ಭೀಮಾ ನದಿಯು ಹತ್ತಿರದಲ್ಲೇ ಇದ್ದರೂ ಮತ್ತು ಕುಡಿಯುವ ನೀರಿಗಾಗಿ ಹಲವಾರು ಜಿಲ್ಲೆಗಳು ಅದರ ಮೇಲೆ ಅವಲಂಬಿತವಾಗಿದ್ದರೂ, ತಮಗೆ ಸಾಕಷ್ಟು ನೀರು ಸಿಗುತ್ತಿಲ್ಲ ಎಂದು ಕಂದಕೂರು ಗಮನ ಸೆಳೆದರು.

ಬೆಂಗಳೂರು: ತಮ್ಮ ಕ್ಷೇತ್ರದ ಜನರು ಸುರಕ್ಷಿತ ಕುಡಿಯುವ ನೀರನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಗುರುಮಿಟ್ಕಲ್ ಶಾಸಕ ಶರಣಗೌಡ ಕಂದಕೂರು ಹೇಳಿದ್ದಾರೆ.

ಕೈಗಾರಿಕಾ ಪ್ರದೇಶವೊಂದರಿಂದ ಹೊರಸೂಸುವ ರಾಸಾಯನಿಕಗಳಿಂದ ಅಂತರ್ಜಲ ಕಲುಷಿತಗೊಂಡಿದೆ ಎಂದು ಅವರು ಆರೋಪಿಸಿದ್ದಾರೆ. ಬರಗಾಲದ ಕುರಿತ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಕಂದಕೂರು, ಯಾದಗಿರಿಯಲ್ಲಿ ಸುಮಾರು 650 ಆರ್‌ಒ (RO) ಘಟಕಗಳಿದ್ದು, ಅವುಗಳಲ್ಲಿ 450ಕ್ಕೂ ಹೆಚ್ಚು ಘಟಕಗಳು ಪ್ರಸ್ತುತ ದುರಸ್ತಿಯಲ್ಲಿವೆ ಎಂದು ತಿಳಿಸಿದರು.

ನನ್ನ ಕ್ಷೇತ್ರದಲ್ಲಿ ಕೈಗಾರಿಕಾ ಪ್ರದೇಶವೊಂದಿದೆ ಮತ್ತು ನಾವು ಎಲ್ಲಿ ಕೊಳವೆಬಾವಿಗಳನ್ನು ಕೊರೆದರೂ ಅಲ್ಲಿ ರಾಸಾಯನಿಕಗಳು ಕಂಡುಬರುತ್ತಿವೆ. ಈ ಪ್ರದೇಶದ ನೀರು ಕುಡಿಯಲು ಸುರಕ್ಷಿತವಲ್ಲ ಎಂದು ಕೃಷಿ ಇಲಾಖೆ ವರದಿ ಸಲ್ಲಿಸಿದೆ. ರಾಸಾಯನಿಕ ಕಾರ್ಖಾನೆಯಿಂದಾಗಿ ಮೂವರು ಮೃತಪಟ್ಟಿದ್ದಾರೆ. ಕಾರ್ಖಾನೆಯ ರಾಸಾಯನಿಕಗಳು ಹತ್ತಿ ಬೆಳೆಯ ಮೇಲೂ ಬಿದ್ದಿದ್ದು, ಇದರಿಂದ ಬೆಳೆ ಹಾನಿಯಾಗಿದೆ ಎಂದು ಅವರು ಹೇಳಿದರು.

ಭೀಮಾ ನದಿಯು ಹತ್ತಿರದಲ್ಲೇ ಇದ್ದರೂ ಮತ್ತು ಕುಡಿಯುವ ನೀರಿಗಾಗಿ ಹಲವಾರು ಜಿಲ್ಲೆಗಳು ಅದರ ಮೇಲೆ ಅವಲಂಬಿತವಾಗಿದ್ದರೂ, ತಮಗೆ ಸಾಕಷ್ಟು ನೀರು ಸಿಗುತ್ತಿಲ್ಲ ಎಂದು ಕಂದಕೂರು ಗಮನ ಸೆಳೆದರು.

ತಮ್ಮ ಕ್ಷೇತ್ರದ ಹೆಚ್ಚಿನ ಜನರು ಕೃಷಿ ಕಾರ್ಮಿಕರಾಗಿದ್ದು, ಮಳೆಯಿಲ್ಲದ ಸಮಯದಲ್ಲಿ ಕೆಲಸಕ್ಕಾಗಿ ಬೆಂಗಳೂರು, ಮುಂಬೈ, ಪುಣೆ ಮತ್ತು ಹೈದರಾಬಾದ್‌ನಂತಹ ನಗರಗಳಿಗೆ ವಲಸೆ ಹೋಗುವ ಅನಿವಾರ್ಯತೆ ಇದೆ ಎಂದು ಶಾಸಕರು ಹೇಳಿದರು. ತಿಂಗಳಿಗೆ 10,000 ರಿಂದ 15,000 ರೂಪಾಯಿ ವೇತನ ನೀಡುವ ಕೆಲಸಗಳನ್ನು ಹುಡುಕಿಕೊಂಡು ಅವರು ವಲಸೆ ಹೋಗುತ್ತಾರೆ. ಕೆಲಸ ಸಿಗದಿದ್ದರೆ, ಕೆಲವರು ತೀವ್ರ ನಿರ್ಧಾರಗಳನ್ನೂ (ಆತ್ಮಹತ್ಯೆಯಂತಹ) ತೆಗೆದುಕೊಳ್ಳುತ್ತಾರೆ," ಎಂದು ಮಾಹಿತಿ ನೀಡಿದರು.

