ಮಹಿಳೆಯರು-ಆಟೋ ಚಾಲಕನ ನಡುವೆ ಗಲಾಟೆ 
ರಾಜ್ಯ

ರೈಡ್ ಕ್ಯಾನ್ಸಲ್ ವಿಚಾರಕ್ಕೆ ರಸ್ತೆಯಲ್ಲೇ ಜಗಳ: ಆಟೋ ಚಾಲಕ, ಮಹಿಳೆಯರ ನಡುವೆ ಗಲಾಟೆ; ಪರಸ್ಪರ ಏಟು; Video

ರೈಡ್ ಕ್ಯಾನ್ಸಲ್ ವಿಚಾರವಾಗಿ ಇಬ್ಬರು ಮಹಿಳೆಯರು ಹಾಗೂ ಆಟೋ ಚಾಲಕನ ನಡುವೆ ನಡೆದ ಹೊಡೆದಾಟದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಆಟೋ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು: ಬೆಂಗಳೂರಿನಲ್ಲಿ ದಿನಕ್ಕೊಂದು ರೋಡ್ ರೇಜ್ ಪ್ರಕರಣ ದಾಖಲಾಗುತ್ತಿದ್ದು, ಈ ಪಟ್ಟಿಗೆ ಇದೀಗ ಹೊಸದೊಂದು ಪ್ರಕರಣ ಸೇರ್ಪಡೆಯಾಗಿದ್ದು, ಆಟೋ ಚಾಲಕ ಮತ್ತು ಮಹಿಳೆಯರ ನಡುವಿನ ಗಲಾಟೆಯ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಹೌದು.. ರೈಡ್ ಕ್ಯಾನ್ಸಲ್ ವಿಚಾರವಾಗಿ ಇಬ್ಬರು ಮಹಿಳೆಯರು ಹಾಗೂ ಆಟೋ ಚಾಲಕನ ನಡುವೆ ನಡೆದ ಹೊಡೆದಾಟದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಆಟೋ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಯನ್ನು ಬೆಂಗಳೂರಿನ ನಿವಾಸಿ ಚೇತನ್ ಕುಮಾರ್ ಎಂದು ಗುರುತಿಸಲಾಗಿದ್ದು, ಸೋಮವಾರ ಮಧ್ಯಾಹ್ನ HSR ಲೇಔಟ್‌ನ 3ನೇ ಸೆಕ್ಟರ್‌ನಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿಯೊಬ್ಬರು ಈ ಗಲಾಟೆಯ ವಿಡಿಯೋವನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಪ್ರಸ್ತುತ ವೈರಲ್ ಆಗಿರುವ ವಿಡಿಯೊದಲ್ಲಿ, ಮಾತಿನ ಚಕಮಕಿ ಬಳಿಕ ಇಬ್ಬರು ಮಹಿಳೆಯರು ಹಾಗೂ ಆಟೋ ಚಾಲಕ ಪರಸ್ಪರ ಹೊಡೆದಾಡಿಕೊಂಡು, ಒಬ್ಬರನ್ನೊಬ್ಬರು ತಳ್ಳುತ್ತಿರುವ ದೃಶ್ಯ ಕಂಡುಬಂದಿದೆ.

ರೈಡ್ ಕ್ಯಾನ್ಸಲ್ ವಿಚಾರಕ್ಕೆ ಗಲಾಟೆ

ಪೊಲೀಸರ ಪ್ರಕಾರ, ಇಬ್ಬರು ಮಹಿಳೆಯರು ಆ್ಯಪ್ ಆಧಾರಿತ ರೈಡ್ ಹೈಲಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಆಟೋವನ್ನು ಹಲವು ಬಾರಿ ಬುಕ್ ಮಾಡಿ, ಬಳಿಕ ರೈಡ್ ಕ್ಯಾನ್ಸಲ್ ಮಾಡಿದ್ದರು. ನಂತರ ಮತ್ತೊಮ್ಮೆ ಅದೇ ಆಟೋವನ್ನು ಬುಕ್ ಮಾಡಿದ್ದರು ಎನ್ನಲಾಗಿದೆ.

ಈ ವೇಳೆ ಆಟೋ ಪ್ರಯಾಣದ ಶುಲ್ಕದ ವಿಚಾರವಾಗಿ ಚಾಲಕ ಹಾಗೂ ಮಹಿಳೆಯರ ನಡುವೆ ವಾಗ್ವಾದ ನಡೆದಿದೆ. ಮಾತಿನ ಚಕಮಕಿ ತೀವ್ರಗೊಂಡು, ರಸ್ತೆಯಲ್ಲೇ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ಮತ್ತೊಬ್ಬ ಮಹಿಳೆ ಮಧ್ಯಪ್ರವೇಶಿಸಿ ಇಬ್ಬರು ಮಹಿಳೆಯರು ಹಾಗೂ ಚಾಲಕನನ್ನು ಬೇರ್ಪಡಿಸಿದ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.

ಚಾಲಕನ ಬಂಧನ

ಘಟನೆಗೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚೇತನ್ ಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬರದಿಂದ ಕೆಂಗೆಟ್ಟ ಕರ್ನಾಟಕಕ್ಕೆ ಕೇಂದ್ರದ ನೆರವಿನ ನಿರೀಕ್ಷೆ; 'ಅ.3ರಿಂದ ಕೇಂದ್ರ ತಂಡದ ಸಮೀಕ್ಷೆ': ಎಚ್ ಡಿ ಕುಮಾರಸ್ವಾಮಿ

ಕಥುವಾದಲ್ಲಿ ಘೋರ ಕೃತ್ಯ: ಓರ್ವ ಅಧಿಕಾರಿ ಸೇರಿ ನಾಲ್ವರು ಸಹೋದ್ಯೋಗಿಗಳನ್ನು ಗುಂಡಿಕ್ಕಿ ಕೊಂದ CISF ಯೋಧ!

ಜೀವದ ಹಂಗು ತೊರೆದು, ಕಾರಿನ ಮೇಲೆ ಹತ್ತಿ ಗುಟ್ಕಾ ಸ್ಮಗ್ಲಿಂಗ್ ತಡೆದ ಪೊಲೀಸ್ ಪೇದೆ ಸನ್ಮಾನಿಸಿದ ಸಿಎಂ ವಿಜಯ್! Video

Asian Games 2026: 4x400m ರಿಲೇಯಲ್ಲಿ ಕನ್ನಡತಿ ಪೂವಮ್ಮ ಒಳಗೊಂಡ ಮಹಿಳಾ ತಂಡಕ್ಕೆ ಚಿನ್ನ!

ಉಪ್ಪು 'ಆರೋಗ್ಯಕ್ಕೆ ಹಾನಿಕರ': ಸಾಲ್ಟ್ ಸೇವನೆ ಕುರಿತು ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ; ದುಬಾರಿ ಆದ್ರೂ ಚಿಂತೆ ಇಲ್ಲ ಎಂದ ಸಚಿವರು!