ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿ ಮರ ಕಡಿದಿರುವ ಚಿತ್ರ 
ರಾಜ್ಯ

ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ಯೋಜನೆಗಾಗಿ ಮರಗಳಿಗೆ ಕೊಡಲಿ: ಪರಿಸರವಾದಿಗಳಿಂದ ಕಾನೂನು ಹೋರಾಟ!

8.61 ಎಕರೆ ವಿಸ್ತೀರ್ಣದ ರೈಲ್ವೆ ಆಸ್ತಿಯನ್ನು ಐಟಿ/ಬಿಟಿ (IT/BT) ಯೋಜನೆಗಾಗಿ 60 ವರ್ಷಗಳ ಅವಧಿಗೆ 'ಬಾಗ್ಮನೆ ಟೆಕ್ಸ್‌ವರ್ತ್' (Bagmane Texworth) ಸಂಸ್ಥೆಗೆ ಗುತ್ತಿಗೆ ನೀಡಲು ಪ್ರಸ್ತಾಪಿಸಲಾಗಿದೆ

ಬೆಂಗಳೂರು: ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ಕಾಲೋನಿಯಲ್ಲಿ ನೂರಾರು ಮರಗಳನ್ನು ಕಡಿಯುವ ಪ್ರಸ್ತಾವನೆಯ ವಿರುದ್ಧ ಪರಿಸರ ಕಾರ್ಯಕರ್ತರು ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ. ಮಂಗಳವಾರ ಹೈಕೋರ್ಟ್ ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿದೆ. ಈಗಾಗಲೇ ಹಸಿರು ಪ್ರದೇಶಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ನಗರದಲ್ಲಿ ಇಂತಹ ನಷ್ಟವನ್ನು ಸರಿದೂಗಿಸುವುದು ಕಷ್ಟಕರ ಎಂದು ಅವರು ಹೇಳಿದ್ದಾರೆ.

'ಪರಿಸರಕ್ಕಾಗಿ ನಾವು' ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮ ಗೌಡ ಅವರ ಪ್ರಕಾರ, ಈ ವಿಷಯವು ಕೇವಲ ಕಡಿಯಬಹುದಾದ ಮರಗಳ ಸಂಖ್ಯೆಗೆ ಸೀಮಿತವಾಗಿಲ್ಲ. ಮೆಟ್ರೋ ಮಾರ್ಗ, ರಸ್ತೆ, ಸೇತುವೆ ಅಥವಾ ಇತರ ಯಾವುದೇ ಅಗತ್ಯ ಮೂಲಸೌಕರ್ಯ ಯೋಜನೆಗೆ ಭೂಮಿಯ ಅಗತ್ಯವಿದ್ದರೆ, ಅದರಲ್ಲಿ ದೊಡ್ಡ ಮಟ್ಟದ ಸಾರ್ವಜನಿಕ ಹಿತಾಸಕ್ತಿ ಇರುತ್ತಿತ್ತು. ಆದರೆ ಇದು ರೈಲ್ವೆ ಭೂಮಿಯನ್ನು ವಾಣಿಜ್ಯೀಕರಣಗೊಳಿಸುವ ಯೋಜನೆಯಾಗಿದೆ ಎಂದು ಅವರು ಹೇಳಿದರು.

8.61 ಎಕರೆ ವಿಸ್ತೀರ್ಣದ ರೈಲ್ವೆ ಆಸ್ತಿಯನ್ನು ಐಟಿ/ಬಿಟಿ (IT/BT) ಯೋಜನೆಗಾಗಿ 60 ವರ್ಷಗಳ ಅವಧಿಗೆ 'ಬಾಗ್ಮನೆ ಟೆಕ್ಸ್‌ವರ್ತ್' (Bagmane Texworth) ಸಂಸ್ಥೆಗೆ ಗುತ್ತಿಗೆ ನೀಡಲು ಪ್ರಸ್ತಾಪಿಸಲಾಗಿದೆ. ಈ ಆಸ್ತಿಯಿಂದ ರೈಲ್ವೆ ಇಲಾಖೆಯು ಸುಮಾರು 300 ಕೋಟಿ ರೂ. ಆದಾಯ ನಿರೀಕ್ಷಿಸುತ್ತಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

ಇಂತಹ ನಿರ್ಮಾಣ ಕಾರ್ಯಗಳನ್ನು ಬೇರೆಡೆ ಕೈಗೊಳ್ಳಲು ಸಾಧ್ಯವಿದ್ದಾಗ, ನಗರದ ಮಧ್ಯಭಾಗದಲ್ಲಿರುವ ಹಸಿರು ಪ್ರದೇಶವನ್ನು ವಾಣಿಜ್ಯ ಅಭಿವೃದ್ಧಿಗಾಗಿ ಏಕೆ ಬಳಸಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