ಆಗಸ್ಟ್ ತಿಂಗಳಲ್ಲಿ ಉದ್ಯೋಗ ಅರಸಿ ಪ್ರತಿದಿನ ಸರಾಸರಿ 200 ರಿಂದ 250 ಜನರು ಈ ನಗರಗಳಿಗೆ ಪ್ರಯಾಣಿಸುತ್ತಿದ್ದರು ಎಂಬುದನ್ನು ರೈಲು ನಿಲ್ದಾಣದ ದತ್ತಾಂಶದಿಂದ ತಿಳಿದುಕೊಂಡಿರುವುದಾಗಿ ಕಂದಕೂರು ಹೇಳಿದರು. ಈಗ ಆ ಸಂಖ್ಯೆ ದಿನಕ್ಕೆ ಸುಮಾರು 600 ಕ್ಕೆ ಏರಿದೆ," ಎಂದು ಅವರು ಹೇಳಿದರು.

ಟ್ರಾನ್ಸ್‌ಫಾರ್ಮರ್ ದುರಸ್ತಿ ಮಾಡುವವರಿಗೆ ಹಣ ಪಾವತಿಸಲು ರಾಜ್ಯ ಸರ್ಕಾರದ ಬಳಿ ಸಾಕಷ್ಟು ಅನುದಾನವಿಲ್ಲ, ಇದರಿಂದಾಗಿ ರೈತರು ಟ್ರಾನ್ಸ್‌ಫಾರ್ಮರ್ ದುರಸ್ತಿಗಾಗಿ 25 ದಿನಗಳವರೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದೂ ಕಂದಕೂರು ಆರೋಪಿಸಿದರು. ಇದರಿಂದ ರೈತರಲ್ಲಿ ಆತಂಕ ಉಂಟಾಗಿದೆ. ನಮ್ಮ ರೈತರಿಗೆ ಏಳು ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಕೆಯಾಗಬೇಕಿದೆ, ಆದರೆ ಆಗಾಗ್ಗೆ ವಿದ್ಯುತ್ ಕಡಿತವಾಗುತ್ತಿದೆ," ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಕ್ಕಿಂನಲ್ಲಿ ವರುಣನ ಆರ್ಭಟ: Rimbi ಗ್ರಾಮದಲ್ಲಿ ಭೀಕರ ಭೂಕುಸಿತ; ಹಲವು ಮನೆಗಳು, ಸರ್ಕಾರಿ ವಸತಿ ಗೃಹಗಳು ಧ್ವಂಸ..!

Delhi SIR: ಕ್ಷೇತ್ರ ಪರಿಶೀಲನೆ ಬಳಿಕ ಎಲ್.ಕೆ. ಅಡ್ವಾಣಿ, ಜಗದೀಪ್ ಧನಕರ್, ಜೈಶಂಕರ್ ಸೇರಿ ಹಲವು ಗಣ್ಯರ Voter ID ಗೊಂದಲಕ್ಕೆ ತೆರೆ!

ಸಂಘರ್ಷ ಅಂತ್ಯಕ್ಕೆ ಇರಾನ್ 7 ದಿನಗಳ ಯೋಜನೆ ಪ್ರಸ್ತಾಪ: ಹಾರ್ಮುಜ್ ಜಲಸಂಧಿ ಮತ್ತೆ ಮುಕ್ತ

ವಿಶ್ವಸಂಸ್ಥೆಯಲ್ಲಿ Pak ಪ್ರಧಾನಿಗೆ ಮುಖಭಂಗ: ಭಯೋತ್ಪಾದನೆ ಕುರಿತ ಪ್ರಶ್ನೆ ಎದುರಿಸಲಾಗದೆ ತಲೆತಗ್ಗಿಸಿ ನಡೆದ ಶೆಹಬಾಜ್ ಷರೀಫ್..! Video

ವಿಶ್ವಸಂಸ್ಥೆಯಲ್ಲಿ ನೆತನ್ಯಾಹುಗೆ ಬಿಗ್ ಶಾಕ್: ಭಾಷಣ ಬಹಿಷ್ಕರಿಸಿ ಹೊರನಡೆದ ಹತ್ತಾರು ದೇಶಗಳ ಪ್ರತಿನಿಧಿಗಳು,"ನೈತಿಕ ಹೇಡಿಗಳು" ಎಂದು ಕರೆದ ಇಸ್ರೇಲ್ ಪ್ರಧಾನಿ..!