ಸಾಂದರ್ಭಿಕ ಚಿತ್ರ 
ರಾಜ್ಯ

ಲಗ್ಗೆರೆಯಲ್ಲಿ ವ್ಯಕ್ತಿ ಆತ್ಮಹತ್ಯೆ; ಕೊಲೆ ಎಂದು ಆರೋಪಿಸಿದ ಕುಟುಂಬಸ್ಥರು!

ಮೃತರನ್ನು ಹಾಸನ ಮೂಲದ ನವೀನ್ ಎಂದು ಗುರುತಿಸಲಾಗಿದೆ. ಅವರು ತಮ್ಮ ಪತ್ನಿ ಕವಿತಾ ಜೊತೆಗೆ ಲಗ್ಗೆರೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಬೆಂಗಳೂರು: ಪತ್ನಿಯಿಂದ ಹಲ್ಲೆಗೊಳಗಾದ ನಂತರ 46 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಲಗ್ಗೆರೆಯಲ್ಲಿ ಶನಿವಾರ ನಡೆದಿದೆ.

ಮೃತರನ್ನು ಹಾಸನ ಮೂಲದ ನವೀನ್ ಎಂದು ಗುರುತಿಸಲಾಗಿದೆ. ಅವರು ತಮ್ಮ ಪತ್ನಿ ಕವಿತಾ ಜೊತೆಗೆ ಲಗ್ಗೆರೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈ ಕಠಿಣ ನಿರ್ಧಾರ ತೆಗೆದುಕೊಳ್ಳುವ ಮುನ್ನ, ನವೀನ್ ತಮ್ಮ ತಾಯಿಗೆ ಕರೆ ಮಾಡಿ, ಪತ್ನಿ ತನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ಹೇಳಿಕೊಂಡಿರುವುದಾಗಿ ತಿಳಿದುಬಂದಿದೆ.

ಈ ಮಧ್ಯೆ ನವೀನ್ ಅವರ ದೇಹದ ಮೇಲಿದ್ದ ಗಾಯದ ಗುರುತುಗಳನ್ನು ಗಮನಿಸಿದ ಕುಟುಂಬಸ್ಥರು, ಆತನನ್ನು ಕವಿತಾ ಕೊಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಈ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ಪೊಲೀಸರ ಪ್ರಕಾರ, ನವೀನ್ 15 ವರ್ಷಗಳ ಹಿಂದೆ ಕವಿತಾ ಅವರನ್ನು ವಿವಾಹವಾಗಿದ್ದರು ಮತ್ತು ಕೆಲಸದ ಹುಡುಕಾಟದಲ್ಲಿ ಸುಮಾರು ಎಂಟು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ನವೀನ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಆಗಾಗ್ಗೆ ಕುಡಿದು ಬಂದು ಮನೆಗೆ ಬಂದು ಕವಿತಾ ಅವರೊಂದಿಗೆ ಜಗಳವಾಡುತ್ತಿದ್ದರು ಮತ್ತು ಅವರಿಗೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸುತ್ತಿದ್ದರು ಎಂದು ಕವಿತಾ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಮಗು ಹುಟ್ಟಿದ್ದ ನಂತರ ಅವರ ಸಂಬಂಧದಲ್ಲಿ ಬಿರುಕು ಮೂಡಿತ್ತು. ಶನಿವಾರ ರಾತ್ರಿ ನವೀನ್ ಮದ್ಯಪಾನ ಮಾಡಿ ಮನೆಗೆ ಬಂದು ಕವಿತಾ ಅವರೊಂದಿಗೆ ಜಗಳವಾಡಿದರು. ಆಗ ಕವಿತಾ ಅವರ ಮೇಲೆ ಹಲ್ಲೆಗೆ ಮುಂದಾದಾಗ, ಕವಿತಾ ಪ್ರತಿ-ಹಲ್ಲೆ ನಡೆಸಿದ್ದಾರೆ. ಇದರಿಂದ ನವೀನ್ ಅವರ ತಲೆಗೆ ಗಾಯವಾಗಿದೆ. ಬಳಿಕ ಕವಿತಾ ಮನೆಯನ್ನು ಹೊರಗಿನಿಂದ ಬೀಗ ಹಾಕಿ ಅಲ್ಲಿಂದ ಹೊರಟುಹೋಗಿದ್ದಾರೆ. ನಂತರ ನವೀನ್ ತಮ್ಮ ತಾಯಿಗೆ ಕರೆ ಮಾಡಿ, ಪತ್ನಿ ತನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ರಾತ್ರಿ ಸುಮಾರು 10 ಗಂಟೆಗೆ ಅವರು ಮನೆಯಲ್ಲಿನ ಸೀಲಿಂಗ್ ಹುಕ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕವಿತಾ ಮನೆಗೆ ಮರಳಿದಾಗ ನವೀನ್ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದರು. ನೆರೆಹೊರೆಯವರ ಸಹಾಯದಿಂದ ಅವರು ನವೀನ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಆದರೆ ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

BJP ಸೋಲಿಸಲು ಮಾಸ್ಟರ್‌ ಪ್ಲ್ಯಾನ್; 84 ಕ್ಷೇತ್ರಗಳ ಮೇಲೆ ಕಾಂಗ್ರೆಸ್‌ ಕಣ್ಣು, ನಾಳೆಯಿಂದ ‘Bharat Jodo-2’ ಅಭಿಯಾನ ಆರಂಭ..!

ಮುಂಗಾರು ಮುಗಿಯುತ್ತಿದ್ದರೂ ಇನ್ನೂ ಕರುಣೆ ತೋರದ ವರುಣ: ಕಾವೇರಿ ಜಲಾಶಯಗಳಲ್ಲಿ ಅರ್ಧದಷ್ಟು ಮಾತ್ರ ನೀರು!

ಗ್ಯಾರಂಟಿ ಯೋಜನೆಗಳಿಗೆ ಭಾರೀ ವೆಚ್ಚ: ‘ಆರ್ಥಿಕ ಹೊರೆ ಇದೆ, ಆದರೂ ನಿಭಾಯಿಸುತ್ತೇವೆ’; ರಾಜ್ಯ ಸರ್ಕಾರ..!

ಮೇಕೆದಾಟು ಯೋಜನೆಗೆ ಡಿಕೆಶಿ ಬಿಗಿ ಪಟ್ಟು; ಕೇಂದ್ರದ ಮಧ್ಯಸ್ಥಿಕೆಗೆ ಒತ್ತಾಯ, ಸ್ಥಳ ಪರಿಶೀಲನೆಗೆ ತಮಿಳುನಾಡು ಸರ್ಕಾರಕ್ಕೆ ಮುಕ್ತ ಆಹ್ವಾನ..!

ಕರ್ನಾಟಕದ ಕಾಳಜಿ ಪರಿಗಣಿಸಿ, ಸಿಝಡ್‌ಎಂಪಿ-ಇಎಸ್‌ಎ ಗೊಂದಲ ಬಗೆಹರಿಸಿ; ಕೇಂದ್ರ ಸರ್ಕಾರಕ್ಕೆ ಸಿಎಂ ಡಿಕೆ.ಶಿವಕುಮಾರ್ ಮನವಿ