ಸಾಂದರ್ಭಿಕ ಚಿತ್ರ 
ರಾಜ್ಯ

'ಹುಟ್ಟುತ್ತಾ ಅಣ್ಣ-ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು': ಹಾಸನದಲ್ಲಿ ಆಸ್ತಿಗಾಗಿ ಅಣ್ಣನಿಂದಲೇ ತಮ್ಮನ ಬರ್ಬರ ಹತ್ಯೆ!

ಕೊಲೆಯಾ ವ್ಯಕ್ತಿಯನ್ನು ರಘು ಎಂದು ಗುರುತಿಸಲಾಗಿದ್ದು, ಆತನ ಅಣ್ಣ ದೇವರಾಜ್ ಚಾಕುವಿನಿಂದ ಮನಬಂದಂತೆ ಇರಿದು ತಮ್ಮನನ್ನು ಹತ್ಯೆ ಮಾಡಿದ್ದಾನೆ.

ಹಾಸನ: ಚಿಕ್ಕವರಿದ್ದಾಗ ಪ್ರೀತಿ-ವಿಶ್ವಾಸದಿಂದ, ಅನ್ಯೂನ್ಯವಾಗಿರುವ ಅಣ್ಣ-ತಮ್ಮಂದಿರು ಬೆಳೆಯುತ್ತಾ ಹಣಕಾಸು ಅಥವಾ ಸ್ವಾರ್ಥದ ಕಾರಣಕ್ಕಾಗಿ ಅದೇ ಅಣ್ಣ-ತಮ್ಮಂದಿರು ಪರಸ್ಪರ ಶತ್ರುಗಳಾಗುತ್ತಾರೆ ಎಂಬ ಗಾದೆ ಮಾತಿದೆ. ಈ ಮಾತಿನಂತೆ ಹಾಸನದಲ್ಲಿ ಆಸ್ತಿಗಾಗಿ ಅಣ್ಣನೇ ತನ್ನ ತಮ್ಮನನ್ನು ಬರ್ಬರ ಹತ್ಯೆ ಮಾಡಿದ್ದಾನೆ.

ಹಾಸನ ಜಿಲ್ಲೆಯ ಬೇಲೂರಿನಲ್ಲಿ ಆಸ್ತಿ ವಿಚಾರ ಹಾಗೂ ಪಡಿತರ ವಿಚಾರವಾಗಿ ಅಣ್ಣ-ತಮ್ಮನ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ.

ಕೊಲೆಯಾ ವ್ಯಕ್ತಿಯನ್ನು ರಘು ಎಂದು ಗುರುತಿಸಲಾಗಿದ್ದು, ಆತನ ಅಣ್ಣ ದೇವರಾಜ್ ಚಾಕುವಿನಿಂದ ಮನಬಂದಂತೆ ಇರಿದು ತಮ್ಮನನ್ನು ಹತ್ಯೆ ಮಾಡಿದ್ದಾನೆ.

ಕಳೆದ ವಾರ ಜಮೀನಿನಲ್ಲಿ ಅಣ್ಣ-ತಮ್ಮನ ನಡುವೆ ಆಸ್ತಿ ವಿಚಾರವಾಗಿ ಜಗಳ ಶುರುವಾಗಿ ಗಲಾಟೆ ವಿಕೋಪಕ್ಕೆ ತಿರುಗಿದೆ. ಈ ವೇಳೆ ಕೋಪಗೊಂಡ ಅಣ್ಣ ದೇವರಜ್, ಚಾಕುವಿನಿಂದ ತಮ್ಮನಿಗೆ ಮನಬಂದಂತೆ ಇರಿದಿದ್ದಾನೆ.

ಗಂಭೀರವಾಗಿ ಗಾಯಗೊಂಡಿದ್ದ ರಘುನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ರಘು ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಕೊನೆಯುಸಿರೆಳೆದಿದ್ದಾನೆ. ಘಟಾನ ಅಸ್ಥಳಕ್ಕೆ ಬೇಲೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರದ 3 ತಂಡ: ಜಿ ಪರಮೇಶ್ವರ್

ರೂ. 2,000ಕ್ಕಿಂತ ಹೆಚ್ಚಿನ UPI ವಹಿವಾಟಿಗೆ ಶುಲ್ಕ: ತಡೆ ನೀಡಲು ಸುಪ್ರೀಂಕೋರ್ಟ್ ನಕಾರ, ಕೇಂದ್ರ ಸರ್ಕಾರಕ್ಕೆ ನೋಟಿಸ್..!

ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನ: ಸಂತೋಷದಿಂದ ಸ್ವೀಕರಿಸಿದ ಸ್ವಾಮೀಜಿ!

ಒಂದೇ ದಿನ ಆರು ಭರ್ಜರಿ ಶತಕ: ಕ್ರಿಕೆಟ್ ಇತಿಹಾಸದಲ್ಲೇ ಇದೊಂದು ಐತಿಹಾಸಿಕ ದಾಖಲೆ!

2028ಕ್ಕೆ ನಾನೂ CM ಅಭ್ಯರ್ಥಿ ಅನ್ನುತ್ತೀನಿ, ಆದ್ರೆ....: ಸಂಚಲನ ಸೃಷ್ಟಿಸಿದ ಪ್ರದೀಪ್‌ ಈಶ್ವರ್ ಹೇಳಿಕೆ!