ರೈಲ್ವೆ ಭೂಮಿ ಅಭಿವೃದ್ಧಿ ಪ್ರಾಧಿಕಾರವು 368 ಮರಗಳನ್ನು ಕಡಿಯಲು ಅನುಮತಿ ಕೋರಿದ ನಂತರ ಮರಗಳ ರಕ್ಷಣೆಗಾಗಿ ಈ ಹೋರಾಟ ಆರಂಭವಾಯಿತು. ನಂತರ ಈ ಆಸ್ತಿಯನ್ನು 'ಜೀವ ವೈವಿಧ್ಯತೆಯ ಪರಂಪರೆ ತಾಣ' (Biodiversity Heritage Site) ಎಂದು ಘೋಷಿಸಲಾಯಿತಾದರೂ, ಡಿಸೆಂಬರ್‌ನಲ್ಲಿ ಆ ಅಧಿಸೂಚನೆಯನ್ನು ಹಿಂಪಡೆಯಲಾಯಿತು.

ಅರ್ಜಿದಾರರು ಈ ಹಿಂಪಡೆಯುವಿಕೆಯ ಕ್ರಮವನ್ನು ಪ್ರಶ್ನಿಸಿದ್ದಾರೆ. "ಮರಗಳಿಗೆ ಹಾನಿಯಾಗದಂತೆ ತಡೆಯುವ ಮಧ್ಯಂತರ ಆದೇಶವನ್ನೂ ಹೈಕೋರ್ಟ್ ಡಿಸೆಂಬರ್‌ನಲ್ಲಿ ಹೊರಡಿಸಿತ್ತು ಎಂದು ಗೌಡ ಹೇಳಿದರು.

ಅಧಿಕಾರಿಯೊಬ್ಬರು ನಡೆಸಿದ ಪರಿಶೀಲನೆಯನ್ನುಅರ್ಜಿದಾರರು ಈಗ ಉಲ್ಲೇಖಿಸಿದ್ದು, ಆ ಸ್ಥಳದಲ್ಲಿ 397 ಮರಗಳಿರುವುದು ದಾಖಲಾಗಿದೆ. 228 ಆರೋಗ್ಯಕರ ಮರಗಳನ್ನು ಕಡಿಯಲು ಮತ್ತು ಇತರ 23 ಮರಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Hormuz ಜಲಸಂಧಿಯಲ್ಲಿ ಅಮೆರಿಕಕ್ಕೆ ಬಿಗ್ ಶಾಕ್: ಯುಎಸ್ ಮಿಲಿಟರಿಯ ಮತ್ತೊಂದು ಅತ್ಯಾಧುನಿಕ ‘Kingfish’ Drone Iran ವಶಕ್ಕೆ..!

ಮಧ್ಯಪ್ರಾಚ್ಯ ಸಂಘರ್ಷ: ಮಧ್ಯಾವಧಿ ಚುನಾವಣೆಗೂ ಮುನ್ನ ಇರಾನ್ ಮೇಲೆ ಅಮೆರಿಕ ದಾಳಿ?: ಟ್ರಂಪ್ ಸ್ಫೋಟಕ ಹೇಳಿಕೆ..!

ಗ್ರಾಹಕರಿಗೆ ಗುಡ್‌ನ್ಯೂಸ್: ಪ್ರಸ್ತಾವಿತ ಬ್ಯಾಂಕ್ ಮುಷ್ಕರ ಮುಂದೂಡಿಕೆ, IBA- UFBU ಮಾತುಕತೆ ಬಳಿಕ ಮಹತ್ವದ ನಿರ್ಧಾರ

BDA 100ನೇ 'ಓಪನ್ ಹೌಸ್' ಸಭೆ: ನಿವಾಸಿಗಳಿಂದ ಉತ್ತಮ ಪ್ರತಿಕ್ರಿಯೆ!

LPU ಕ್ಯಾಂಪಸ್‌ನಲ್ಲಿ ಮತ್ತೆ ಹಿಂಸಾಚಾರ: ಪೊಲೀಸ್ ವಾಹನಗಳಿಗೆ ಬೆಂಕಿ, ಪೊಲೀಸರಿಗೆ ಗಾಯ, ತನಿಖೆಗೆ SIT ರಚನೆ!